ಬೈಂದೂರು: ‘ದೋಷಗಳು ಕಡಿಮೆಯಾಗಲು ನಿತ್ಯಕರ್ಮದ ಭಾಗವಾದ ಸಂಧ್ಯಾವಂದನೆ ಮಾಡುವುದು ಅವಶ್ಯ. ರಾಜಕೀಯಕ್ಕೆ ಆದ್ಯತೆ ಕೊಡದೆ ಶಿಕ್ಷಣಕ್ಕೆ ಆದ್ಯತೆ ನೀಡಿ ಸಮುದಾಯದ ಮಕ್ಕಳನ್ನು ಸಮಾಜ, ದೇಶದ ಆಸ್ತಿಯನ್ನಾಗಿ ಮಾಡೋಣ’ ಎಂದು ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಉಪ್ರಳ್ಳಿಯ ಕರಸ್ಥಳ ಜಗದ್ಗುರು ನಾಗಲಿಂಗ ಸ್ವಾಮಿ, ವಿಶ್ವಕರ್ಮ ಸಾನಿಧ್ಯವಿರುವ ಕಾಳಿಕಾಂಬಾ ದೇವಸ್ಥಾನದಲ್ಲಿ ಬುಧವಾರ ನಡೆದ ರಂಗಪೂಜಾದಿ ದೀಪೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ದೇವಳದ ಆಡಳಿತ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ ಮಾತನಾಡಿ, ಸರ್ವರ ಸಹಕಾರದಿಂದ ದೇವಿಗೆ ಸ್ವರ್ಣ ಮುಖವಾಡ ಸಮರ್ಪಿಸಲಾಗಿದೆ. ನೂತನ ಸಭಾಂಗಣ ನಿರ್ಮಿಸಲಾಗಿದೆ. ರಾಜಗೋಪುರ ನಿರ್ಮಾಣವಾಗಬೇಕಿದ್ದು, ಕಾರ್ಯರೂಪಕ್ಕೆ ಬರುತ್ತಿದೆ. ಏಪ್ರಿಲ್ನಲ್ಲಿ ಲಕ್ಷ ಕುಂಕುಮಾರ್ಚನೆ ನಡೆಯಲಿದ್ದು ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರು.

ಮಾಗಣಿ ಮೊಕ್ತೇಸರರಾದ ಚಂದ್ರಯ್ಯ ಆಚಾರ್ಯ ನಾಯ್ಕನಕಟ್ಟೆ ಕಲ್ಸಂಕ, ಸಚ್ಚಿದಾನಂದ ಆಚಾರ್ಯ ತಲ್ಲೂರು, ರಾಮಚಂದ್ರ ಆಚಾರ್ಯ ಕೊಡ್ಲಾಡಿ, ಸುಂದರ್ ಆಚಾರ್ಯ ದೀಟಿ ಅವರನ್ನು ಸನ್ಮಾನಿಸಲಾಯಿತು. ಚಿತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಆಚಾರ್ಯ ಮಾರಣಕಟ್ಟೆ, ಭಾರತೀಯ ಸೇನೆಯ ಯೋಧ ಚಂದನ್ ಆಚಾರ್ಯ, ಚೇತನ್ ಆಚಾರ್ಯ ಕಟ್ಕೇರಿ, ಚಿತ್ರಕಲೆ ಸಾಧಕ ಪ್ರೀತಮ್ ಆಚಾರ್ಯ ಕೋಟೇಶ್ವರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗರಾಜ ಆಚಾರ್ಯ ಬಂಕೇಶ್ವರ, ಕರ್ನಾಟಕ ರಾಜ್ಯ ವಿಶ್ವಕರ್ಮ ಯುವಕ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಎಚ್. ಸುಶಾಂತ ಆಚಾರ್ಯ ಅವರನ್ನು ಗೌರವಿಸಲಾಯಿತು.

ಶಾಸಕ ಗುರುರಾಜ ಗಂಟಿಹೊಳೆ, ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಪಿ. ಸುಜ್ಞಾನಮೂರ್ತಿ ಆಚಾರ್ಯ, ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಪ್ರಧಾನ ಕಾರ್ಯದರ್ಶಿ ಲೋಕೇಶ ಎಂ.ಬಿ. ಆಚಾರ್ ಕಂಬಾರ, ಎಐಸಿ ನಿಟ್ಟೆ ಇನ್ಕುಬೇಷನ್ ಸೆಂಟರ್ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಅನಂತ ಪದ್ಮನಾಭ ಆಚಾರ್ಯ ಮೂಡುಬಗೆ, ಮಾಣಿಕೊಳಲು ಚೆನ್ನಕೇಶವ ದೇವಸ್ಥಾನದ ಮಾಜಿ ಮೊಕ್ತೇಸರ ಬಿ. ಗಣಪಯ್ಯ ಶೆಟ್ಟಿ ಹಕ್ಲಾಡಿ ಉಪ್ರಳ್ಳಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., 2ನೇ ಮೊಕ್ತೇಸರ ಉದಯ ಆಚಾರ್ಯ ಕಟ್ಬೆಲ್ತೂರು, 3ನೇ ಮೊಕ್ತೇಸರ ಶ್ರೀಧರ ಆಚಾರ್ಯ ಮರವಂತೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ವಿ. ಆಚಾರ್ಯ ನಾವುಂದ, ಸೇವಾ ಸಮಿತಿ ಅಧ್ಯಕ್ಷ ದಿನೇಶ ಆಚಾರ್ಯ ಮರವಂತೆ, ಆರೋಗ್ಯ ಸಮಿತಿ ಅಧ್ಯಕ್ಷ ದಿವಾಕರ ಆಚಾರ್ಯ ಮಾರಣಕಟ್ಟೆ, ಮಹಿಳಾ ಸಮಿತಿ ಅಧ್ಯಕ್ಷೆ ಶೈಲಾ ರಾಮಕೃಷ್ಣ ಆಚಾರ್ಯ ಉಪ್ಪುಂದ ಭಾಗವಹಿಸಿದ್ದರು.

ಮಹಿಳಾ ಸಮಿತಿ ಸದಸ್ಯರು ಪ್ರಾರ್ಥಿಸಿದರು. ಕಾಳಿಕಾಂಬಾ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ ಸ್ವಾಗತಿಸಿದರು. ದೇವಸ್ಥಾನದ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯ ಕೊಡ್ಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ನಾಗೇಂದ್ರ ಆಚಾರ್ಯ ತಲ್ಲೂರು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.