ಬ್ರಹ್ಮಾವರ: ‘ಪಿಡಿಒಗಳು ಸಾಮಾನ್ಯ ಸಭೆಯ ನಿರ್ಣಯಗಳಿಗೆ ವ್ಯತಿರಿಕ್ತವಾಗಿ, ಕೆಲವೊಮ್ಮೆ ಸಾಮಾನ್ಯ ಸಭೆಯ ಗಮನಕ್ಕೆ ತಾರದೆ ಗ್ರಾ.ಪಂ ವ್ಯಾಪ್ತಿಯ ಪ್ರಮುಖ ಪರವಾನಗಿ ನೀಡುವುದರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ’ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.

ಬ್ರಹ್ಮಾವರದಲ್ಲಿ ಬುಧವಾರ ನಡೆದ ತಾಲ್ಲೂಕು ವ್ಯಾಪ್ತಿಯ ಕೆ.ಡಿ.ಪಿ ಸಭೆಯಲ್ಲಿ ಅವರು ಮಾತನಾಡಿದರು.

‘ಇತ್ತೀಚೆಗೆ ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೋಮ್ ಸ್ಟೇ, ಹಾವಂಜೆಯಲ್ಲಿ ಕಟ್ಟಡವೊಂದಕ್ಕೆ ಪರವಾನಗಿ, ಆರೂರಿನಲ್ಲಿ ಜಲ್ಜೀವನ್ ಮಿಷನ್ ಕಾಮಗಾರಿಗೆ ಈ ರೀತಿ ಶಿಫಾರಸ್ಸು, ಪರವಾನಗಿ ನೀಡಿ ಸಾಕಷ್ಟು ಸಮಸ್ಯೆಯಾಗಿದೆ. ಕಾನೂನಿನಲ್ಲಿ ಇದಕ್ಕೆ ಅವಕಾಶಗಳಿದ್ದರೆ ಅಧಿಕಾರಿಗಳು ನಮಗೆ ದಾಖಲೆ ನೀಡಬೇಕು. ಇಲ್ಲವಾದರೆ ಮುಂದೆ ಯಾವುದೇ ಪರವಾನಗಿ ನೀಡಬೇಕಿದ್ದರೂ, ಗ್ರಾ.ಪಂ ಸಾಮಾನ್ಯ ಸಭೆಯ ಅನುಮೋದನೆ ಇಲ್ಲದೆ ನೀಡಬಾರದು’ ಎಂದು ತಿಳಿಸಿದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ‘ಬ್ರಹ್ಮಾವರ ಸೇರಿದಂತೆ ಕುಂದಾಪುರ, ಹೆಬ್ರಿ ತಾ.ಪಂ. ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮ ಕಡತ ವಿಲೇವಾರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ. ನೂರಾರು ಅರ್ಜಿಗಳಿದ್ದರೂ ಹತ್ತು ಹಕ್ಕುಪತ್ರವನ್ನು ಕೂಡ ಇದುವರೆಗೆ ನೀಡಲಾಗುತ್ತಿಲ್ಲ, ಫಲಾನುಭವಿಗಳು ಜನಪ್ರತಿನಿಧಿಗಳನ್ನು ದೂರುತ್ತಿದ್ದಾರೆ. ಈ ನಿಟ್ಟಿನಲ್ಲಿ ತಹಶೀಲ್ದಾರರು ಸರಿಯಾಗಿ ಕೆಲಸ ಮಾಡಬೇಕು. ಅಕ್ರಮ–ಸಕ್ರಮ ಸಮಿತಿಯ ಸಭೆಯನ್ನು ಶೀಘ್ರವಾಗಿ ಕರೆದು ಕಡತ ವಿಲೇವಾರಿ ಮಾಡಬೇಕು. ಪ್ರತಿವಾರ ಸಭೆ ನಡೆಸಿದರೂ ತಾನು ಹಾಜರಾಗಲು ಸಿದ್ಧವಿದ್ದೇನೆ’ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಸುನೀತಾ ಶೆಟ್ಟಿ ಮಾತನಾಡಿ, ‘ಬ್ರಹ್ಮಾವರ ಭಾಗದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಒಯ್ದರೆ, ಅಲ್ಲಿ ಸರಿಯಾಗಿ ಸ್ಪಂದನೆ ನೀಡುವುದಿಲ್ಲ. ಇದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಗಮನಹರಿಸಿ ಸಮಸ್ಯೆ ಸರಿಪಡಿಸಿ ಹಾಗೂ ಬೆಳೆ ವಿಮೆ ನೋಂದಣಿಗೆ ಜಿಲ್ಲೆಯಲ್ಲಿ ನೋಂದಣಿ ಅವಧಿ ಕಡಿಮೆ ಇರುವ ಬಗ್ಗೆ’ ಗಮನ ಸೆಳೆದರು.

ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ತಾ.ಪಂ. ಆಡಳಿತಾಧಿಕಾರಿ ಕ್ಷಮಾ ಪಾಟೀಲ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂಪುರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಬಾರ್ಕೂರು ಗ್ರಾಮ ಪಂಚಾಯಿತಿ ಪಿಡಿಒ ಮಹೇಶ್ ಕುಮಾರ್ ನಿರೂಪಿಸಿದರು.

ಅಕ್ರಮ-ಸಕ್ರಮ ಕಡತ ವಿಲೇವಾರಿ ವಿಳಂಬ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆಗೆ ಆಗ್ರಹ ಕಟ್ಟಡ ಪರವಾನಗಿಗೆ ಸೂಕ್ತ ದಾಖಲೆ ಅಗತ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.