ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯತ್ತ ಒಲವು ಬೆಳೆಸಿಕೊಳ್ಳಲು ಸಲಹೆ

ಮುನಿಯಾಲು ಲಯನ್ಸ್‌ ಕ್ಲಬ್‌; ‘ಯುವಕರ ನಡೆ ಕೃಷಿಯ ಕಡೆಗೆ’ ವಿಶೇಷ ಕಾರ್ಯಕ್ರಮ-
Last Updated 4 ಜುಲೈ 2021, 7:35 IST
ಅಕ್ಷರ ಗಾತ್ರ

ಹೆಬ್ರಿ: ಮುನಿಯಾಲು ಲಯನ್ಸ್‌ ಕ್ಲಬ್‌ ಕೃಷಿ ಬಗ್ಗೆ ಹೊಂದಿರುವ ವಿಶೇಷ ಒಲವು ಎಲ್ಲರಿಗೂ ಮಾದರಿ. ಬರುವ ದಿನಗಳಲ್ಲಿ ಉಳಿಯುವುದು ಕೃಷಿ ಮಾತ್ರ. ಪಡುಕುಡೂರು ಅಶೋಕ ಶೆಟ್ಟಿ ಅವರು ಕೃಷಿ ಬಗ್ಗೆಯ ಹೊಂದಿರುವ ಕಾಳಜಿಯಿಂದ ಯುವಕರು ಸೇರಿ ಹಲವರು ಇಲ್ಲಿನ ಪರಿಸರದಲ್ಲಿ ಕೃಷಿಯತ್ತ ಮುಖ ಮಾಡಲು ಸಾಧ್ಯವಾಗಿದೆ ಎಂದು ಲಯನ್ಸ್‌ ಜಿಲ್ಲಾ ಗವರ್ನರ್‌ ವಿಶ್ವನಾಥ ಶೆಟ್ಟಿ ಹೇಳಿದರು.

ಶನಿವಾರ ಪಡುಕುಡೂರು ಮುಂಡೊಟ್ಟು ಮನೆ ಭುಜಂಗ ಶೆಟ್ಟಿ ಅವರ ಕೃಷಿ ಭೂಮಿಯಲ್ಲಿ ಮುನಿಯಾಲು ಲಯನ್ಸ್‌ ಕ್ಲಬ್‌ ವತಿಯಿಂದ ನಡೆದ ‘ಯುವಕರ ನಡೆ ಕೃಷಿಯ ಕಡೆಗೆ’ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೈತನ ಮಗನಾದರೂ ಲಯನ್ಸ್‌ನಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎನ್ನುವುದಕ್ಕೆ ನಾನೇ ಸಾಕ್ಷಿ. ಎಲ್ಲರೂ ಕೃಷಿ ಮಾಡಿ ಉತ್ತಮ ಜೀವನ ನಡೆಸುವಂತೆ ಹಾರೈಸಿದರು.

ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಪಡುಕುಡೂರು ಅಶೋಕ ಎಂ ಶೆಟ್ಟಿ ಮಾತನಾಡಿ, ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.

ಲಯನ್ಸ್‌ ಪ್ರಾಂತೀಯ ಪೂರ್ವಾಧ್ಯಕ್ಷ ಬೈಲೂರು ಉದಯ ಕುಮಾರ್‌ ಹೆಗ್ಡೆ ಮಾತನಾಡಿ, ಕೃಷಿ ಎಂದರೆ ಖುಷಿ, ಕೋಟಿ ರೂಪಾಯಿ ಸಂಪಾದನೆ ಇದ್ದರೂ, ಕೃಷಿಯಲ್ಲಿ ಸಿಗುವ ಖುಷಿ ನೆಮ್ಮದಿ ಎಲ್ಲೂ ಸಿಗಲ್ಲ. ಭೂಮಿಯನ್ನು ನಂಬಿದ ಎಲ್ಲರಿಗೂ ಒಳ್ಳೆಯದಾಗಿದೆ ಎಂದರು.

ಲಯನ್ಸ್‌ ಕ್ಲಬ್‌ ಪ್ರಾಂತೀಯ ಅಧ್ಯಕ್ಷ ಮುನಿಯಾಲು ಶಂಕರ ಶೆಟ್ಟಿ ಮಾತನಾಡಿದರು.‌

ಪ್ರಗತಿಪರ ಕೃಷಿಕ ಪಡುಕುಡೂರು ಪರ್ಕಳ ಶ್ರೀಧರ ಶೆಟ್ಟಿ, ಟ್ರ್ಯಾಕ್ಟರ್‌ ಚಾಲಕ ದಾವಣಗೆರೆ ಸಂಶಿಪುರದ ಶಿವ, ಹಿರಿಯ ಸಹಕಾರಿ ಮುಂದಾಳು ಇಂದ್ರಾಳಿ ಜಯಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಯುವಕರ ನಡೆ ಕೃಷಿಯ ಕಡೆಗೆ ವಿಶೇಷ ಕಾರ್ಯಕ್ರಮದಲ್ಲಿ ಲಯನ್ಸ್‌ ಸದಸ್ಯರು ಕೃಷಿ ಕೂಲಿ ಕಾರ್ಮಿಕರ
ಜತೆ ಸೇರಿ ನೇಜಿ ನಾಟಿ ಮಾಡಿದರು. ಎಲ್ಲಾ ಕೃಷಿ ಕಾರ್ಮಿಕರಿಗೆ ಹಾಳೆ ತೊಡಿಸಿ ಕೃಷಿ ಶಾಲು ನೀಡಿ ಗೌರವಿಸಲಾಯಿತು.

ಮುನಿಯಾಲು ಲಯನ್ಸ್‌ ಕ್ಲಬ್‌ ಮುಂದಾಳು ಗೋಪಿನಾಥ ಭಟ್‌, ಚಿಕ್ಕಲಬೆಟ್ಟು ತಾರಾನಾಥ ಶೆಟ್ಟಿ, ಅಶೋಕ್‌ ಎಂ ಶೆಟ್ಟಿ ಸಹಿತ ಹಲವರು ತಮ್ಮ ಕೃಷಿ ಅನುಭವ ಹಂಚಿಕೊಂಡರು. ಮುನಿಯಾಲು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಸಂಪತ್‌ ಅಧ್ಯಕ್ಷತೆ ವಹಿಸಿದ್ದರು.

ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಹೆಬ್ಬಾರ್‌, ಲಯನ್ಸ್‌ ಕ್ಲಬ್‌ ಜಿಲ್ಲಾ ಕೋಶಾಧಿಕಾರಿ ಜಯಪ್ರಕಾಶ ಭಂಡಾರಿ, ಲಯನ್ಸ್‌ ಕ್ಲಬ್‌ ಪ್ರಾಂತೀಯ ಅಧ್ಯಕ್ಷ ಮುನಿಯಾಲು ಶಂಕರ ಶೆಟ್ಟಿ, ಪ್ರಾಂತೀಯ ಪೂರ್ವಾಧ್ಯಕ್ಷರಾದ ಉದಯ ಕುಮಾರ್‌ ಹೆಗ್ಡೆ, ಶಶಿಕುಮಾರ್‌ ಶೆಟ್ಟಿ, ಪಡುಕುಡೂರು ಭುಜಂಗ ಶೆಟ್ಟಿ, ಮುನಿಯಾಲು ಲಯನ್ಸ್‌ ಕ್ಲಬ್‌ ಪದಾಧಿಕಾರಿಗಳುಿದ್ದರು. ಮುನಿಯಾಲು ಗೋಪಿನಾಥ ಭಟ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT