ಹೆಬ್ರಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್–ರೇಂಜರ್ಸ್ ಮತ್ತು ಐ.ಕ್ಯು.ಎ.ಸಿ. ಘಟಕಗಳ ಸಹಯೋಗದಲ್ಲಿ ಈಚೆಗೆ ‘ಕಾಲೇಜು ಮಟ್ಟದ 1 ದಿನದ ಅಭಿವಿನ್ಯಾಸ ತರಬೇತಿ’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ (ಸ್ಕೌಟ್ಸ್) ರೋವರ್ ಸ್ಕೌಟ್ಸ್ ಲೀಡರ್ ಜಿಲ್ಲಾ ಸಹಾಯಕ ಆಯುಕ್ತ ವಿತೇಶ್ ಕಾಂಚನಾ, ‘ಸಮಾಜ ಸೇವೆ ನಮ್ಮೆಲ್ಲರ ಗುರಿಯಾಗಬೇಕು. ಸಾಮಾಜಿಕ ಸಹಬಾಳ್ವೆಗೆ ಸಹಕಾರಿ ಮನೋಭಾವ ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ. ಇದಕ್ಕೆ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ವಿದ್ಯಾಧರ ಹೆಗ್ಡೆ, ‘ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಪಠ್ಯ ವಿಷಯಗಳು ಮಾತ್ರವಲ್ಲದೆ, ಪಠ್ಯೇತರ ಚಟುವಟಿಕೆಗಳು ಪೂರಕವಾಗಿವೆ’ ಎಂದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸುಷ್ಮಾ ರಾವ್ ಕೆ., ಐಕ್ಯುಎಸಿ ಸಂಚಾಲಕ ಗಣೇಶ ಎಸ್., ರೋವರ್ಸ್ ಘಟಕಾಧಿಕಾರಿ ಅರುಣಾಚಲ ಕೆ.ಎಸ್., ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪದ್ಮನಾಭ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಮನೋಜ್ ಕುಮಾರ್, ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಅನಿಲ್, ಘಟಕದ ಲೀಡರ್ಗಳಾದ ಅಶ್ವಥ್ ಹಾಗೂ ಕವನ ಇದ್ದರು.

ರೇಂಜರ್ಸ್ ಘಟಕಾಧಿಕಾರಿ ಜ್ಯೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ವೇದಿಕೆಯ ಉಪಾಧ್ಯಕ್ಷೆ ಅಂಕಿತ ಸ್ವಾಗತಿಸಿದರು. ರೇಂಜರ್ಸ್ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರೇಂಜರ್ ಅನನ್ಯ ಅತಿಥಿಗಳನ್ನು ಪರಿಚಯಿಸಿದರು. ರೋವರ್ ಅಶ್ವಥ್ ವಂದಿಸಿದರು. ರೇಂಜರ್ ಸುಲೋಚನಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.