ಕುಂದಾಪುರ: ಪುರಸಭಾ ವ್ಯಾಪ್ತಿಯಲ್ಲಿನ ವಾಹನಗಳ ಅವ್ಯವಸ್ಥಿತ ನಿಲುಗಡೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ, ಇದಕ್ಕಾಗಿ ವಾಹನ ಚಾಲಕರು–ಮಾಲೀಕರಿಂದ ಹಣ ಪಡೆಯುವ ವ್ಯವಸ್ಥೆ ಜಾರಿಗೆ ತರಲು ಶಾಸಕ ಎ.ಕಿರಣ್ಕುಮಾರ ಕೊಡ್ಗಿ ಅವರ ಪ್ರಸ್ತಾವನೆಗೆ ಪುರಸಭೆಯ ಬಹುತೇಕ ಸದಸ್ಯರು ಒಪ್ಟಿಗೆ ಸೂಚಿಸಿದ್ದಾರೆ.

ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಗರದ ಪಾರ್ಕಿಂಗ್ ವ್ಯವಸ್ಥೆಯ ಕುರಿತಂತೆ ಶಾಸಕ ಎ.ಕಿರಣ್ಕುಮಾರ್ ಕೊಡ್ಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಶಾಸ್ತ್ರಿ ಸರ್ಕಲ್ ಬಳಿಯಲ್ಲಿನ ಫ್ಲೈಓವರ್ ಕೆಳಗೆ ಪಾವತಿ ಆಧಾರಿತ ವ್ಯವಸ್ಥಿತ ಪಾರ್ಕಿಂಗ್ ಕಲ್ಪಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಲಯನ್ಸ್ ಕ್ಲಬ್ ವತಿಯಿಂದ ₹50 ಲಕ್ಷ ವೆಚ್ಚದಲ್ಲಿ ಎರಡು ಬದಿಯಲ್ಲಿ ತಲಾ 20 ಸಾವಿರ ಚದರ ಅಡಿಯ ಸ್ಥಳವನ್ನು ಸುಂದರೀಕರಣ ಮಾಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆಗೆ ಈ ಸ್ಥಳವನ್ನು ಬಳಸಿಕೊಳ್ಳಬಹುದು. ಇದರಿಂದ ನಗರದ ದೊಡ್ಡ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಲಯನ್ಸ್ ಕ್ಲಬ್ ನ ರಮಾನಂದ ಕೆ. ಹೇಳಿದರು. ಉತ್ತಮ ನಿರ್ವಹಣೆಗಾಗಿ ಸಿಬ್ಬಂದಿಗಳ ನೇಮಕಾತಿ ಹಾಗೂ ನಿಲುಗಡೆಗೆ ಮಾರ್ಕಿಂಗ್ ಅಗತ್ಯತೆ ಬಗ್ಗೆ ಸದಾನಂದ ನಾವಡ ಹಾಗೂ ಪ್ರಜ್ಞೇಶ್ ಪ್ರಭು ಹೇಳಿದರು.

ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಮಾತನಾಡಿ, ಉಚಿತ ನಿಲುಗಡೆಗೆ ಅವಕಾಶ ಕೊಟ್ಟಲ್ಲಿ ಗಂಟೆಗಟ್ಟಲೆ ವಾಹನ ನಿಲ್ಲಿಸಿ ಹೋಗುವವರಿದ್ದಾರೆ. ವಾಹನ ಹಾಳಾದಲ್ಲಿ, ದೂರದ ಊರಿಗೆ ಹೋದಲ್ಲಿ ವಾರಗಟ್ಟಲೆ ಇಟ್ಟು ಹೋಗುವವರೂ ಇದ್ದಾರೆ. ಶುಚಿತ್ವ, ನಿರ್ವಹಣೆ ಸೇರಿ ಅನೇಕ ಸಮಸ್ಯೆಗಳು ಬರುತ್ತವೆ. ವ್ಯವಸ್ಥಿತ ನಿರ್ವಹಣೆಗೆ ಹಣ ಪಾವತಿಸುವ ಪದ್ಧತಿಯೇ ಉತ್ತಮ ಎಂದರು.

ಬೇಕಾಬಿಟ್ಟಿ ವಾಹನ ನಿಲುಗಡೆಯಿಂದ ಸಂಚಾರ ವ್ಯವಸ್ಥೆಯೇ ಹದಗೆಟ್ಟು ಹೋಗುತ್ತಿದೆ. ಭಂಡಾರ್ಕಾರ್ಸ್ ಕಾಲೇಜು ರಸ್ತೆಯಲ್ಲಿ ಒಂದೇ ಬದಿ ವಾಹನ ನಿಲುಗಡೆಗೆ ಅವಕಾಶ ಮಾಡಬೇಕು. ಸಾಧ್ಯವಾದರೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಆಗಲಿ. ಹಣ ಕೊಟ್ಟು ಪಾರ್ಕಿಂಗ್ ವ್ಯವಸ್ಥೆಗೆ ಹೋಗುವವರ ಸಂಖ್ಯೆ ಕಡಿಮೆ ಇರುವುದರಿಂದ ಇದು ವಿಫಲ ಆಗುವ ಸಾಧ್ಯತೆಯೂ ಇದೆ ಎಂದು ರೋಹಿಣಿ ಉದಯ ಕುಮಾರ್ ಹೇಳಿದರು.

ದೊಡ್ಡ ನಗರಗಳಂತೆ ಇಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣ ಕಷ್ಟ. ಹೆಚ್ಚಿನ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್ ಅಡಿ ವಾಹನ ನಿಲುಗಡೆಗೆ ಹೆದ್ದಾರಿ ಪ್ರಾಧಿಕಾರ ಅವಕಾಶ ನೀಡಿದ್ದರೂ, ಕುಂದಾಪುರದಲ್ಲಿ ಕ್ಯಾತೆ ತೆಗೆಯುವುದು ಸರಿಯಲ್ಲ. ನಗರದಲ್ಲಿ ವ್ಯವಸ್ಥಿತ ಪಾರ್ಕಿಂಗ್ ಬೇಕು, ಹಣ ಪಾವತಿಯಾದರೂ ಪರವಾಗಿಲ್ಲ ಎಂದು ಗಿರೀಶ್ ಜಿ.ಕೆ. ಹೇಳಿದರು.

ಪಾರ್ಕಿಂಗ್ ಬಗ್ಗೆ ಅನೇಕ ಬಾರಿ ಚರ್ಚೆ ನಡೆದು ಸರ್ವೆ ಆಗಿದ್ದರೂ ಅನುಷ್ಠಾನವೇ ಆಗಲಿಲ್ಲ. ಪುರಸಭೆಯ ಹೆಚ್ಚಿನ ನಿರ್ಣಯಗಳು ಕಾರ್ಯರೂಪಕ್ಕೆ ಬರುವುದೇ ಇಲ್ಲ. ಈಗ ಶಾಸಕರು ಮುತುವರ್ಜಿ ವಹಿಸಿದ್ದು ಇನ್ನಾದರೂ ಸಮಸ್ಯೆ ಬಗೆಹರಿಯಲಿ ಎಂದು ಎಚ್.ಎನ್.ಚಂದ್ರಶೇಖರ ಖಾರ್ವಿ ಆಶಯ ವ್ಯಕ್ತಪಡಿಸಿದರು.

ನಗರಕ್ಕೆ ಬರುವವರಿಗೆ ಕಿರಿಕಿರಿಯಾಗದಂತೆ ವ್ಯವಸ್ಥಿತ ಪಾರ್ಕಿಂಗ್ಗಾಗಿ ಸೂಕ್ತ ಕ್ರಮ ಆಗಬೇಕು ಎಂದು ದೇವಕಿ ಪಿ ಸಣ್ಣಯ್ಯ, ಶ್ರೀಧರ ಶೇರೆಗಾರ್, ಪ್ರಭಾವತಿ ಶೆಟ್ಟಿ, ಅಬ್ಬು ಮಹಮ್ಮದ್, ರಾಘವೇಂದ್ರ ಖಾರ್ವಿ, ಸಂತೋಷ್ ಕುಮಾರ್ ಶೆಟ್ಟಿ, ಅಶೋಕ್ ಸುವರ್ಣ ಒತ್ತಾಯಿಸಿದರು.

ವಾಹನ ನಿಲುಗಡೆಗೆ ಸೂಕ್ತ ಮಾರ್ಜಿನ್ ಹಾಗೂ ಮಾರ್ಕಿಂಗ್ ಮಾಡಿಕೊಟ್ಟಲ್ಲಿ, ಇದನ್ನು ಉಲ್ಲಂಘಿಸುವವರ ಹಾಗೂ ರಸ್ತೆಯಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ದಂಡ ವಿಧಿಸಲಾಗುವುದು. ಈ ಹಿಂದೆ ಪುರಸಭೆಯಿಂದ ಗೆಜೆಟ್ ನೋಫಿಟಿಫಿಕೇಶನ್ಗೆ ಕಳುಹಿಸಿದ್ದು ಜಿಲ್ಲಾಧಿಕಾರಿ ಕಚೇರಿಯಿಂದ ಮರಳಿ ಬಂದಿದೆ ಎಂದು ಸಂಚಾರ ಠಾಣೆ ಎಸ್ಐ ನೂತನ್ ಹೇಳಿದರು.

ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಮುಖ್ಯಾಧಿಕಾರಿ ಆನಂದ್ ಜೆ., ಲಯನ್ಸ್ ಕ್ಲಬ್ನ ಡಾ.ರಮೇಶ್ ಶೆಟ್ಟಿ, ಅಶೋಕ್ ಬೆಟ್ಟಿನ್, ಸುಧಾಕರ ಶೆಟ್ಟಿ ಹುಂತ್ರಿಕೆ ಮೊದಲಾದವರು ಇದ್ದರು.

‘ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ಪ್ರಕರಣ ದಾಖಲಿಸಿ’

‘ಬೇರೆ ನಗರಗಳಲ್ಲಿ ಇರುವಂತೆ ಪಟ್ಟಣದಲ್ಲಿ ಕೂಡ ಒಂದು ಬದಿ ಪಾರ್ಕಿಂಗ್ ವ್ಯವಸ್ಥೆಯನ್ನೂ ಪರಿಶೀಲಿಸಬಹುದು. ದೊಡ್ಡ ನಗರಗಳಂತೆ ಇಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕೆ ಸಂಪನ್ಮೂಲ ಕಷ್ಟ. ಅನುದಾನ ಕ್ರೋಢಿಕರಣ ಮಾಡಿ ಕಟ್ಟಡ ಕಟ್ಟಿ ವಾಹನ ನಿಲುಗಡೆಯಾಗದೇ ಇದ್ದರೂ ಅದು ವ್ಯರ್ಥ. ಪುರಸಭೆಯ ಎದುರಿನ ಕಟ್ಟಡದಲ್ಲಿ ಯಾವುದೇ ವಾಹನ ನಿಲುಗಡೆಯಾಗುತ್ತಿಲ್ಲ ಎಂದು ಶಾಸಕ ಎ.ಕಿರಣ್ಕುಮಾರ್ ಕೊಡ್ಗಿ ಹೇಳಿದರು.

ರಸ್ತೆ ಬದಿ ಮಾರ್ಜಿನ್ ಹಾಗೂ ಮಾರ್ಕಿಂಗ್ ಪುರಸಭೆ ವತಿಯಿಂದ ಮಾಡಿಕೊಡಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಪಾರ್ಕಿಂಗ್ ಜಾಗದ ನಿರ್ವಹಣೆ ಸ್ವಚ್ಛತೆ ಸೇರಿದಂತೆ ಕೆಲವು ನಿಬಂಧನೆಗಳನ್ನು ಹಾಕಬೇಕು. ಗೆಜೆಟ್ ನೋಟಿಫಿಕೇಶನ್ಗೆ ಸಂಬಂಧಪಟ್ಟಂತೆ ಮತ್ತೊಮ್ಮೆ ನಿರ್ಣಯ ಮಾಡಿ ಜಿಲ್ಲಾಧಿಕಾರಿಗೆ ಕಳುಹಿಸಿ. ರಸ್ತೆ ಮೇಲೆ ವಾಹನ ನಿಲ್ಲಿಸಿದರೆ ಪೊಲೀಸರು ಪ್ರಕರಣ ದಾಖಲಿಸಲಿ. ಆಗ ಪಾರ್ಕಿಂಗ್ ತಾಣದಲ್ಲಿ ನಿಲ್ಲಿಸುವುದನ್ನು ರೂಢಿಸಿಕೊಳ್ಳುತ್ತಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.