ಭಾನುವಾರ, ಸೆಪ್ಟೆಂಬರ್ 25, 2022
30 °C

ಉಡುಪಿ ಬಳಿ ಅಪಘಾತ: ಬೆಳಗಾವಿ ಮೂಲದ ತಂದೆ ಸಾವು, ಮಗನ ಸ್ಥಿತಿ ಗಂಭೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಪು (ಉಡುಪಿ): ರಾಷ್ಟ್ರೀಯ  ಹೆದ್ದಾರಿ 66ರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಮುಂಭಾಗದಲ್ಲಿ ವಾಹನವೊಂದು ಡಿಕ್ಕಿಯಾಗಿ ಬೆಳಗಾವಿ ಮೂಲದ ಪ್ರಭಾಕರ ಖೋತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅವರ ಮಗ  ಸಮರ್ಥ್ (14) ತೀವ್ರ ಗಾಯಗೊಂಡಿದ್ದು, ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಗ ಸಮರ್ಥನನ್ನು ಕಾಪು ಸಮೀಪದ ಕುತ್ಯಾರಿನ ಆನೆಗುಂದಿ ಸಂಸ್ಥಾನದ ವಿದ್ಯಾ ಸಂಸ್ಥೆಯಲ್ಲಿ ದಾಖಲಾತಿ ಮಾಡಲು ಬಂದಿದ್ದರು. ಇಬ್ಬರೂ  ಬೆಳಗಾವಿಯಿಂದ ಮಂಗಳವಾರ ರಾತ್ರಿ  ಬಸ್ಸು ಮೂಲಕ ಹೊರಟು, ಉಚ್ಚಿಲದಲ್ಲಿ ಬಸ್ಸಿನಿಂದ ಇಳಿದು ರಸ್ತೆ ಪಕ್ಕದಲ್ಲಿ ನಿಂತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಪ್ರಭಾಕರ್ ಮೃತಪಟ್ಟು,ಸಮರ್ಥ್ ಗಂಭೀರ ಗಾಯಗೊಂಡಿದ್ದಾನೆ.

ಪಡುಬಿದ್ರಿ‌ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು