ಉಡುಪಿ: ನಗರದ ಬನ್ನಂಜೆಯ ರಾಷ್ಟ್ರೀಯ ಹೆದ್ದಾರಿ 169 ಎ ಯಲ್ಲಿನ ರಸ್ತೆ ವಿಭಜಕ ಅಗೆದಿರುವ ವಿಚಾರವು ಬುಧವಾರ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.

ರಸ್ತೆ ವಿಭಜಕ ಅಗೆದಿರುವ ವಿಚಾರಕ್ಕೆ ಸಂಬಂಧಿಸಿ ನಗರ ಸಭೆಯ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ವಿರೋಧ ಪಕ್ಷದ ಸದಸ್ಯ ಕ್ಷಮೆ ಯಾಚಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದರು. ಈ ವೇಳೆ ವಿರೋಧ ಪಕ್ಷದ ಸದಸ್ಯರು ಸಭೆಯಿಂದ ಹೊರ ನಡೆದರು.

ಸಭೆಯ ಆರಂಭದಲ್ಲಿ ಸದಸ್ಯ ಟಿ.ಜಿ. ಹೆಗ್ಡೆ ಅವರು, ಬನ್ನಂಜೆಯಲ್ಲಿ ರಸ್ತೆ ವಿಭಜಕ ಅಗೆದು ಯುಟರ್ನ್ ವಿಸ್ತಾರಗೊಳಿಸಿರುವ ವಿಚಾರದಲ್ಲಿ ನಗರಸಭೆಯ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ ಎಂದರು.

ಇದರಲ್ಲಿ ನಗರಸಭೆಯ ಪಾತ್ರ ಇದೆಯಾ? ರಸ್ತೆ ವಿಭಜಕ ಅಗೆಯಲು ಅನುಮತಿ ಪಡೆಯಲಾಗಿತ್ತಾ. ಒಡೆದು ಹಾಕಲು ಕಾರಣ ಏನು ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಅದಕ್ಕೆ ಸದಸ್ಯೆ ಸವಿತಾ ಹರೀಶ್ ರಾಮ್ ಧ್ವನಿಗೂಡಿಸಿದರು. ನಗರಸಭೆಯ ನಾಮನಿರ್ದೇಶಿತ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಅವರು ನಗರಸಭೆಯ ಮೇಲೆ ಭ್ರಷ್ಟಾಚಾರ ಆರೋಪ ಹೊರೆಸಿದ್ದಾರೆ. ಅವರು ಕ್ಷಮೆ ಯಾಚಿಸಬೇಕು ಎಂದೂ ಅವರು ಒತ್ತಾಯಿಸಿದರು.

ಸವಿತಾ ಹರೀಶ್ ರಾಮ್ ಮಾತನಾಡುತ್ತಿದ್ದಾಗ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಅವರು ನಿಯಮ ಉಲ್ಲಂಘಿಸಿ ವರ್ತಿಸಿದ್ದರು ಎಂದು ಆರೋಪಿಸಿ ಆಡಳಿತ ಪಕ್ಷದ ಸದಸ್ಯೆಯರು ಅವರ ಕ್ಷಮೆಯಾಚನೆಗೆ ಒತ್ತಾಯಿಸಿದರು.

ಆಗ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಅವರು ಮಾತನಾಡಿ, ಸುರೇಶ್ ಶೆಟ್ಟಿ ಹೇಳಿಕೆಗೆ ನಾನು ಕ್ಷಮೆ ಯಾಚಿಸುತ್ತೇನೆ ಎಂದರು. ಆದರೆ ಆಡಳಿತ ಪಕ್ಷದ ಸದಸ್ಯರು ಅದಕ್ಕೆ ಒಪ್ಪದೆ ಗದ್ದಲ ಮುಂದುವರಿಸಿದರು.

ಆಗ ಸುರೇಶ್ ಶೆಟ್ಟಿ ಮಾತನಾಡಿ ಸದಸ್ಯ ಟಿ.ಜಿ. ಹೆಗ್ಡೆ ಸಭೆಯಲ್ಲಿ ಪ್ರಸ್ತಾಪಿಸಿರುವ ಹೇಳಿಕೆ ನನ್ನದಲ್ಲ. ನಾನು ನೀಡಿರುವ ಹೇಳಿಕೆಯೇ ಬೇರೆ ಇದೆ ಎಂದರು. ಆದರೂ ಆಡಳಿತ ಪಕ್ಷದ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ಆಗ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಬಳಿಕ ಆಡಳಿತ ಪಕ್ಷದ ಸದಸ್ಯೆ ಸುಮಿತ್ರಾ ನಾಯಕ್ ಅವರು ವಿರೋಧ ಪಕ್ಷದ ಸದಸ್ಯರ ಮನವೊಲಿಸಿ ಸಭೆಗೆ ಕರೆ ತಂದರು.

ಶಾಸಕ ಯಶ್ಪಾಲ್ ಸುವರ್ಣ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಉಪಸ್ಥಿತರಿದ್ದರು.

‘ನಗರಸಭೆಯ ಪಾತ್ರ ಇಲ್ಲ’

ರಸ್ತೆ ವಿಭಜಕವನ್ನು ಅಗೆದಿರುವುದರಲ್ಲಿ ನಗರಸಭೆಯ ಪಾತ್ರವಿಲ್ಲ. ಬನ್ನಂಜೆಯಲ್ಲಿ ಸಂಚಾರ ಸಮಸ್ಯೆ ಉಂಟಾಗಿರುವ ಕಾರಣಕ್ಕೆ ಮಲ್ಪೆ ಪೊಲೀಸರ ಶಿಫಾರಸಿನಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನದಲ್ಲಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಎಂಜಿನಿಯರ್ ರಸ್ತೆ ವಿಭಜಕವನ್ನು ತೆರವು ಮಾಡಿಸಿದ್ದಾರೆ ಎಂದು ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ಸಭೆಗೆ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.