ಉಡುಪಿ: ನಾವು ಜೀವಿಸುತ್ತಿರುವ ನೈಜ ಪ್ರಪಂಚ ನೈತಿಕ ಮತ್ತು ಆದರ್ಶದ ಜಗತ್ತಲ್ಲ; ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ ನಾಗರಿಕರ ಸಾಮೂಹಿಕ ಪ್ರಯತ್ನ ಅಗತ್ಯ ಎಂದು ಯುನೆಸ್ಕೋ ಶಾಂತಿ ಪೀಠದ ಮುಖ್ಯಸ್ಥ ಪ್ರೊ.ಎಂ.ಡಿ.ನಲಪತ್ ಅಭಿಪ್ರಾಯಪಟ್ಟರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಸಂಪನ್ಮೂಲಗಳ ಮೇಲಿನ ಪ್ರಾಬಲ್ಯ ಮತ್ತು ನಿಯಂತ್ರಣ ಸಾಧಿಸುವ ಪ್ರಯತ್ನಗಳು ಯುದ್ಧಗಳಿಗೆ ಕಾರಣವಾಗಿದೆ ಎಂದರು.

ಅಂತರ ರಾಷ್ಟ್ರೀಯ ಶಾಂತಿಯ ಹೊರತಾಗಿ, ಶಾಂತಿಯ ಕಲ್ಪನೆಯು ಲಿಂಗ, ಪರಿಸರ, ಸಾಮಾಜಿಕ ನ್ಯಾಯ ಮತ್ತಿತರ ಕಲ್ಪನೆಯನ್ನು ಒಳಗೊಂಡಿದೆ. ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಬಲಾಢ್ಯ ರಾಷ್ಟ್ರವಾಗಿ ಭಾರತ ಭಾಗವಹಿಸಬೇಕು ಎಂದು ವಾದಿಸಿದರು.

ಭಾರತದಲ್ಲಿ, ಧಾರ್ಮಿಕ ಸಹಬಾಳ್ವೆಯ ಅವಶ್ಯಕತೆಯಿದೆ. ಸಹಬಾಳ್ವೆಯ ಕಲ್ಪನೆಯು ನಿರ್ದಿಷ್ಟ ಧರ್ಮಕ್ಕೆ ಸೇರಿದ್ದಲ್ಲ. ಎಲ್ಲ ಧರ್ಮಗಳ ಸಾರವೇ ಶಾಂತಿ ಎನ್ನುತ್ತಾ ಭಾರತದ ವಿಭಜನೆ ಸೇರಿದಂತೆ ಗತಕಾಲದ ಹಲವು ನಿರರ್ಥಕ ಸಂಘರ್ಷಗಳ ಉದಾಹರಣೆಗಳನ್ನು ನೀಡಿದರು. ಜಿಸಿಪಿಎಎಸ್ನ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಸಂವಾದವನ್ನು ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.