ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾ ಬಗ್ಗೆ ಸಾರ್ವಜನಿಕರು ಭಯಪಡಬೇಕಿಲ್ಲ, ಹೆದರುವ ಅವಶ್ಯಕತೆಯೂ ಇಲ್ಲ’

Last Updated 7 ಜುಲೈ 2020, 12:07 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್ ಸೋಂಕು ತಗುಲಿ ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬ್ರಹ್ಮಾವರ ಸಮೀಪದ ಕೋಟ ಮೂಲದ ಹೋಟೆಲ್‌ ಮಾಲೀಕರೊಬ್ಬರು ಪತ್ನಿಗೆ ವಿಡಿಯೊಕಾಲ್ ಮಾಡಿ ನೃತ್ಯ ಮಾಡುತ್ತಾ ಧೈರ್ಯ ತುಂಬಿರುವ ವಿಡಿಯೊಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಡಾ.ರಾಜ್‌ಕುಮಾರ್ ನಟನೆಯ ಹಾಡಿಗೆ ಹೆಜ್ಜೆ ಹಾಕಿರುವ ಉದ್ಯಮಿ, ಕೊರೊನಾ ಸೋಂಕಿನ ವಿರುದ್ಧ ಭಯ ಬೇಡ ಎಂದು ಸಾರ್ವಜನಿಕರಲ್ಲಿ ಧೈರ್ಯ ತುಂಬಿದ್ದಾರೆ‌.

‘ಜುಲೈ ಒಂದರಂದು ನನಗೆ ಕೋವಿಡ್ ಸೋಂಕು ತಗುಲಿರುವುದು ತಿಳಿಯಿತು. ಆಸ್ಪತ್ರೆಗೆ ದಾಖಲಾಗಿ ವಾರ ಕಳೆದಿದೆ. ಇಲ್ಲಿ ಯಾವ ಸಮಸ್ಯೆ ಇಲ್ಲ, ಕೊರೊನಾ ಸೋಂಕಿನ ಬಗ್ಗೆ ಸಾರ್ವಜನಿಕರು ಭಯಪಡಬೇಕಿಲ್ಲ, ಹೆದರುವ ಅವಶ್ಯಕತೆಯೂ ಇಲ್ಲ, ಸೋಂಕಿತರಿಗೆ ಯಾವ ಔಷಧ ಕೊಡುವುದಿಲ್ಲ, ಆಪರೇಷನ್ ಮಾಡುವುದಿಲ್ಲ, ಧೈರ್ಯದಿಂದ ಇದ್ದರೆ ರೋಗ ಗುಣಮುಖವಾಗುತ್ತದೆ’ ಎಂದು ಅನುಭವ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT