‘ನಾನು ಹೊಗಳುಭಟನಲ್ಲ ಪ್ರಶ್ನೆಯನ್ನೂ ಕೇಳುತ್ತೇನೆ’
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ ವಿಚಾರವಾಗಿ ಮಾತನಾಡಿದ ಪ್ರಕಾಶ್‌ರಾಜ್ ಅವರು ‘ಸಿದ್ದರಾಮಯ್ಯ ಅವರು ಆಡಳಿತದ ಮೇಲೆಯೂ ಸ್ವಲ್ಪ ಹಿಡಿತ ಇಟ್ಟುಕೊಳ್ಳಬೇಕು. ಅವರ ಆಪ್ತ ವಲಯದವರ ಮೇಲಿನ ಭ್ರಷ್ಟಾಚಾರ ಆರೋಪಗಳು ಶೋಭೆ ತರುವುದಿಲ್ಲ. ಪಾರದರ್ಶಕ ಆಡಳಿತ ನೀಡಬೇಕು’ ಎಂದರು. ‘ನಾನು ಬರೀ ಹೊಗಳುಭಟನಲ್ಲ ಪ್ರಶ್ನೆಗಳನ್ನೂ ಕೇಳುತ್ತೇನೆ. ನಾನು ಯಾವುದೇ ರಾಜಕೀಯ ಪಕ್ಷದವನಲ್ಲ. ಸದಾ ವಿರೋಧಪಕ್ಷ’ ಎಂದರು. ‘ದೇವರಾಜ ಅರಸು ಅವರ ಕಾಲಘಟ್ಟ ಬೇರೆ ಸಿದ್ದರಾಮಯ್ಯ ಅವರ ಕಾಲಘಟ್ಟ ಬೇರೆಯಾಗಿದೆ. ಸಿದ್ದರಾಮಯ್ಯ ಅವರು ಒಳ್ಳೆಯ ಅಹಿಂದ ನಾಯಕರು’ ಎಂದು ಹೇಳಿದರು. ಮುಂದಿನ ಸಿನಿಮಾಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ರಾಜಮೌಳಿ ನಿರ್ದೇಶನದ ‘ವಾರಾಣಸಿ’ ವಿಜಯ್ ನಟನೆಯ ‘ಜನನಾಯಗನ್’ ಹಿಂದಿಯ ‘ದೃಶ್ಯಂ –3’ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದರು.