ಕುಂದಾಪುರ: ಏಕತೆಯಲ್ಲಿ ಬಲವಿದೆ. ಏಕತೆಯಲ್ಲಿ ಬದುಕಿನ ಸಾರ್ಥಕತೆಯೂ ಇದೆ ಎಂದು ಡಾ.ಗಾಯತ್ರಿ ಭಂಡಾರ್ಕರ್ ಹೇಳಿದರು.

ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದ ಅವರು ಪರರ ಕುರಿತ ಟೀಕೆ, ಹೋಲಿಕೆ ಹಾಗೂ ದೂರು ಹೇಳುವ ಯೋಚನೆಗಳನ್ನು ತೊಡೆದುಹಾಕಿ ಏಕತೆಯ ಬೀಜ ಬಿತ್ತಬೇಕು ಎಂದರು.

ಅವರ ಸಹೋದರಿ ಅಮೇರಿಕಾದಲ್ಲಿ ಚರ್ಮರೋಗ ತಜ್ಞೆಯಾಗಿರುವ ಡಾ.ಸುಲೋಚನಾ, ಇನ್ನೊಬ್ಬರ ಯಶಸ್ಸು ಮತ್ತು ಸಂತೋಷದಲ್ಲಿ ಪಾಲ್ಗೊಳ್ಳುವುದರಿಂದ ಧನಾತ್ಮಕ ಶಕ್ತಿ ವೃದ್ಧಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಂತಾರಾಮ್ ಭಂಡಾರ್ಕಾರ್, ದೇವರ ಭಯವೇ ಜ್ಞಾನದ ಮೂಲ. ಜ್ಞಾನದ ಜೊತೆಗೆ ಒಳ್ಳೆಯದನ್ನು ಯೋಚಿಸಬೇಕು ಎಂದರು. ಭಾರತದ ನವ ಸಂಕಲ್ಪದ ಆಶಯಗಳನ್ನು ಸಾಕಾರಗೊಳಿಸಬೇಕು ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಆಡಳಿತಾಧಿಕಾರಿ ಡಾ.ಶ್ರೀಧರ ಪೈ ಹೇಳಿದರು.

ಡಾ.ಅರುಣಾ ಭಂಡಾರ್ಕಾರ್, ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ರಾಜೇಂದ್ರ ತೋಳಾರ್, ಆಡಳಿತ ಮಂಡಳಿಯ ಕಾರ್ಯದರ್ಶಿ ಯು.ಎಸ್.ಶೆಣೈ ಪಾಲ್ಗೊಂಡಿದ್ದರು.

ಅಂತತ ಕಾಲೇಜು ಸಂಗೀತ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಶುಭಕರಾಚಾರಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ ಗೊಂಡ ವಂದಿಸಿದರು. ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಶಶಿಕಾಂತ್ ಹತ್ವಾರ್ ಸಂಸ್ಥಾಪಕರ ಕುರಿತು ಮಾತನಾಡಿದರು. ಕಂಪ್ಯೂಟರ್ ಉಪನ್ಯಾಸಕಿ ವಿಜಯಲಕ್ಷ್ಮಿ ಶೆಟ್ಟಿ ನಿರೂಪಿಸಿದರು. ಉಪನ್ಯಾಸಕಿಯರಾದ ಶೈಲಾ ಆರ್, ಮತ್ತು ಸ್ಮಿತಾ ಪರಿಚಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.