ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ಆಧಾರಿತ ಕೃಷಿಗೆ ಸಲಹೆ: ಡಾ.ಲಕ್ಷ್ಮಣ

ಇರ್ವತ್ತೂರಿನಲ್ಲಿ ರೈತ ಜಾಗೃತಿ ಕಾರ್ಯಕ್ರಮ
Last Updated 9 ಅಕ್ಟೋಬರ್ 2022, 6:31 IST
ಅಕ್ಷರ ಗಾತ್ರ

ಕಾರ್ಕಳ:ರೈತರು ಹವಾಮಾನ ಆಧಾ ರಿತ ಕೃಷಿ ಅಳವಡಿಸಬೇಕು ಎಂದು ಸಂಶೋಧನಾಸಹ ನಿರ್ದೇಶಕ ಡಾ.ಲಕ್ಷ್ಮಣ ಹೇಳಿದರು.

ತಾಲ್ಲೂಕಿನ ಇರ್ವತ್ತೂರಿನಲ್ಲಿ ಹವಾಮಾನ ಚಾತುರ್ಯ ಕೃಷಿ ಮತ್ತು ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ ಯೋಜನೆಗಳ ಪರಿಚಯ ಕಾರ್ಯಕ್ರಮದ ಕುರಿತು ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರದ ಗ್ರಾಮೀಣ ಕೃಷಿ ಮೌಸಮ್ ಸೇವಾ ಮತ್ತು ನೈಸರ್ಗಿಕ ಕೃಷಿ ಯೋಜನೆಗಳ ವತಿಯಿಂದ ಹಮ್ಮಿಕೊಂಡ ರೈತ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಕೃಷಿ ಮೌಸಮ್ ಸೇವಾ ಯೋಜನೆ ಮತ್ತು ನೈಸರ್ಗಿಕ ಕೃಷಿ ಯೋಜನೆಯ ಪ್ರಧಾನ ಸಂಶೋಧಕ ಡಾ.ಕೆ.ವಿ.ಸುಧೀರ್ ಕಾಮತ್ ಮಾತ ನಾಡಿ, ‘ರೈತರು ಉತ್ಪಾದನಾ ವೆಚ್ಚ ತಗ್ಗಿಸಿ ಕೃಷಿಯಲ್ಲಿ ಲಾಭ ಹೆಚ್ಚಿಸಲು ನೈಸರ್ಗಿಕ ಕೃಷಿ ಮತ್ತು ಹವಾಮಾನ ಚಾತುರ್ಯ ಕೃಷಿಯನ್ನು ಅನುಸರಿಸಬೇಕು’ ಎಂದರು.

ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಬಿ.ಧನಂಜಯ್ ಮಾತನಾಡಿ, ಮಣ್ಣಿನಲ್ಲಿ ಕ್ಷೀಣಿಸುತ್ತಿರುವ ಸಾವಯವ ಇಂಗಾಲವನ್ನು ವೃದ್ಧಿಗೊಳಿಸಲು ರೈತರು ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಅನುಸರಿಸಬೇಕು ಎಂದರು.

ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಅಬ್ದುಲ್ ಮಜೀದ್ ರೈತರಿಗೆ ತರಕಾರಿ ಬೀಜಗಳನ್ನು ವಿತರಿಸಿದರು.

ವಿಜ್ಞಾನಿಗಳಾದ ಡಾ. ಸಂತೋಷ ಗೌಡ ಜಿ.ಬಿ, ಡಾ.ಮಹಾಂತೇಶ್ ಪಿ.ಎಸ್, ಪ್ರವೀಣ್ ಕೆ.ಎಮ್, ಕುಮಾರಿ ಸ್ವಾತಿ ಶೆಟ್ಟಿ.ವೈ, ಅಶ್ವಿನಿ ಪಾಟೀಲ್, ಪೃಥ್ವಿರಾಜ್.ಎಚ್.ಎಂ, ಅನುಪಮಾ ಘಿರಡಿಮಠ ತಾಂತ್ರಿಕ ಮಾಹಿತಿ ನೀಡಿದರು. ಕವಿತಾ ಶಂಕರ್, ಉದಯ ಎಸ್ ಕೋಟ್ಯಾನ್, ಶ್ರೀನಿವಾಸ್ ಭಟ್, ಆನಂದ್, ಜಯ ಕುಲಾಲ್ ಮತ್ತು ಗೋಪಾಲ ಪೂಜಾರಿ ಇದ್ದರು. ಶೈಲೇಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT