ಬೈಂದೂರು: ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ಕೌಶಲಯುತ ಶಿಕ್ಷಣ ಸಿಗುವಂತೆ ಮಾಡುವ ಜವಾಬ್ದಾರಿ ಜನಪ್ರತಿನಿಧಿಗಳು ಹಾಗೂ ಪೋಷಕರ ಮೇಲಿದೆ. ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು ಶಿಕ್ಷಣ, ಆರೋಗ್ಯ, ಉದ್ಯೋಗಾವಕಾಶ ಒದಗಿಸಲು ಸಮೃದ್ಧ ಬೈಂದೂರು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಬಿಜೂರು ಮೂರ್ಗೋಳ್ಳಿಹಕ್ಲು ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಬಿಜೂರು ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕ್ರೀಡಾಂಗಣದ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಬಿಜೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಗುರುಮೂರ್ತಿ ಜಿ. ಹೆಗ್ಡೆ ಪೂಜೆ ನೆರವೇರಿಸಿದರು. ಬಿಜೂರು ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್ ವಿ. ದೇವಾಡಿಗ, ರಾಜೇಂದ್ರ ಬಿಜೂರು, ಗಂಗಾಧರ ದೇವಾಡಿಗ ತಿಪ್ಪನ್ನಡಿ, ಪ್ರಮುಖರಾದ ಶ್ರೀಧರ್ ಬಿಜೂರು, ಜಯರಾಮ ಶೆಟ್ಟಿ ಬಿಜೂರು, ಗುತ್ತಿಗೆದಾರ ಗಜೇಂದ್ರ ಎಸ್. ಬೇಲೆಮನೆ ಬೈಂದೂರು, ಸ್ಥಳೀಯರಾದ ತಿಮ್ಮಪ್ಪ ದೇವಾಡಿಗ, ನಾಗಪ್ಪ ದೇವಾಡಿಗ, ಉದಯಚಂದ್ರ ದೇವಾಡಿಗ, ಈಶ್ವರ ದೇವಾಡಿಗ, ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಎಸ್., ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಯಶೋದಾ, ಪಾರ್ವತಿ ಪೂಜಾರಿ, ಮೂಕಾಂಬು, ಗುಲಾಬಿ ಗಾಣಿಗ, ಕವಿತಾ ದೇವಾಡಿಗ, ನಿತೀಶ್ ಬಿಜೂರು, ಜ್ಯೋತಿ ದೇವಾಡಿಗ, ಸುಮಿತ್ರಾ ದೇವಾಡಿಗ, ಬೇಬಿ ಗಾಣಿಗ, ತುಳಸಿ ದೇವಾಡಿಗ, ಗೀತಾ ತಮಯ್ಯ ನಾಯ್ಕರಮನೆ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಮಂಗಲಾ, ಅಂಗನವಾಡಿ ಶಿಕ್ಷಕಿ ಸುಶೀಲಾ ಉಪಸ್ಥಿತರಿದ್ದರು.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ಕ್ರೀಡಾಂಗಣ ಅಭಿವೃದ್ಧಿಗೆ ಭರವಸೆ | ಮಕ್ಕಳಿಗೆ ಕೌಶಲಯುತ ಶಿಕ್ಷಣ ಅಗತ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.