ತಿಪಟೂರು: ತಾಲ್ಲೂಕಿನ ದಾಸಿಹಳ್ಳಿಯ ತೋಟದ ಬಳಿ ಇರಿಸಿದ್ದ ಬೋನಿಗೆ ಒಂದು ವರ್ಷದ ಹೆಣ್ಣು ಚಿರತೆ ಬುಧವಾರ ಬೆಳಗಿನ ಜಾವ ಬಿದ್ದಿದೆ.
ಕಳೆದ ಕೆಲ ದಿನಗಳಿಂದ ಸ್ಥಳೀಯವಾಗಿ ಕಾಣಿಸಿಕೊಂಡು ತೋಟಕ್ಕೆ ತೆರಳುವ ಜನರಿಗೆ ಭಯ ಮೂಡಿಸಿದ್ದ ಚಿರತೆ ಸೆರೆ ಸಿಕ್ಕಿದೆ.
ಎಸಿಎಫ್ ಸುಬ್ಬರಾವ್ ಮತ್ತು ಆರ್‌ಎಫ್‌ಒ ಜಗದೀಶ್ ಮಾರ್ಗದರ್ಶನ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸೆರೆಹಿಡಿಯಲಾಗಿದೆ.