ಮಕ್ಕಳ ಸಂಖ್ಯೆ ಪಠ್ಯವಿಷಯಕ್ಕನುಗುಣವಾಗಿ ವರ್ಗಾವಣೆಗೊಳ್ಳಬಹುದಾಗಿದೆ. ಸರ್ಕಾರದ ನಿರ್ದೇಶನದಂತೆ ತಾಲ್ಲೂಕಿನಲ್ಲಿ ಶೇ 25ಕ್ಕಿಂತ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇದ್ದರೆ ಆ ತಾಲ್ಲೂಕಿನಿಂದ ಶಿಕ್ಷಕರು ವರ್ಗಾವಣೆ ಹೊಂದುವಂತಿಲ್ಲ. ಕಳೆದ ಬಾರಿಯೂ ಕಾರ್ಕಳ ತಾಲ್ಲೂಕಿನಲ್ಲಿ ಶೇ 25ರಷ್ಟು ಹುದ್ದೆ ಖಾಲಿ ಇದ್ದದ್ದರಿಂದ ವರ್ಗಾವಣೆ ಸಾಧ್ಯವಾಗಿಲ್ಲ. ಆದರೆ ಈ ಬಾರಿ ಶೇ 23ರಷ್ಟು ಹುದ್ದೆ ಖಾಲಿ ಇರುವುದರಿಂದ 10ರಿಂದ 15 ಮಂದಿ ಶಿಕ್ಷಕರ ವರ್ಗಾವಣೆಗೆ ಅವಕಾಶ ದೊರೆತಿದೆ. ಕಾರ್ಕಳ ತಾಲ್ಲೂಕಿನಲ್ಲಿ 142 ಅತಿಥಿ ಶಿಕ್ಷಕರ ಅವಶ್ಯಕತೆಯಿದ್ದು 85 ಅತಿಥಿ ಶಿಕ್ಷಕರ ನೇಮಕಾತಿ ನಡೆದಿದೆ. ನಾನು ಬಿಆರ್‌ಪಿ ಪರೀಕ್ಷೆ ಬರೆದಿದ್ದು ಫಲಿತಾಂಶ ಬಂದಿದ್ದು ಕೌನ್ಸೆಲಿಂಗ್ ಬಾಕಿ ಇದೆ. ಬಿಆರ್‌ಪಿಯಾಗಿ ಶಾಲೆ ಬಿಟ್ಟು ಹೋದರೆ ಈ ಶಾಲೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಉಳಿಯುತ್ತದೆ ಎಂಬ ದೃಷ್ಟಿಯಿಂದ ವರ್ಗಾವಣೆಗೊಳ್ಳುತ್ತಿದ್ದೇನೆ.