ಶನಿವಾರ, ನವೆಂಬರ್ 26, 2022
23 °C
ಕುಂದಾಪುರ: ಆರ್.ಎನ್.ಶೆಟ್ಟಿ ಸಭಾಭವನ ಲೋಕಾರ್ಪಣೆ, ಸನ್ಮಾನ ಕಾರ್ಯಕ್ರಮದಲ್ಲಿ ಪ್ರತಾಪ್‌ಚಂದ್ರ ಶೆಟ್ಟಿ ಅಭಿಮತ

ಸಮಾಜಕ್ಕಾಗಿ ದುಡಿದವರ ಗೌರವಿಸುವುದು ಸುತ್ಯರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂದಾಪುರ: ಸಮಾಜದ ಏಳಿಗೆಗಾಗಿ ಶ್ರಮಿಸಿದವರನ್ನು, ಅಶಕ್ತರು, ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವವರನ್ನು ಗುರುತಿಸಿ ಗೌರವಿಸುವುದು ಸುತ್ಯರ್ಹ ಕಾರ್ಯ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಅಭಿಪ್ರಾಯಪಟ್ಟರು.

ಇಲ್ಲಿನ ನವೀಕೃತ ಆರ್.ಎನ್.ಶೆಟ್ಟಿ ಸಭಾಭವನದ ಲೋಕಾರ್ಪಣೆ, ಆರ್.ಎನ್.ಶೆಟ್ಟಿ ಪುತ್ಥಳಿ ಅನಾವರಣ, ಯಡ್ತರೆ ಮಂಜಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ, ಸಾಧಕರ ಸಮ್ಮಾನ, ಅಶಕ್ತರಿಗೆ ಸಹಾಯ, ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಹಾಯ ಮಾಡಿದವರನ್ನು ನೆನಪಿಸಿಕೊಳ್ಳುವುದು ಅತ್ಯವಶ್ಯ ಎನ್ನುವ ನೆಲೆಯಲ್ಲಿ ಬಂಟರ ಯಾನೆ ನಾಡವರ ಸಂಘ ಕೊಡುಗೆ ನೀಡಿದವರನ್ನು ಹಾಗೂ ಸಹಾಯ ಮಾಡಿದವರನ್ನು ನೆನಪಿಸುವ ಕೆಲಸ ಮಾಡುತ್ತಿದೆ. ಕೆಲವು ವಿಷಯಗಳಲ್ಲಿ ರಾಜಕಾರಣಿಗಳ ದ್ವಂದ್ವ ನಿಲುವು ನನ್ನನ್ನು ಹಲವು ವರ್ಷಗಳಿಂದ ಕಾಡುತ್ತಿದೆ’ ಎಂದು ಅವರು ಹೇಳಿದರು.

ದಿ.ಯಡ್ತರೆ ಮಂಜಯ್ಯ ಶೆಟ್ಟಿ ಸಂಸ್ಮರಣಾ ಪ್ರಶಸ್ತಿಯನ್ನು ಪಡೆದ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಎಂ. ಶಾಂತರಾಮ ಶೆಟ್ಟಿ ಮಾತನಾಡಿ, ಕುಂದಾಪುರ ಭಾಗದ ಬಂಟ ಸಮುದಾಯದವರ ಪರಂಪರೆ ಹಾಗೂ ಸಂಸ್ಕೃತಿ ವಿಶಿಷ್ಠ. ಈವರೆಗೆ ಸಿಕ್ಕ ಎಲ್ಲ ಪ್ರಶಸ್ತಿ, ಗೌರವಗಳಿಗಿಂತ ಹುಟ್ಟೂರಲ್ಲಿ ಮಂಜಯ್ಯ ಶೆಟ್ಟರ ಹೆಸರಲ್ಲಿ ಸಿಗುತ್ತಿರುವ ಈ ಪ್ರಶಸ್ತಿ ಹೆಚ್ಚು ಮೌಲ್ಯದ್ದು ಎಂದರು.

ಬಸ್ರೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಆರ್‌.ಎನ್‌.ಶೆಟ್ಟಿ ಪುತ್ಥಳಿ ಅನಾವರಣ ಮಾಡಿದರು. ನವೀಕೃತ ನೂತನ ಸಭಾಂಗಣವನ್ನು ಆರ್.ಎನ್.ಶೆಟ್ಟಿ ಅವರ ಸಹೋದರ ಸಂಬಂಧಿ ಎನ್.ಐ ಉದ್ಘಾಟಿಸಿದರು. ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರಿನ ಅಜಿತ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು.

ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಬೆಂಗಳೂರಿನ ಸೌತ್ ಫೀಲ್ಡ್ ಪೈಂಟ್ಸ್ ಆಡಳಿತ ನಿರ್ದೇಶಕ ಎಂ.ಶಿವರಾಮ ಹೆಗ್ಡೆ, ಕುಶಲ ಹೆಗ್ಡೆ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಬಿ. ಉದಯ ಕುಮಾರ್ ಹೆಗ್ಡೆ, ಸಂಘದ ಜತೆ ಕಾರ್ಯದರ್ಶಿ ಸಂಪಿಗೇಡಿ ಸಂಜೀವ ಶೆಟ್ಟಿ, ಬೆಂಗಳೂರು ಸಂಘದ ಗೌರವ ಕಾರ್ಯದರ್ಶಿ ಬಿ. ಆನಂದರಾಮ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಕೋಶಾ ಧಿಕಾರಿ ಅಮರನಾಥ ಶೆಟ್ಟಿ, ಉದ್ಯಮಿ ಸಂಜೀವ ಶೆಟ್ಟಿ ಕೋಣ್ಕಿ, ಮಂಗಳೂರು ಬಂಟರ ಯಾನೆ ನಾಡವರ ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ, ಯುವ ಬಂಟರ ಸಂಘದ ಅಧ್ಯಕ್ಷ ಡಾ.ಅಂಪಾರು ನಿತ್ಯಾನಂದ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ತಾಲ್ಲೂಕು ಸಮಿತಿಯ ಸದಸ್ಯರಾದ ಸೋಮಶೇಖರ ಶೆಟ್ಟಿ ಕೆಂಚನೂರು, ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ, ಚಿತ್ತರಂಜನ್ ಹೆಗ್ಡೆ ಹರ್ಕೂರು, ರೋಹಿತ್ ಕುಮಾರ ಶೆಟ್ಟಿ ಬ್ರಹ್ಮಾವರ, ಸುಪ್ರೀತಾ ದೀಪಕ್ ಶೆಟ್ಟಿ, ನಾಮ ನಿರ್ದೇಶಿತ ಸದಸ್ಯರಾದ ಕೃಷ್ಣ ಪ್ರಸಾದ ಅಡ್ಯಂತಾಯ, ಶಿವರಾಮ ಶೆಟ್ಟಿ ಮಲ್ಯಾಡಿ, ರಮೇಶ ಶೆಟ್ಟಿ ಗುಲ್ವಾಡಿ ಇದ್ದರು. ಬಂಟರ ಯಾನೆ ನಾಡವರ ಮಾತೃ ಸಂಘದ ತಾಲ್ಲೂಕು ಸಮಿತಿ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ ಸ್ವಾಗತಿಸಿದರು, ಸಹ ಸಂಚಾಲಕ ವಿಕಾಸ ಹೆಗ್ಡೆ ಕೋಳ್ಕೆರೆ ವಂದಿಸಿದರು.

ಕಂದಾವರ ದಿನಕರ ಶೆಟ್ಟಿ, ಪ್ರೊ.ರಾಧಾಕೃಷ್ಣ ಶೆಟ್ಟಿ, ಟಿ.ಬಿ.ಶೆಟ್ಟಿ, ಸಂಪತ್‌ಕುಮಾರ ಶೆಟ್ಟಿ, ಹರ್ಷಾ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಭಿನಂದನ ಪತ್ರ ವಾಚಿಸಿದರು. ಜೆ. ಮನೋರಾಜ್ ಶೆಟ್ಟಿ ಹಾಗೂ ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು