ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಪು ದೇವಸ್ಥಾನಕ್ಕೆ ನಟ ದೊಡ್ಡಣ್ಣ ಭೇಟಿ

Published 13 ಮೇ 2024, 16:06 IST
Last Updated 13 ಮೇ 2024, 16:06 IST
ಅಕ್ಷರ ಗಾತ್ರ

ಕಾಪು (ಪಡುಬಿದ್ರಿ): ಇಲ್ಲಿನ ಲಕ್ಷ್ಮೀ ಜನಾರ್ದನ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಕುಟುಂಬ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವರ ಅನುಗ್ರಹ ಪ್ರಸಾದ ಪಡೆದರು.

ದೇವಸ್ಥಾನದ ಪ್ರಧಾನ ಅರ್ಚಕ ಜನಾರ್ದನ್ ಭಟ್ ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಿದರು. ದೊಡ್ಡಣ್ಣ ದೇವಸ್ಥಾನ ವಠಾರದಲ್ಲಿ ಗಿಡ ನೆಡುವ ಮೂಲಕ ವೃಕ್ಷ ಸಂರಕ್ಷಣೆಗೆ ಪ್ರೋತ್ಸಾಹ ನೀಡಿದರು.

ದೊಡ್ಡಣ್ಣ ಮಾತನಾಡಿ, ಸೂರ್ಯ ಚಂದ್ರ ಯಾವತ್ತು ಸ್ಥಾಪಿತರಾದರೋ ಆವತ್ತಿನಿಂದಲೇ ಸನಾತನ ಧರ್ಮ ಉಳಿದುಕೊಂಡಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಹಿರಿಯರಿಗೆ 90 ವರ್ಷ ವಯಸ್ಸಾದರೂ ಆರೋಗ್ಯ ಸಮಸ್ಯೆ ಇರುತ್ತಿರಲಿಲ್ಲ. ಅವರು ಇನ್ನೊಬ್ಬರ ಖುಷಿಗೋಸ್ಕರ ಜೀವಿಸಿ ತೃಪ್ತಿ
ಕಾಣುತ್ತಿದ್ದರು. ದೇಸಿ ಆಹಾರ ತಿನ್ನುತ್ತಿದ್ದರು. ಮೊಬೈಲ್ ಬಳಕೆ ಕಡಿಮೆ ಮಾಡಿ ನಮ್ಮಲ್ಲಿರುವ ಗ್ರಂಥ ಭಂಡಾರ ಓದಿ, ದೇವರ ಸ್ಮರಣೆ ಮಾಡಿ ಎಂದರು.

 ಜೋತಿಷಿ ವಿದ್ವಾನ್ ಪ್ರಕಾಶ್ ಅಮ್ರ್ಮಣ್ಣಾಯ, ಗಿರೀಶ್ ಪಾತ್ರಿ, ಸಂದೀಪ್ ಶೆಟ್ಟಿ, ಲಕ್ಷ್ಮಿಕಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT