ಉಡುಪಿ: ಭಗವದ್ಗೀತೆಯು ಅತ್ಯಂತ ಶ್ರೇಷ್ಠ ಗ್ರಂಥವಾಗಿದ್ದು, ಅದು ವಿಶ್ವತೋಮುಖ ಸಂದೇಶ ನೀಡಿದೆ. ಅದರ ಒಂದೊಂದು ಶಬ್ದಗಳು ಕೂಡ ವಿಶಿಷ್ಟವಾದ ಸಂದೇಶವನ್ನು ನೀಡುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಬೃಹತ್ ಗೀತೋತ್ಸವದ ಅಂಗವಾಗಿ ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಸಂದೇಶ ಮತ್ತು ಸಂತ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾರು ಸಂದೇಶದಾಯಕರಾಗಿರುತ್ತಾರೋ ಅವರು ಉನ್ನತ ಸ್ಥಾನಕ್ಕೇರುತ್ತಾರೆ. ಯಾರಲ್ಲಿ ಯಾವ ಸಂದೇಶವೂ ಇರುವುದಿಲ್ಲವೋ ಅವರು ಉನ್ನತಿಗೇರಲು ಸಾಧ್ಯವಿಲ್ಲ ಎಂದರು.

ಯಾರು ಉತ್ತಮರು, ಯಾರು ಕೆಟ್ಟವರು ಎಂಬುದು ಭಗವಂತನನ್ನು ಆಧರಿಸಿ ನಿರ್ಧಾರವಾಗುತ್ತದೆ. ಸ್ವಭಾವತಾ ಒಳ್ಳೆಯವರಿದ್ದರೂ ಪ್ರಭಾವತಾ ಕೆಟ್ಟವರಾಗಿರುವವರನ್ನು ಕೂಡ ರಕ್ಷಣೆ ಮಾಡುವುದು ಬಹಳ ಮುಖ್ಯವಾದುದು ಎಂದು ಹೇಳಿದರು.

ಹರಿಕಥಾ ಕಲೆಯು ನಶಿಸಿ ಹೋಯಿತೆಂದು ನಾವು ತಿಳಿದುಕೊಂಡಾಗ ಹೊಸ ಹೊಸ ಪ್ರತಿಭೆಗಳು ಆ ಕ್ಷೇತ್ರಕ್ಕೆ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ರುಕ್ಮಿಣಿ ಹಂಡೆ ಅವರು ಹರಿಕಥಾ ಕಲೆಯನ್ನು ಉಳಿಸಿ, ಬೆಳೆಸುವುದರಲ್ಲಿ ವಿಶೇಷ ಶ್ರಮ ವಹಿಸಿದ್ದಾರೆ. ಹಿಂದೆ ಹರಿಕಥಾ ಕ್ಷೇತ್ರಕ್ಕೆ ಪುರುಷರು ಮಾತ್ರ ಬರುತ್ತಿದ್ದರು. ಮಹಿಳೆಯರೂ ಆ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ರುಕ್ಮಿಣಿ ಅವರೇ ಸಾಕ್ಷಿ ಎಂದು ತಿಳಿಸಿದರು.

ಹರಿದಾಸ ಪರಂಪರೆ ಇನ್ನಷ್ಟು ಬೆಳೆಯಬೇಕಾಗಿದೆ. ಅದಕ್ಕಾಗಿ ಹೊಸ ಹರಿದಾಸರು ಆ ಕ್ಷೇತ್ರಕ್ಕೆ ಬರುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.

ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಹರಿಕಥಾ ಕಲಾವಿದೆ ರುಕ್ಮಿಣಿ ಹಂಡೆ ಇದ್ದರು.

ಹರಿಕಥಾ ಕಲಾವಿದೆ ರುಕ್ಮಿಣಿ ಹಂಡೆ ಅವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ ಹರಿದಾಸ ಪರಂಪರೆ ಉಳಿಸಲು ಕರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.