ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನ, ಅಂಗನವಾಡಿಗಳ ದತ್ತು ಸ್ವೀಕಾರ

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ; ಸೇವಾ ಪಾಕ್ಷಿಕ ಅಭಿಯಾನ
Last Updated 17 ಸೆಪ್ಟೆಂಬರ್ 2022, 15:25 IST
ಅಕ್ಷರ ಗಾತ್ರ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನದ ಪ್ರಯುಕ್ತ ಜಿಲ್ಲೆಯಾದ್ಯಂತ ಸೇವಾ ಪಾಕ್ಷಿಕ ಅಭಿಯಾನ ನಡೆಯಿತು.

ಆದರ್ಶ ಅಂಗನವಾಡಿ ಅಭಿಯಾನದಡಿ ಅಂಗನವಾಡಿ ದತ್ತು ಸ್ವೀಕಾರ ಸಮಾರಂಭ ನಗರದ ಬನ್ನಂಜೆ ಶಿರಿಬೀಡು ಸರಸ್ವತಿ ಶಾಲೆಯ ಅಂಗನವಾಡಿಯಲ್ಲಿ ನಡೆಯಿತು. ಮಕ್ಕಳಿಗೆ ಹಣ್ಣು ಹಂಪಲು ಹಾಗೂ ಬರವಣಿಗೆ ಸಾಮಗ್ರಿಗಳು ವಿತರಿಸಲಾಯಿತು.

ಅಂಗನವಾಡಿ ಕೇಂದ್ರದ ಕುಂದು ಕೊರತೆಗಳ ಮನವಿ ಸ್ವೀಕರಿಸಲಾಯಿತು. ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜಾ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಸುಧಾ ಎಸ್ ಪೈ, ನಗರ ಬಿಜೆಪಿ ಉಪಾಧ್ಯಕ್ಷೆ ಪ್ರಭಾ ಶೆಟ್ಟಿ, ಕಾರ್ಯದರ್ಶಿ ಆನಂದ್ ಸುವರ್ಣ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕಿಶೋರ್ ಕರಂಬಳ್ಳಿ, ಪ್ರಕೋಷ್ಟದ ಸಂಚಾಲಕಿ ಮಂಜುಳಾ ಪ್ರಸಾದ್, ನಗರ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರತಿಮಾ ನಾಯಕ್, ಸರೋಜಾ ಶೆಣೈ, ಪ್ರಧಾನ ಕಾರ್ಯದರ್ಶಿಯಾದ ಸುಜಲ ಸತೀಶ್ ಇದ್ದರು.

ಮೋದಿ ಜನ್ಮದಿನದ ಅಂಗವಾಗಿ ಹೋಟೆಲ್ ಶ್ರೀನಿವಾಸ್ ಕಡಿಯಾಳಿ ಮಾಲೀಕ ಕೆ.ನರಸಿಂಹ ಕಿಣಿ 800 ಮಂದಿಗೆ ಉಚಿತ ಪಾಯಸ ವಿತರಿಸಿದರು. ವಿನಯ ಕಿಣಿ, ಮಲ್ಪೆ ವಲ್ಲಭ ಭಟ್, ಜಯಂತ್ ಕುಂದರ್ ಇದ್ದರು.

ಬಿಜೆಪಿ ಯುವ ಮೋರ್ಚಾದಿಂದ ಮಣಿಪಾಲ್‌ನ ಕೆಎಂಸಿ ರಕ್ತ ನಿಧಿ ವಿಭಾಗದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಶಾಸಕ ಕೆ.ರಘುಪತಿ ಭಟ್ ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ಜಿಲ್ಲಾ ವಕ್ತಾರಾದ ಕೆ.ರಾಘವೇಂದ್ರ ಕಿಣಿ, ಸಹ ವಕ್ತಾರ ಪ್ರತಾಪ್ ಚಂದ್ರ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಸತೀಶ್ ಸಾಲಿಯಾನ್ ಮಣಿಪಾಲ ಇದ್ದರು.

ಉಡುಪಿ ನಗರ ಬಿಜೆಪಿ ವತಿಯಿಂದ ಕಡಿಯಾಳಿ ಯು. ಕಮಲಾ ಬಾಯಿ ಪ್ರೌಢಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಕಂಪಾಸ್ ಬಾಕ್ಸ್ ವಿತರಿಸಲಾಯಿತು.

ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ವಾರ್ಡ್‌ ಸದಸ್ಯೆ ಗೀತಾ ಶೇಟ್, ಕಾರ್ಯದರ್ಶಿ ಆನಂದ್ ಮಠದಬೆಟ್ಟು, ಶಾಲೆಯ ಮುಖ್ಯೋಪಾಧ್ಯಾಯ ಸುದರ್ಶನ್ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT