ಬ್ರಹ್ಮಾವರ: ‘ನೆಮ್ಮದಿಯ ಜೀವನ ನಡೆಸಬೇಕೆಂದಾದರೆ ಜೀವನ ಶೈಲಿ ಮತ್ತು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ’ ಎಂದು ಬ್ರಹ್ಮಾವರ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಅಣ್ಣಯ್ಯದಾಸ್ ಹೇಳಿದರು.

ಬ್ರಹ್ಮಾವರ ರುಡ್ಸೆಟ್ ಸಂಸ್ಥೆಯ ಸಭಾಂಗಣದಲ್ಲಿ ಬ್ರಹ್ಮಾವರ ಜಯಂಟ್ಸ್ ಗ್ರೂಪ್, ಲೋಂಬಾರ್ಡ್ ಆಸ್ಪತ್ರೆ, ರುಡ್ಸೆಟ್ ಆಸರೆ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತ ಪರೀಕ್ಷೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೇಕರಿ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳಿಗೆ ತಿನ್ನುವ ಬದಲು ಆರೋಗ್ಯದ ಕಡೆ ಗಮನ ಕೊಡಿ. ಜೀವನ ಶೈಲಿ ಮತ್ತು ಆಹಾರ ಕ್ರಮದಲ್ಲಿ ಕೆಲವು ಬದಲಾವಣೆ ಮಾಡುವ ಬಗ್ಗೆ ಪಣ ತೊಡಬೇಕು ಎಂದರು.

ಉತ್ತಮ ಆಹಾರ ಕ್ರಮ ಧ್ಯಾನ ಹಾಗೂ ಯೋಗಾಭ್ಯಾಸದಲ್ಲಿ ನಿತ್ಯ ತೊಡಗಿಸಿಕೊಂಡಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು.
ಲಕ್ಷೀಶ ಎ.ಜೆ, ನಿರ್ದೇಶಕ ಬ್ರಹ್ಮಾವರ ರುಡ್ಸೆಟ್

ಆಸರೆ ಸಂಘಟನೆ ಅಧ್ಯಕ್ಷೆ ಹರಿಣಿ ಅಜಯ ರಾವ್ ಮಾತನಾಡಿ, ‘ಜೀವನದಲ್ಲಿ ಎಲ್ಲವನ್ನೂ ಖುಷಿಯಿಂದ ಅನುಭವಿಸಬೇಕಾದರೆ ಉತ್ತಮ ಆರೋಗ್ಯ ಬೇಕು. ದಿನನಿತ್ಯದ ಕೆಲಸದ ಜಂಜಾಟದಲ್ಲಿ ಆರೋಗ್ಯದ ಬಗೆಗಿನ ಕಾಳಜಿ ಮರೆತಿದ್ದೇವೆ. ಅಂತಹ ತಪ್ಪುಗಳನ್ನು ಮುಂದಕ್ಕೆ ಮಾಡಬೇಡಿ’ ಎಂದು ಸಲಹೆ ನೀಡಿದರು.

ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಲಕ್ಷ್ಮೀಶ ಎ.ಜಿ. ಅಧ್ಯಕ್ಷತೆ ವಹಿಸಿದ್ದರು. ಜಯಂಟ್ಸ್ನ ಮಾಜಿ ಅಧ್ಯಕ್ಷ ಸುಂದರ ಪೂಜಾರಿ, ಜಯಂಟ್ಸ್ ಗ್ರೂಪ್ನ ಮಧುಸೂದನ್ ಹೇರೂರು, ಡಾ. ಅಭಿನಯ ಅಶೋಕ, ಡಾ. ಸುಮನಾ ಆರ್, ರುಡ್ಸೆಟ್ ಸಂಸ್ಥೆಯ ಉಪನ್ಯಾಸಕರಾದ ಸಂತೋಷ, ಚೈತ್ರಾ ಕೆ ಇದ್ದರು.

ಉದ್ಯಮಿ ಮಹೇಶ ಕುಮಾರ್ ಮಲ್ಪೆ ನಿರೂಪಿಸಿದರು. ಅಣ್ಣಯ್ಯದಾಸ್ ಸ್ವಾಗತಿಸಿದರು. ಜಯಂಟ್ಸ್ ಕಾರ್ಯದರ್ಶಿ ಮಿಲ್ಟನ್ ಓಲಿವೆರಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.