ಕೋಟ (ಬ್ರಹ್ಮಾವರ): 16 ವರ್ಷಗಳ ಹಿಂದೆ ಕೋಟ ಅಸುಪಾಸಿನ, ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಬ್ರಹ್ಮಾವರ, ಉಡುಪಿ, ಕುಂದಾಪುರಕ್ಕೆ ಹೋಗಬೇಕಾಗಿತ್ತು. ಕೆಲವರು ಪಿಯುಸಿ ನಂತರ ಶಿಕ್ಷಣ ಮೊಟಕುಗೊಳಿಸಿ, ಉದ್ಯೋಗ ಅರಸಿ ಪಟ್ಟಣಗಳಿಗೆ ಹೋಗುವ ಕಾಲವಿತ್ತು. ಆದ್ದರಿಂದ ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ತಮ್ಮ ಊರಿನಲ್ಲೇ ಸಿಗಬೇಕು ಎನ್ನುವ ಹಂಬಲದಿಂದ ಸ್ಥಳೀಯ ಜನಪ್ರತಿನಿಧಿಗಳು, ಕಾಲೇಜು ಸ್ಥಾಪನಾ ಸಮಿತಿ, ಕಾಲೇಜು ಶಿಕ್ಷಣ ಇಲಾಖೆ, ಸ್ಥಳೀಯ ವಿದ್ಯಾಭಿಮಾನಿಗಳ ಅವಿರತ ಶ್ರಮದಿಂದ 2007ರಲ್ಲಿ ಕೋಟ ಪಡುಕರೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭವಾಯಿತು.

ಕಾಲೇಜು ಕಟ್ಟಡಕ್ಕೆ ಅವಶ್ಯವಿದ್ದ ನಿವೇಶನ ಜಿ. ಶಂಕರ್ ದೇಣಿಗೆಯಾಗಿ ನೀಡಿದರು. ಅವರ ತಂದೆ–ತಾಯಿ ನೆನಪಿನಲ್ಲಿ ಕಾಲೇಜು ಲಕ್ಷ್ಮಿಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎಂದು ಮರು ನಾಮಕರಣಗೊಂಡಿತು.

2007–08ರ ಶೈಕ್ಷಣಿಕ ಸಾಲಿನಲ್ಲಿ ಬಿ.ಎ. ಮತ್ತು ಬಿ.ಬಿ.ಎಂ ಕೋರ್ಸ್ನೊಂದಿಗೆ 70 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಬಿ.ಎ, ಬಿ.ಕಾಂ, ಬಿ.ಸಿ.ಎ, ಬಿ.ಎಸ್.ಡಬ್ಲ್ಯು ಕೋರ್ಸ್ಗಳಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೆಲವು ಸರ್ಟಿಫಿಕೇಟ್ ಕೋರ್ಸ್ಗಳನ್ನೂ ನಡೆಸಲಾಗುತ್ತಿದೆ.

ಯು.ಜಿ.ಸಿ.ಯಿಂದ 12 ಬಿಪಿಎಫ್ ಮಾನ್ಯತೆ, ಮಂಗಳೂರು ವಿಶ್ವವಿದ್ಯಾನಿಲಯದ ಶಾಶ್ವತ ಸಂಯೋಜನೆಗೆ ಒಳಪಟ್ಟಿರುವ ಸಂಖ್ಯೆ, 2016–17ನೇ ಶೈಕ್ಷಣಿಕ ಸಾಲಿನಲ್ಲಿ ನ್ಯಾಕ್ನ ಪ್ರಥಮ ಆವೃತ್ತಿಯ ಮೌಲ್ಯಮಾಪನದಲ್ಲಿ ‘ಬಿ’ ಮತ್ತು 2022–23ರಲ್ಲಿ ಬಿ++ ಮಾನ್ಯತೆ ಪಡೆದಿದೆ.

ಕೋಟದಿಂದ 3.5 ಕಿ.ಮೀ ದೂರದ ಸಮುದ್ರ ಕಿನಾರೆಯಲ್ಲಿರುವ ಈ ಕಾಲೇಜು ದಶಮಾನೋತ್ಸವ ಪೂರೈಸಿದೆ. ಸ್ಥಳೀಯ ದಾನಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರೂ ಆದ ಆನಂದ ಸಿ.ಕುಂದರ್ ಅವರ ಉಸ್ತುವಾರಿಯಲ್ಲಿ ಕಾಲೇಜಿಗೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಪಡೆದಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು, ಹೂವಿನ ತೋಟಗಳ ನಿರ್ವಹಣೆಯನ್ನು ಸ್ವತಃ ಕುಂದರ್ ಅವರೇ ಮಾಡುತ್ತಿರುವುದು ವಿಶೇಷ.

ಅನುಭವಿ, ಪ್ರತಿಭಾನ್ವಿತ ಬೋಧಕ–ಬೋಧಕೇತರ ವೃಂದವನ್ನು ಹೊಂದಿರುವ ಕಾಲೇಜು, ಗ್ರಾಮೀಣ ಭಾಗದ ಬಡ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಮತ್ತು ಬಹುತೇಕ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣದ ಕನಸನ್ನು ಸಾಕ್ಷಾತ್ಕಾರಗೊಳಿಸುವ ವಿದ್ಯಾಸಂಸ್ಥೆಯಾಗಿ ಪ್ರಸಿದ್ದಿ ಹೊಂದಿ ಪ್ರತಿ ವರ್ಷ ಉತ್ತಮ ಫಲಿತಾಂಶ ಪಡೆಯುತ್ತಿದೆ.

ವಿಶ್ವವಿದ್ಯಾನಿಲಯ ಮಟ್ಟದ ಚಟುವಟಿಕೆಗಳಾದ ಪುರುಷರ ಬಾಲ್ ಬ್ಯಾಡ್ಮಿಂಟನ್, ಕ್ರಿಕೆಟ್ ಟೂರ್ನಿ, ನಾಯಕತ್ವ ತರಬೇತಿ ಶಿಬಿರ, ಸಾಂಸ್ಕೃತಿಕ ಸ್ಪರ್ಧೆ ಆರೋಹ, ಮಹಿಳಾ ಸಬಲೀಕರಣದ ಆಶಯದ ‘ಸ್ಪಂದನ’ ರೋವರ್ಸ್–ರೇಂಜರ್ಸ್ ಶಿಬಿರ, ಮಂಗಳೂರು ವಿ.ವಿಯ ರಂಗೋತ್ಸವ, ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಜಿಸಿ ಎನ್.ಇ.ಟಿ, ಕೆ.ಸೆಟ್ ತರಬೇತಿ, ಲಿಂಗಸೂಕ್ಷ್ಮತಾ ಕಾರ್ಯಾಗಾರ ಜತೆಗೆ ಮಾನವ ಹಕ್ಕುಗಳ ಕುರಿತಾದ ಅಂತರ ರಾಜ್ಯಮಟ್ಟದ ವಿಚಾರ ಸಂಕಿರಣಗಳನ್ನು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿಗಾಗಿ ಆಯೋಜಿಸುತ್ತಿದೆ. ಉದ್ಯೋಗ ಮೇಳ ಆಯೋಜಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಜೀವನಕ್ಕೂ ದಾರಿ ಮಾಡಿಕೊಡುತ್ತಿದೆ.

ಕೊರತೆ: ಕೋಟದಿಂದ ಮೂರುವರೆ ಕಿ.ಮೀ ಅಂತರದಲ್ಲಿರುವ ಕಾಲೇಜಿಗೆ ಹೋಗಲು ಬಸ್ಸು ವ್ಯವಸ್ಥೆ ಸರಿಯಾಗಿಲ್ಲ. ತರಗತಿ ಪ್ರಾರಂಭ, ಮುಕ್ತಾಯದ ಸಮಯದಲ್ಲಿ ಹೆಚ್ಚು ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ, ಸಾರಿಗೆ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ವಿದ್ಯಾರ್ಥಿಗಳ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.