ಉಡುಪಿ: ಚಿತ್ರ ನಿರ್ದೇಶಕರ ತಾತ್ವಿಕ ದೃಷ್ಟಿಕೋನ ಎಲ್ಲಾ ತಾಂತ್ರಿಕ ಅಂಶಗಳಿಗಿಂತ ಹೆಚ್ಚು ಮಹತ್ವದ್ದು ಮತ್ತು ಈ ದೃಷ್ಟಿಕೋನವೇ ತಾಂತ್ರಿಕ ಅಂಶಗಳು ಬಳಸಲ್ಪಡುವ ರೀತಿಯನ್ನು ನಿರ್ಧರಿಸುತ್ತದೆ ಎಂದು ಚಿತ್ರ ನಿರ್ದೇಶಕ ಪಿ.ಎನ್. ರಾಮಚಂದ್ರ ಹೇಳಿದರು.

ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್), ಮಾಹೆ ಮತ್ತು ಉಡುಪಿ ಚಿತ್ರ ಸಮಾಜದ ಆಶ್ರಯದಲ್ಲಿ ಚಲನಚಿತ್ರ ನಿರ್ಮಾಣದ ಕರಕುಶಲತೆ ಕುರಿತು ಹಮ್ಮಿಕೊಂಡಿದ್ದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಾತ್ವಿಕ ದೃಷ್ಟಿಕೋನವನ್ನು ಚಲನಚಿತ್ರದಲ್ಲಿ ತರಲು ಎಲ್ಲಾ ತಾಂತ್ರಿಕತೆಗಳನ್ನು ಸಜ್ಜುಗೊಳಿಸಬೇಕಾಗಿದೆ. ಚಲನಚಿತ್ರ ನಿರ್ದೇಶಕರ ತಾತ್ವಿಕ ನೆಲೆಯು ಚಲನಚಿತ್ರ ನಿರ್ಮಾಣದ ಕರಕುಶಲ ಸ್ವರೂಪವನ್ನು ನಿರ್ಧರಿಸುತ್ತದೆ ಎಂದು ಅವರು ಹೇಳಿದರು.

ಬಳಿಕ ಅವರ ಇತ್ತೀಚಿನ ಚಿತ್ರ ‘ಹಿಯರ್ ಓ, ಮಹಾತ್ಮ’ ಪ್ರದರ್ಶನಗೊಂಡಿತು. ಲೇಖಕ ಮುರಳೀಧರ ಉಪಾಧ್ಯ ಹಿರಿಯಡ್ಕ, ಚಿಂತಕ ಫಣಿರಾಜ್, ವರದೇಶ್ ಹಿರೇಗಂಗೆ, ಶ್ರೀಕುಮಾರ್, ನಾಗೇಶ್ ಉದ್ಯಾವರ, ಸಂತೋಷ್ ನಾಯಕ್ ಪಟ್ಲ ಸಂವಾದದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.