ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಹಣ ಸುಲಿಗೆ: ನಾಲ್ವರ ವಿರುದ್ಧ ಪ್ರಕರಣ ದಾಖಲು

Published 21 ಜೂನ್ 2024, 16:22 IST
Last Updated 21 ಜೂನ್ 2024, 16:22 IST
ಅಕ್ಷರ ಗಾತ್ರ

ಉಡುಪಿ: ಆತ್ರಾಡಿ ಗ್ರಾಮದ ಮಹಮ್ಮದ್‌ ನಿಹಾಲ್‌ ಎಂಬುವವರಿಗೆ ಚಾಕು ತೋರಿಸಿ, ಹಣ ದೋಚಿದ ಆರೋಪದಲ್ಲಿ ನಾಲ್ವರ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ಸಿನ ಕಲೆಕ್ಷನ್ ವ್ಯವಹಾರ ನೋಡಿಕೊಳ್ಳುವ ನಿಹಾಲ್‌ರನ್ನು ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಡ್ಡಗಟ್ಟಿ, ಚಾಕು ತೋರಿಸಿ ಬಲವಂತವಾಗಿ ಕರೆದುಕೊಂಡು ಹೋಗಿ ಅವರ ಬಳಿಯಿದ್ದ ₹1 ಲಕ್ಷವನ್ನು ದೋಚಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಶಾರೀಕ್‌, ಇರ್ಫಾನ್‌ ಹಾಗೂ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಹೂಡಿಕೆ ಆಮಿಷ: ಹಣ ವಂಚನೆ

ಉಡುಪಿ: ವಾಟ್ಸ್ಆ್ಯಪ್‌ನಲ್ಲಿ ಹೂಡಿಕೆಗೆ ಸಂಬಂಧಿಸಿದ ಸಂದೇಶ ಕಳುಹಿಸಿ, ಹಣ ಪಡೆದು ವಂಚಿಸಿದ ಆರೋಪದಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ವೇದವ್ಯಾಸ್‌ ಎಂಬುವವರಿಗೆ ಅಪರಿಚಿತರು ಟ್ರೇಡಿಂಗ್‌ ಬಗ್ಗೆ ಸಂದೇಶ ಕಳುಹಿಸಿ, ಹೆಚ್ಚಿನ ಲಾಭ ಪಡೆಯುವ ಆಮಿಷವೊಡ್ಡಿದ್ದರು. ಅವರ ಬ್ಯಾಂಕ್‌ ಖಾತೆಗಳಿಗೆ ಹಣ ಕಳುಹಿಸಲು ಸೂಚಿಸಿದ್ದರು. ಅದರಂತೆ ವೇದವ್ಯಾಸ್‌ ಅವರು, ಹಂತ ಹಂತವಾಗಿ ಒಟ್ಟು ₹23,73,891 ವನ್ನು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಹೂಡಿಕೆ ಮಾಡಿದ ಹಣವನ್ನಾಗಲೀ, ಲಾಭವನ್ನಾಗಲಿ ನೀಡದೆ ಅಪರಿಚಿತರು ವಂಚಿಸಿರುವುದಾಗಿ ದೂರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT