ಗುರುವಾರ , ಆಗಸ್ಟ್ 5, 2021
21 °C
ಜಿಲ್ಲೆಯಲ್ಲಿ 22 ಮಂದಿಗೆ ಕೋವಿಡ್‌–19 ದೃಢ

ಉಡುಪಿ: ಪ್ರಾಥಮಿಕ ಸಂಪರ್ಕದಿಂದ ಸೋಂಕು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಸೋಂಕಿತರ ಜತೆಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹೆಚ್ಚಿನವರಿಗೆ ಸೋಂಕು ತಗುಲುತ್ತಿರುವುದು ಆತಂಕ ಸೃಷ್ಟಿಸಿದೆ. ಬುಧವಾರ 22 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು, ಹೆಚ್ಚಿನವರು ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ.‌ 

ಪ್ರಾಥಮಿಕ ಸಂಪರ್ಕ:

ರೋಗಿ ಸಂಖ್ಯೆ ಪಿ–11329, ‍ಪಿ–11330 ಸಂಪರ್ಕಕ್ಕೆ ಬಂದ ಆರು ಜನರಲ್ಲಿ, ಪಿ–10568 ಸೋಂಕಿತನಿಂದ ಇಬ್ಬರಿಗೆ, ಪಿ–12043 ಸಂಪರ್ಕದಿಂದ ಇಬ್ಬರಿಗೆ, ಪಿ–13351 ಸಂಪರ್ಕದಿಂದ ಒಬ್ಬರಿಗೆ, ಪಿ–10186, ಪಿ–10187 ಸಂಪರ್ಕದಿಂದ ಒಬ್ಬರಿಗೆ, ಪಿ–13352, ಪಿ–4720 ವ್ಯಕ್ತಿಗಳಿಂದ ಇಬ್ಬರಿಗೆ ಸೋಂಕು ಹರಡಿದೆ.

ಹೊರಗಿನಿಂದ ಬಂದವರು:

ಮಹಾರಾಷ್ಟ್ರದಿಂದ ಬಂದಿದ್ದ ನಾಲ್ವರಲ್ಲಿ, ಅಬುದಾಬಿಯಿಂದ ಬಂದಿದ್ದ ಒಬ್ಬರಲ್ಲಿ, ತೆಲಂಗಾಣದಿಂದ ಬಂದಿದ್ದ ಒಬ್ಬರಲ್ಲಿ ಹಾಗೂ ಬೆಂಗಳೂರಿನ ಪ್ರಯಾಣದ ಹಿನ್ನೆಲೆ ಇರುವ ಒಬ್ಬರಲ್ಲಿ ಸೋಂಕು ಕಂಡುಬಂದಿದೆ. ಸೋಂಕಿತರಲ್ಲಿ 8 ಮಹಿಳೆಯರು, 8 ಪುರುಷರು ಒಂದು ವರ್ಷದ ಮಗು ಸೇರಿದಂತೆ 6 ಮಕ್ಕಳು ಇದ್ದಾರೆ. ಎಲ್ಲರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.‌

ಸೋಂಕಿತರ ಸಂಖ್ಯೆ 1,228ಕ್ಕೇರಿಕೆಯಾಗಿದ್ದು, 1,058 ಮಂದಿ ಗುಣಮಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 168 ಸಕ್ರಿಯ ಪ್ರಕರಣಗಳಿವೆ.

263 ಮಾದರಿ ರವಾನೆ:

ಬುಧವಾರ 263 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಗಳಿಗೆ ಕಳುಹಿಸಲಾಗಿದೆ. 397 ವರದಿಗಳು ಬರುವುದು ಬಾಕಿ ಇದೆ. ಸೋಂಕಿನ ಲಕ್ಷಣಗಳು ಕಂಡುಬಂದ 20 ಮಂದಿಯನ್ನು ಐಸೊಲೇಷನ್‌ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು