ಉಡುಪಿ: 76 ಬಡಗಬೆಟ್ಟು ಗ್ರಾಮದಲ್ಲಿ ಈಚೆಗೆ ಮನೆಯ ಹಿಂಬಾಗಿಲು ಮುರಿದು ಒಳ ಪ್ರವೇಶಿಸಿ ಲಾಕರಿನಲ್ಲಿಟ್ಟಿದ್ದ ₹8.46 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮಲ್ಲಾರಿನ ತೌಸಿಫ್ ಬಂಧಿತ ಆರೋಪಿ. ಕಳವು ಮಾಡಿದ್ದ 155 ಗ್ರಾಂ ಚಿನ್ನಾಭರಣವನ್ನು ವಶಪಡಿಸಕೊಳ್ಳಲಾಗಿದೆ. ಆರೋಪಿ ವಿರುದ್ಧ ಬಂಟ್ವಾಳ, ಪಣಂಬೂರು, ಬಜ್ಪೆ ಠಾಣೆಗಳಲ್ಲಿ ಮನೆಗಳ್ಳತನ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳವು ಮಾಡಿದ ಬಂಗಾರದ ವಿವರ: 5 ಪವನ್ ಚಿನ್ನದ ಕರಿಮಣಿ ಸರ, 2 ಪವನ್ ಚಿನ್ನದ ಚೈನ್, ಒಂದೂವರೆ ಪವನ್ ನೆಕ್ಲೇಸ್, 2 ಪವನ್ ಚಿನ್ನದ ಉಂಗುರ, ಮುಕ್ಕಾಲು ಪವನ್ ಚಿನ್ನದ ಜುಮುಕಿ, ಬೆಂಡೋಲೆ, 4 ಪವನ್ ನೆಕ್ಲೇಸ್, 3 ಪವನ್ ಬಳೆ, 2 ಪವನ್ ಬಳೆ, ಮುಕ್ಕಾಲು ಪವನ್ ಲೋಲಕ, ಬೆಂಡೋಲೆ, 1/2 ಪವನ್ ಉಂಗುರ, 2 ಪವನ್ ಕಿವಿಯೋಲೆ ಸೇರಿ 188 ಗ್ರಾಂ ಚಿನ್ನಾಭರಣ ಹಾಗೂ ₹15,500 ನಗದು ಕಳುವಾಗಿತ್ತು.

ಉಡುಪಿ ಇನ್‌ಸ್ಪೆಕ್ಟರ್ ಡಿ.ಆರ್. ಮಂಜಪ್ಪ, ಪಿಎಸ್‌ಐ ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ, ಪುನೀತ್ ಕುಮಾರ್, ಸಿಬ್ಬಂದಿ ಸತೀಶ್ ಬೆಳ್ಳೆ, ಚೇತನ್, ಆನಂದ, ಎಸ್. ಶಿವಕುಮಾರ್, ರಿಯಾಜ್ ಅಹಮದ್, ವಿಶ್ವನಾಥ ಶೆಟ್ಟಿ, ಕಿರಣ್, ಹೇಮಂತ್ ಕುಮಾರ್, ಓಬಳೇಶ್, ರಾಜೇಂದ್ರ ಅವರನ್ನೊಳಗೊಂಡ ತಂಡ ಆರೋಪಿ ತೌಸಿಫ್ ಅಹಮದ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.