ಭಾನುವಾರ, ಜನವರಿ 24, 2021
19 °C

24 ತಾಸು ನಡೆದ ಮತ ಎಣಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ತಾಲ್ಲೂಕಿನ 36 ಗ್ರಾಮಪಂಚಾಯಿತಿಗಳ ಮತ ಎಣಿಕೆ ಗುರುವಾರ ಬೆಳಗ್ಗೆ 8 ಗಂಟೆಯಿಂದ ಶುಕ್ರವಾರ ಬೆಳಗ್ಗೆ 8 ಗಂಟೆಯವರೆಗೆ ನಡೆಯಿತು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ವರಲಕ್ಷ್ಮಿ ರಂಗಧಾಮಯ್ಯ ರಾಯಗೋನಹಳ್ಳಿ ಕ್ಷೇತ್ರದಿಂದ ಗ್ರಾಮಪಂಚಾಯಿತಿಗೆ ಆಯ್ಕೆಯಾಗಿದ್ದಾರೆ. ಹುಲಿಯೂರುದುರ್ಗ ತಾಲ್ಲೂಕು ಪಂಚಾಯಿತಿ ಸದಸ್ಯ ಅಲ್ಲಾಬಕಾಷ್ ಮತ್ತು ಪತ್ನಿ ತಬಸುಮ್ ಫಾತಿಮಾ ಇಬ್ಬರು ಹುಲಿಯೂರುದುರ್ಗ ಗ್ರಾಮಪಂಚಾಯಿತಿಗೆ ಆಯ್ಕೆಯಾಗಿದ್ದಾರೆ. ನಾಗಸಂದ್ರ ತಾಲ್ಲೂಕು ಪಂಚಾಯಿತಿ ಸದಸ್ಯೆ ಕಳಸಮ್ಮನವರ ಸೊಸೆ ನಂದಿನಿ ಗ್ರಾಮಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ತಾಲ್ಲೂಕು ಪಂಚಾಯಿತಿ ಸದಸ್ಯೆ ಕೆಂಪರಾಜಶ್ರೀ ಪತಿ ಹನುಮಂತು ಕೊಡವತ್ತಿ ಕ್ಷೇತ್ರದಲ್ಲಿ ಸೋತ್ತಿದ್ದಾರೆ.

ಜಿನ್ನಾಗರ ಪಂಚಾಯಿತಿ ಹೊಸಕೆರೆ ಗ್ರಾಮದಲ್ಲಿ ಚುನಾವಣೆ ದಿನ ದಿವಾಕರ್ ಮತ್ತು ವಿಜಯ್ ಕುಮಾರ್ ಗುಂಪಿನ ನಡುವೆ ಘರ್ಷಣೆ ನಡೆದು ಎರಡು ಗುಂಪಿನವರ ಮೇಲೆ ಪ್ರಕರಣ ದಾಖಲಾಗಿದ್ದು , ವಿಜಯ್ ಕುಮಾರ್ ಗೆದ್ದಿದ್ದರೆ, ದಿವಾಕರ್ ಗೌಡ ಸೋತಿದ್ದಾರೆ. ನಡೆಮಾವಿನಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಚಿ ಸಚಿವ ಡಿ.ನಾಗರಾಜಯ್ಯನವರ ಸಹೋದರ ಬಿ.ಶಿವಣ್ಣನವರ ಮಗ ಸಾಫ್ಟ್‌ವೇರ್ ಎಂಜನಿಯರ್ ಪ್ರಮೋದ್ ಸೋತಿದ್ದಾರೆ. ಇಲ್ಲಿ ಜೈದೀಪ್ ಗೆದ್ದು ಗಮನ ಸೆಳೆದಿದ್ದಾರೆ. ಪತ್ರಕರ್ತ ಬೀಚನಹಳ್ಳಿ ಶ್ರೀನಿವಾಸ್ ಹಳೇವೂರು ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ.

ನಿರ್ಣಾಯಕ ಪಾತ್ರ ವಹಿಸಬೇಕಾಗಿದ್ ದ186 ಅಂಚೆ ಮತಪತ್ರಗಳ ಪೈಕಿ 19 ಅಸಿಂಧುವಾಗಿದ್ದು 167 ಸಿಂಧುವಾಗಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು