ನಮ್ಮ ಊರಿಗೆ ಬರುತ್ತಿದ್ದ ಸರ್ಕಾರಿ ಬಸ್ ಈಗ ಸಂಚಾರ ನಿಲ್ಲಿಸಿದೆ. ಇದರಿಂದ ಪ್ರತಿದಿನ ಕಾಲೇಜಿಗೆ ಹೋಗುವಾಗ ಮತ್ತು ಬರುವಾಗ ಒಂದು ಗಂಟೆ ನಡೆದುಕೊಂಡು ಹೋಗಬೇಕಾಗಿದೆ
ಅಸ್ಮಿತ ವಿದ್ಯಾರ್ಥಿನಿ ಬಡಾಕೆರೆ
ನಮ್ಮ ರೂಟ್‌ನಲ್ಲಿ ಖಾಸಗಿ ಬಸ್‌ಗೆ ಪರ್ಮಿಟ್ ಇದ್ದರೂ ಜನರಿಲ್ಲವೆಂದು ಸಂಚಾರ ನಡೆಸುವುದಿಲ್ಲ. ಸರ್ಕಾರಿ ಬಸ್ ಸೌಲಭ್ಯ ಇಲ್ಲ. ಪ್ರತಿದಿನ ಮೂರ್ನಾಲ್ಕು ಕಿ.ಮೀ. ಕಾಡುದಾರಿಯಲ್ಲಿ ಸಾಗಬೇಕು
ನವ್ಯ ವಿದ್ಯಾರ್ಥಿನಿ ಪಡುಕೋಣೆ
ಬಡಾಕೆರೆ–ನಾವುಂದ ಮಾರ್ಗವಾಗಿ ಹಿಂದೆ ಕೆಎಸ್‌ಆರ್‌ಟಿಸಿ ಬಸ್ ಇತ್ತು. ಈಗ ಅದರ ಸಂಚಾರವನ್ನು ನಿಲ್ಲಿಸಿರುವುದರಿಂದ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತಲುಪಲು ರಿಕ್ಷಾದಲ್ಲಿ ಹೋಗಬೇಕಾದ ಅನಿವಾರ್ಯತೆ ಇದೆ
ಆದಿತ್ಯ ಅಡಿಗ ವಿದ್ಯಾರ್ಥಿ ಬಡಾಕೆರೆ
ಜಿಲ್ಲೆಯಲ್ಲಿ ಸಾರಿಗೆ ಪ್ರಾಧಿಕಾರದ ಸಭೆ ಹಲವು ತಿಂಗಳಿಂದ ನಡೆದಿಲ್ಲ. ಬೆಂದೂರು ಕುಂದಾಪುರ ವ್ಯಾಪ್ತಿಯ ಹಳ್ಳಿಗಳಿಗೆ ಸಮರ್ಪಕ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು ಕಾಡು ದಾರಿಯಲ್ಲಿ ನಡೆದು ಹೋಗಬೇಕಾಗಿದೆ