ಪಡುಬಿದ್ರಿ: ಮುಂಬೈನ ಶಿವಾಯ ಫೌಂಡೇಷನ್ ವತಿಯಿಂದ ಪಡುಬಿದ್ರಿಯ ಬಂಟರ ಸಂಘದಲ್ಲಿ ನಡೆದ ಸನ್ಮಾನ, ಪ್ರೇರಣಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ₹ 7.5ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಪಡುಬಿದ್ರಿ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ವೈ.ಎನ್.ಶೆಟ್ಟಿ, ಆಸ್ಪೆನ್ ಎಸ್ಇಝೆಡ್ನ ಮುಖ್ಯಸ್ಥರಾಗಿ ಕೌಶಲಾಭಿವೃದ್ಧಿಗೆ ಒತ್ತು ನೀಡುತ್ತಿರುವ ಅಶೋಕ್ ಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಾರ್ಕಳದ ಹೊಸಬೆಳಕು ಸಂಸ್ಥೆಯ ಸ್ಥಾಪಕಿ ತನುಲಾ ತರುಣ್ ಅವರಿಗೆ ಶಿವಾಯ ಪ್ರೇರಣಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಗುರುದೇವಾನಂದ ಸ್ವಾಮೀಜಿ, ಶಿವಾಯ ಫೌಂಡೇಷನ್ ಸೇವೆಯಲ್ಲಿ ತ್ಯಾಗದ ಸಂಕೇತ ಇದೆ. ಅರ್ಹರನ್ನು ಹುಡುಕಿ ಸೇವೆ ಮಾಡುತ್ತಿರುವ ಯುವಕರಲ್ಲಿ ಕ್ರಿಯಾಶೀಲತೆ ಇದೆ ಎಂದು ಹೇಳಿದರು.

ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿದರು.

ಸಂಸ್ಥೆಯ ಗೌರವಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಕಾಕರ್ಯಕ್ರಮ ಉದ್ಘಾಟಿಸಿದರು. ಮುಖಂಡ ವಿನಯಕುಮಾರ್ ಸೊರಕೆ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಪ್ರಾಜ್ ಜೆನೆಕ್ಸ್ನ ಪ್ರಜ್ವಲಾ ಪ್ರವೀಣ್ ಶೆಟ್ಟಿ ಮಾತನಾಡಿದರು.

ಉದಯಕುಮಾರ್ ಶೆಟ್ಟಿ ಮುನಿಯಾಲ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬಾಲಚಂದ್ರ ಶೆಟ್ಟಿ ಪುಚ್ಚೊಟ್ಟುಬೀಡು, ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಮನೀಶ್ ಸಾಲ್ಯಾನ್, ನವೀನ್ ಎನ್.ಶೆಟ್ಟಿ, ಸುಜಿತ್ ಶೆಟ್ಟಿ, ವಿಶ್ವಾಸ್ ವಿ.ಅಮೀನ್, ಸದಾನಂದ ಪೂಜಾರಿ ಮುಂಬೈ ಭಾಗವಹಿಸಿದ್ದರು.

ಶಿವಾಯ ಫೌಂಡೇಷನ್ ಮುಂಬೈನ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪಲಿಮಾರು ಸ್ವಾಗತಿಸಿದರು. ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ, ಸ್ವರ್ಣಲತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಶಾಂತ್ ಶೆಟ್ಟಿ ಪಂಜ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.