ಉಡುಪಿ: ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಕ್ರಿಶ್ಚಿಯನ್ ಪ್ರೊಟೆಸ್ಟೆಂಟ್ ಸಮುದಾಯದ ಮಹಿಳೆಯ ಅಂತ್ಯ ಸಂಸ್ಕಾರವನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ ಮತ್ತು ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾ ಕಾರ್ಯಕರ್ತರು ನೆರವೇರಿಸಿ ಸೌಹಾರ್ದತೆ ಮೆರೆದಿದ್ದಾರೆ.
ಆ.29ರಂದು ಬಳ್ಳಾರಿಯ ಕ್ರಿಶ್ಚಿಯನ್ ಸಮುದಾಯದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದರು. ತಾಯಿಯ ಚಿಕಿತ್ಸೆಗೆ ಇದ್ದ ಹಣ ವ್ಯಯವಾಗಿ, ಹುಟ್ಟೂರಿಗೆ ಶವ ಒಯ್ಯಲು ಸಾದ್ಯವಾಗದೆ ಮೂವರು ಹೆಣ್ಣುಮಕ್ಕಳು ಸಂಕಷ್ಟಲ್ಲಿದ್ದಾಗ, ಜಿ.ಶಂಕರ್ ಫ್ರಂಟ್‌ಲೈನ್ ವಾರಿಯರ್ಸ್ ಸಂಚಾಲಕ ಜಯ ಸಿ.ಕೋಟ್ಯಾನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯದ ಮುನೀರ್ ಕಲ್ಮಾಡಿ ನೆರವಿಗೆ ದಾವಿಸಿದರು.
ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲು ಸೂಕ್ತ ಸ್ಪಂದನೆ ದೊರಕದಿದ್ದಾಗ, ನಗರಸಭೆ ಅನುಮತಿ ಪಡೆದು ಮೃತ ಸಂಬಂಧಿಗಳ ಒಪ್ಪಿಗೆ ಪಡೆದು ಉಡುಪಿಯ ಇಂದ್ರಾಳಿ ಹಿಂದೂರುದ್ರ ಭೂಮಿಯಲ್ಲಿ ಶವದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಮೃತ ಮಹಿಳೆಯ ಪುತ್ರಿಯರು ಹಾಜರಿದ್ದರು.
ಮೊಗವೀರ ಯುವ ಸಂಘಟನೆಯ ಮಾರ್ಗದರ್ಶಕರಾದ ಡಾ.ಜಿ. ಶಂಕರ್, ಮೊಗವೀರ ಯುವ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ಶಿವರಾಮ್ ಮಾರ್ಗದರ್ಶನದಲ್ಲಿ ಅಂತ್ಯಕ್ರಿಯೆ ನಡೆಯಿತು.
ರವೀಂದ್ರ ಶ್ರೀಯಾನ್, ಚಂದ್ರೇಶ್ ಪಿತ್ರೋಡಿ, ವಿಠಲ್ ಕರ್ಕೇರ ಬೆಳ್ಳಂಪಳ್ಳಿ, ರಫಿಕ್ ದೊಡ್ಡಣ್ಣಗುಡ್ಡೆ, ರುದ್ರಭೂಮಿ ಮೇಲ್ವಿಚಾರಕ ನಾಗಾರ್ಜುನ ಪೂಜಾರಿ, ಮನೋಹರ್ ಕರ್ಕಡ ನೆರವು ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.