ಶನಿವಾರ, ಜೂಲೈ 4, 2020
28 °C
20 ಪುರುಷರು, 8 ಮಹಿಳೆಯರು, ಒಬ್ಬಳು ಬಾಲಕಿಯಲ್ಲಿ ಸೋಂಕು ಪತ್ತೆ

ಉಡುಪಿ: ಮತ್ತೆ 29 ಮಂದಿಯಲ್ಲಿ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಗುರುವಾರ 29 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. 20 ಪುರುಷರು, 8 ಮಹಿಳೆಯರ ಹಾಗೂ ಒಬ್ಬಳು ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದ್ದು, ಎಲ್ಲರಿಗೂ ಡಾ.ಟಿಎಂಎ ಪೈ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.

ಕ್ವಾರಂಟೈನ್‌ನಲ್ಲಿದ್ದವರಿಗೆ ಸೋಂಕು: ಈಚೆಗೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದು ಕ್ವಾರಂಟೈನ್‌ನಲ್ಲಿದ್ದವರಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ 26, ತೆಲಂಗಾಣದಿಂದ ಇಬ್ಬರು ಹಾಗೂ ಕೇರಳದಿಂದ ಬಂದಿದ್ದ ಒಬ್ಬರಲ್ಲಿ ಸೋಕು ಇದ್ದು, ಅವರ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.

298 ವರದಿ ನೆಗೆಟಿವ್‌: ಈಚೆಗೆ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದ ಮಾದರಿಗಳ ಪೈಕಿ ಗುರುವಾರ 298 ವರದಿಗಳು ನೆಗಟಿವ್ ಬಂದಿದ್ದು, 29 ಪಾಸಿಟಿವ್‌ ಬಂದಿವೆ. ಗುರುವಾರ 20 ಮಾದರಿಗಳನ್ನು ಲ್ಯಾಬ್‌ಗಳಿಗೆ ರವಾನಿಸಲಾಗಿದೆ.

6,707 ವರದಿ ಬಾಕಿ: ಜಿಲ್ಲೆಯಿಂದ ಇದುವರೆಗೂ 10,965 ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, 6,707 ವರದಿಗಳು ಬರುವುದು ಬಾಕಿ ಇದೆ. ಇದುವರೆಗೂ ಬಂದಿರುವ ವರದಿಗಳಲ್ಲಿ 4109 ನೆಗೆಟಿವ್‌ಗಳಿದ್ದು, 149 ಪಾಸಿಟಿವ್‌ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

9 ಮಂದಿ ಐಸೊಲೇಷನ್‌ ವಾರ್ಡ್‌ಗೆ ದಾಖಲು: ಕೊರೊನಾ ಸೋಂಕು ಲಕ್ಷಣಗಳು ಕಂಡುಬಂದ 7 ಪುರುಷರು ಹಾಗೂ ಇಬ್ಬರು ಮಹಿಳೆಯರು ಗುರುವಾರ ಐಸೊಲೇಷನ್‌ ವಾರ್ಡ್‌ಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, 29 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 678 ಮಂದಿ ಐಸೊಲೇಷನ್‌ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಿದರು.

149ಕ್ಕೇರಿಕೆ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 149ಕ್ಕೇರಿಕೆಯಾಗಿದೆ. ಕೋವಿಡ್‌ಗೆ ಒಬ್ಬರು ಮೃತಪಟ್ಟಿದ್ದು, ಮೂವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 145 ಸಕ್ರಿಯ ಪ್ರಕರಣಗಳು ಇವೆ. 

ಸೋಂಕಿತರ ವಿವರ

ವಯಸ್ಸು–ಲಿಂಗ–ಸಂಪರ್ಕ

27–ಗಂಡು–ಮಹಾರಾಷ್ಟ್ರ

34–ಹೆಣ್ಣು–ಮಹಾರಾಷ್ಟ್ರ

28–ಗಂಡು–ಮಹಾರಾಷ್ಟ್ರ

48–ಗಂಡು–ಮಹಾರಾಷ್ಟ್ರ

32–ಗಂಡು–ಮಹಾರಾಷ್ಟ್ರ

34–ಹೆಣ್ಣು–ಮಹಾರಾಷ್ಟ್ರ

29–ಹೆಣ್ಣು–ಮಹಾರಾಷ್ಟ್ರ

39–ಗಂಡು–ಮಹಾರಾಷ್ಟ್ರ

32–ಗಂಡು–ಮಹಾರಾಷ್ಟ್ರ

34–ಗಂಡು–ಮಹಾರಾಷ್ಟ್ರ

34–ಗಂಡು–ಕೇರಳ

41–ಗಂಡು–ಮಹಾರಾಷ್ಟ್ರ

48–ಗಂಡು–ಮಹಾರಾಷ್ಟ್ರ

19–ಗಂಡು–ಮಹಾರಾಷ್ಟ್ರ

43–ಗಂಡು–ಮಹಾರಾಷ್ಟ್ರ

59–ಹೆಣ್ಣು–ಮಹಾರಾಷ್ಟ್ರ

30–ಹೆಣ್ಣು–ಮಹಾರಾಷ್ಟ್ರ

6–ಬಾಲಕಿ–ಮಹಾರಾಷ್ಟ್ರ

33–ಹೆಣ್ಣು–ತೆಲಂಗಾಣ

34–ಗಂಡು–ಮಹಾರಾಷ್ಟ್ರ

50–ಗಂಡು–ಮಹಾರಾಷ್ಟ್ರ

24–ಹೆಣ್ಣು–ತೆಲಂಗಾಣ

38–ಗಂಡು–ಮಹಾರಾಷ್ಟ್ರ

44–ಗಂಡು–ಮಹಾರಾಷ್ಟ್ರ

30–ಗಂಡು–ಮಹಾರಾಷ್ಟ್ರ

46–ಗಂಡು–ಮಹಾರಾಷ್ಟ್ರ

31–ಹೆಣ್ಣು–ಮಹಾರಾಷ್ಟ್ರ

47–ಗಂಡು–ಮಹಾರಾಷ್ಟ್ರ

42–ಗಂಡು–ಮಹಾರಾಷ್ಟ್ರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು