ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ‘ಅಭಿಮನ್ಯು ಕಾಳಗ’ ಪ್ರದರ್ಶನ

Published 28 ಮೇ 2024, 14:49 IST
Last Updated 28 ಮೇ 2024, 14:49 IST
ಅಕ್ಷರ ಗಾತ್ರ

ಕೋಟ (ಬ್ರಹ್ಮಾವರ): ಬೆಂಗಳೂರಿನ ಮೆಡಿಕಲ್ ಕಾಲೇಜು ಸಭಾಭವನದಲ್ಲಿ ನಡೆದ ಕನ್ನಡ ಪರ್ವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಯಕ್ಷದೇಗುಲ ಮಕ್ಕಳ ತಂಡದವರಿಂದ ಪ್ರಿಯಾಂಕ ಕೆ.ಮೋಹನ್ ನಿರ್ದೇಶನದಲ್ಲಿ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ, ಮದ್ದಲೆಯಲ್ಲಿ ಸಂಪತ್ ಕುಮಾರ್, ಚೆಂಡೆಯಲ್ಲಿ ಪನ್ನಗ ಮಯ್ಯ ಸಹಕರಿಸಿದರು. ಮುಮ್ಮೇಳದಲ್ಲಿ ಮಕ್ಕಳಾದ ಸರಸ್ವತಿ–ಧರ್ಮರಾಯ, ತೇಜಸ್–ಅಭಿಮನ್ಯು, ಅನೀಶ–ಸುಭದ್ರೆ, ಮಹೇಶ್ವರ–ಸೈಂಧವ, ಧನ್ಯ–ಕೌರವ, ಶಾಶ್ವತ್–ದ್ರೋಣ, ಸುಹಾಸ್–ಕರ್ಣ, ಕ್ರಿಶ–ಶಲ್ಯ, ಅಹನಾ–ದುಶ್ಯಾಸನ, ಅನಿಕಾ–ಎರಡನೇ ಅಭಿಮನ್ಯು ಪಾತ್ರ ನಿರ್ವಹಿಸಿದರು.

ಮೇಕಪ್‌ನಲ್ಲಿ ಬಾಲಕೃಷ್ಣ ಭಟ್, ಸುದರ್ಶನ ಉರಾಳ, ಉದಯ ಬೋವಿ, ವಿಶ್ವನಾಥ ಉರಾಳ ಸಹಕರಿಸಿದರು. ಯಕ್ಷಗಾನ ಕಲಾವಿದ, ಹೆರಂಜಾಲು ಸುಬ್ಬಣ್ಣ ಗಾಣಿಗ ಅವರಿಗೆ ಬಿಎಂಸಿಯ ಕನ್ನಡ ಪರ್ವ ಕಾರ್ಯಕ್ರಮದ ನೆನಪಿನ ಕಾಣಿಕೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT