ಶಿರಾ: ತಾಲ್ಲೂಕಿನ ಕಟ್ಟಕಡೆಯ ಗ್ರಾಮ ಸೇರಿದಂತೆ ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿಗಳಿಗೆ ನೀರು ಹರಿಸಲಾಗುವುದು. ನೀರಿಗಾಗಿ ಯಾರೂ ಬೀದಿಗೆ ಇಳಿದು ಹೋರಾಟ ಮಾಡುವುದು ಬೇಡ ಎಂದು ಶಾಸಕ ಟಿ.ಬಿ.ಜಯಚಂದ್ರ ಭರವಸೆ ನೀಡಿದರು.

ತಾಲ್ಲೂಕಿನ ಮದಲೂರು ಗ್ರಾಮದಲ್ಲಿ ಭಾನುವಾರ ಹೇಮಾವತಿ ನೀರಿನಿಂದ ಕೆರೆ ತುಂಬಿದ ಹಿನ್ನೆಲೆಯಲ್ಲಿ ತೆಪ್ಪೋತ್ಸವದಲ್ಲಿ ಗಂಗಾಪೂಜೆ ನಡೆಸಿ ಬಾಗಿನ ಅರ್ಪಿಸಿ ಮಾತನಾಡಿದರು.

‘ನೀವು ನೀಡಿದ ರಾಜಕೀಯ ಶಕ್ತಿಯಿಂದ ನೀರು ಬರಲು ಸಾಧ್ಯವಾಯಿತು. ಮೇಕೆದಾಟು ಯೋಜನೆಯಿಂದ ಶಿರಾಕ್ಕೆ ಅನುಕೂಲವಾಗುವುದು. ತಮಿಳುನಾಡಿಗೆ ಯಚ್ಛೇಚವಾಗಿ ಹರಿದು ಹೋಗುವ ನೀರನ್ನು ತಡೆಯಬಹುದು. ಇದರಿಂದಾಗಿ ನಾವು ಹೇಮಾವತಿ ನೀರನ್ನು ಹೆಚ್ಚು ಬಳಕೆ ಮಾಡಿಕೊಳ್ಳಲು ಸಾಧ್ಯ. ಶಿರಾ, ಕುಣಿಗಲ್ ಸೇರಿದಂತೆ ಬೆಂಗಳೂರಿಗೂ ನೀರು ಕೊಡಬಹುದು. ಮುಂದಿನ ದಿನಗಳಲ್ಲಿ ಶಿರಾ ಬೆಂಗಳೂರಿನ ಹೆಬ್ಬಾಗಿಲಾಗುವುದು’ ಎಂದು ಹೇಳಿದರು.

ಡಿ.ಸಿ.ಆಶೋಕ್ ಮಾತನಾಡಿ, ಶಾಸಕ ಟಿ.ಬಿ.ಜಯಚಂದ್ರ ತಮ್ಮ ಹೋರಾಟ ಬಿಡದೆ ಮದಲೂರು ಕೆರೆಗೆ ನೀರು ತರುವ ಮೂಲಕ ಈ ಭಾಗದ ರೈತರ ಬದುಕಿನ ಆಶಾಕಿರಣವಾಗಿದ್ದಾರೆ. ಈ ಬಾರಿ ಮಳೆ ಬಾರದಿದ್ದರೂ 30ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಿದ್ದಾರೆ ಎಂದರು.

ಸನ್ಮಾನ: ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಮದಲೂರು ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಅಭಿಮಾನಿಗಳು ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಬರಗೂರು ನಟರಾಜು, ಕಾನೂನು ಘಟಕದ ಅಧ್ಯಕ್ಷ ಎಚ್.ಗುರುಮೂರ್ತಿಗೌಡ, ನಿರ್ಮಲ ಜಯಚಂದ್ರ, ಸಂಜಯ್ ಜಯಚಂದ್ರ, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೆರೆ ಮಹೇಶ್, ನಗರಸಭೆ ಅಧ್ಯಕ್ಷ ಜೀಷಾನ್ ಮಹಮೂದ್, ಶಿವು ಚಂಗಾವರ, ಕೊಟ್ಟ ಶಂಕರ್, ಜಿ.ಎಸ್.ರವಿ, ಡಿ.ವೈ.ಗೋಪಾಲ್, ಕೋಟೆ ಲೋಕೇಶ್, ರಾಮಕೃಷ್ಣಪ್ಪ, ಮುಕುಂದಪ್ಪ, ಶಶಿಧರ್ ಗೌಡ, ಸತ್ಯನಾರಾಯಣ, ಗುಳಿಗೇನಹಳ್ಳಿ ನಾಗರಾಜು, ದೇವರಾಜು, ಪಿ.ಬಿ.ನರಸಿಂಹಯ್ಯ, ಅಂಜನಕುಮಾರ್, ಮಣಿಕಂಠ, ಹೇಮಂತಗೌಡ, ಗ್ರಾ.ಪಂ ಅಧ್ಯಕ್ಷೆ ರೂಪ ರಂಗನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.