ಪ್ರಜಾವಾಣಿ ವಾರ್ತೆ

ಕುಂದಾಪುರ: ನಗರದ ತಾಲ್ಲೂಕು ಕೃಷಿ ಇಲಾಖೆ ಕಚೇರಿಯನ್ನು ಕೋಟೇಶ್ವರಕ್ಕೆ ಸ್ಥಳಾಂತರ ಗೊಳಿಸುತ್ತಿರುವುದಕ್ಕೆ ತಾಲ್ಲೂಕು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತರಿಗೆ ಒಂದೇ ಸೂರಿನಡಿಯಲ್ಲಿ ಎಲ್ಲಾ ಇಲಾಖೆ ಕಚೇರಿಗಳು ಸಿಗುವುದರಿಂದ ಉಪಯುಕ್ತವಾಗುತ್ತಿತ್ತು. ಆದರೆ, ಕೃಷಿ ಇಲಾಖೆ ಕಚೇರಿಯನ್ನು ಸ್ಥಳಾಂತರಿಸುವುದು ರೈತ ವಿರೋಧಿ ಕ್ರಮ. ಕಚೇರಿಯನ್ನು ಕೋಟೇಶ್ವರಕ್ಕೆ ಸ್ಥಳಾಂತರ ಮಾಡುವುದರಿಂದ ರೈತರಿಗೆ ಕಿರುಕುಳ ನೀಡಿದಂತೆ ಆಗುತ್ತದೆ. ಈಗಾಗಲೇ ಕೋಟೇಶ್ವರದಲ್ಲಿ ನಿರ್ಮಾಣಗೊಂಡಿರುವ ಕಟ್ಟಡವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಿ ಎಂದು ಸಲಹೆ ನೀಡಿರುವ ಅವರು, ಇಲ್ಲಿನ ಕಚೇರಿಯನ್ನು ಇದ್ದಲ್ಲೇ ಉಳಿಸಿಕೊಳ್ಳಬೇಕು, ಇಲ್ಲದೆ ಇದ್ದರೆ ಸಮಾನ ಮನಸ್ಕ ಸಂಘಟನೆಗಳ ಜೊತೆ ಹೋರಾಟ ಮಾಡಬೇಕಾಗುತ್ತದೆ. ಅಗತ್ಯ ಬಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.