ಕುಂದಾಪುರ: ಭಾನುವಾರ ಬೆಳಿಗ್ಗೆ ಉಡುಪಿಯಲ್ಲಿ ನಡೆದ ಪೊಲೀಸ್ ಮ್ಯಾರಥಾನ್ನಲ್ಲಿ ಓಡುತ್ತಿದ್ದಾಗಲೇ ಬಿದ್ದು ಮೃತಪಟ್ಟ ಕಂದಾಪುರ ಗ್ರಾಮಾಂತರ ಠಾಣೆ ಉಪನಿರೀಕ್ಷಕ ನಾಸಿರ್ ಹುಸೇನ್ ಅವರಿಗೆ ಕಂಡ್ಲೂರಿನಲ್ಲಿ ಸರ್ಕಾರಿ ಗೌರವದೊಂದಿಗೆ ಭಾವಪೂರ್ಣ ವಿದಾಯ ನೀಡಲಾಯಿತು.

ಕುಂದಾಪುರ ಮತ್ತು ಬೈಂದೂರು ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದ ಅಭಿಮಾನಿಗಳು ನಮನ ಸಲ್ಲಿಸಿದರು. ಉಡುಪಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮಧ್ಯಾಹ್ನ ಕಂಡ್ಲೂರು ಠಾಣೆ ಸಮೀಪದ ಮೈದಾನಕ್ಕೆ ಪಾರ್ಥೀವ ಶರೀರ ತರಲಾಯಿತು. ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಮುಖಂಡರಾದ ಕೆ.ಜಯಪ್ರಕಾಶ ಹೆಗ್ಡೆ, ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಡಿವೈಎಸ್ಪಿ ಬೆಳ್ಳಿಯಪ್ಪ, ಜಿಲ್ಲಾ ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ಜಿಲ್ಲಾ ಪೊಲೀಸ್ ಕಚೇರಿಯ ಅಧೀಕ್ಷಕ ಗೋಪಾಲಕೃಷ್ಣ, ಅಧಿಕಾರಿಗಳಾದ ಮಹೇಶ್ ಪ್ರಸಾದ್, ರಾಮಚಂದ್ರ ನಾಯ್ಕ್, ಜಯರಾಮ್ ಗೌಡ, ಸಂತೋಷ್ ಕಾಯ್ಕಿಣಿ, ಶಿವಕುಮಾರ್, ನಂಜಾ ನಾಯ್ಕ್, ಪ್ರಸನ್ನ, ಭೀಮಾಶಂಕರ್, ಯೂನುಸ್ ಗಡ್ಡೇಕರ್, ವಿನಯ್ ಕೊರ್ಲಹಳ್ಳಿ, ಅಶೋಕ್ ಕುಮಾರ್, ಚಂದ್ರಕಲಾ, ಸುಧಾ ಪ್ರಭು, ಪ್ರಮುಖರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಮೊಹಮ್ಮದ್ ಫಝಲ್, ಅಫ್ಜಲ್ ಹೈಕಾಡಿ, ಹನೀಫ್ ಗುಲ್ವಾಡಿ, ಇಬ್ರಾಹಿಂ ಗಂಗೊಳ್ಳಿ, ಮೊಹಮ್ಮದ್ ಮುನಾಫ್, ಅಬು ಮೊಹಮ್ಮದ್ ಕುಂದಾಪುರ, ವಿಜಯ ಪುತ್ರನ್, ಸದಾನಂದ ಬಳ್ಕೂರು, ಸಾಮ್ರಾಟ್ ಶೆಟ್ಟಿ, ಜಾಯ್ ಕರ್ವೆಲ್ಲೊ, ಹರೀಶ್ ತೋಳಾರ್, ದಿನೇಶ್ ಆಚಾರ್ಯ, ಮನ್ಸೂರ್ ಮರವಂತೆ, ಮುನಾಫ್ ಕೋಡಿ, ಸದಾನಂದ ಉಪ್ಪಿನಕುದ್ರು, ಸುನಿಲ್ ಶೆಟ್ಟಿ ಹೇರಿಕುದ್ರು, ಕಿರಣ್ ಹೆಗ್ಡೆ ಅಂಪಾರು, ಸದಾಶಿವ ಶೆಟ್ಟಿ ಶಂಕರನಾರಾಯಣ, ಪ್ರಕಾಶ್ ಶೆಟ್ಟಿ ಬಲಾಡಿ, ಉದಯ್ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಹುಸೇನ್ ಹೈಕಾಡಿ ಗೌರವ ಸಲ್ಲಿಸಿದರು.

ಸರ್ಕಾರಿ ಗೌರವ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಪಡೆ ನಿರೀಕ್ಷಕ ರವಿ ಮತ್ತು ತಂಡದವರು ಇಲಾಖೆ ವತಿಯಿಂದ ಗೌರವ ವಂದನೆ ಸಲ್ಲಿಸಿದರು. ತೋಪು ಹಾರಿಸಲಾಯಿತು. ಮುಸ್ಲಿಮರು ದುಆ ನೆರವೆರಿಸಿದರು. ಗೋಣಿಬೀಡಿನಲ್ಲಿ ಸಂಜೆ ದಫನ ಮಾಡಲಾಯಿತು ಎಂದು ಕುಟುಂಬದವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.