ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯುಸಿ: ಉಡುಪಿಗೆ ಉತ್ತಮ ಫಲಿತಾಂಶ

ವಿದ್ಯೋದಯ, ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ
Last Updated 20 ಜುಲೈ 2021, 16:34 IST
ಅಕ್ಷರ ಗಾತ್ರ

ಉಡುಪಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ವಿದ್ಯೋದಯ ಪದವಿ ಪೂರ್ವ ಕಾಲೇಜು ಹಾಗೂ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಪಿಯುಸಿ ಪರೀಕ್ಷೆಗೆ 15,213 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಕೋವಿಡ್‌ ಎರಡನೇ ಅಲೆಯ ಕಾರಣದಿಂದ ಪಿಯುಸಿ ಪರೀಕ್ಷೆ ರದ್ದುಮಾಡಲಾಗಿತ್ತು. ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಹಾಗೂ ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗಿದೆ.

ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಪೇಕ್ಷಾ, ಭಾರ್ಗವಿ ಬೋರ್ಕಾರ್, ಧನ್ಯ, ಎನ್‌.ಧನ್ಯತಾ, ಕೀರ್ತನಾ, ಯು.ಪ್ರಣಯ್ ಶೆಟ್ಟಿ, ಸಂಜನಾ ಆರ್.ಶೇಟ್, ಸಿಂಚನಾ ಪೂಜಾರಿ, ತೇಜಸ್ವಿ ಹಾಗೂ ವೈಷ್ಣವಿ 600ಕ್ಕೆ 600 ಅಂಕ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 324 ವಿದ್ಯಾರ್ಥಿಗಳಲ್ಲಿ 190 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 134 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 158 ವಿದ್ಯಾರ್ಥಿಗಳಲ್ಲಿ 37 ಡಿಸ್ಟಿಂಕ್ಷನ್‌, 107 ಪ್ರಥಮ ಶ್ರೇಣಿ ಮತ್ತು 14 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಕುಮಾರ್ ತಿಳಿಸಿದ್ದಾರೆ.

ಉಡುಪಿಯ ಎಂಜಿಎಂ ಕಾಲೇಜಿನ ದೇವಿಕಾ ಶೆಣೈ ಕೂಡ 600 ಅಂಕ ಪಡೆದುಕೊಂಡಿದ್ದಾರೆ. ಸತ್ಯನಾರಾಯಣ ಶೆಣೈ ಮತ್ತು ಸಹನಾ ಎಸ್ ಶೆಣೈ ದಂಪತಿಯ ದ್ವೀತಿಯ ಪುತ್ರಿ ದೇವಿಕಾ.

ಪೂರ್ಣ ಪ್ರಜ್ಞಾ ಸಾಧನೆ:ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದ ಶ್ರೀಯಾ ಪೈ 600, ಅನೀಶ್ ಅಡಿಗ 600, ಗಗನ್ 600, ವಿಶ್ವ ವಿ.ಹೆಗ್ಡೆ 600, ಎಂ.ದರ್ಶನ್ 600, ಅನ್ವಿತ ಡಿ.ಶೆಟ್ಟಿಗಾರ್ 600, ಎಸ್‌.ಧನ್ಯ 600, ಪ್ರಜ್ಞಾ ಪೂಜಾರಿ 600, ಸುರಭಿ 600, ಎನ್‌.ಎಸ್‌. ಸೂರಜ್ 600, ಚೈತ್ರ ಶೆಣೈ 600, ಭೂಮಿಕಾ ಎಸ್.ದೇವಾಡಿಗ 600 ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಚಂದನಾ ಶೆಣೈ 600, ಪ್ರತೀಕ್ಷಾ ಐತಾಳ್ 600, ಸಮಿತ್ ಕುಮಾರ್ 600, ದಿವ್ಯಾ 600 ಅಂಕ ಪಡೆದಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವಪ್ರಿಯ ತೀರ್ಥ ಶ್ರೀಗಳು, ಕಾರ್ಯದರ್ಶಿ ಪ್ರದೀಪ್ ಕುಮಾರ್, ಪ್ರಾಂಶುಪಾಲರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶ ವಿವರ
*
ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು: 15213
*ಕಲಾ ವಿಭಾಗ: 1697
*ವಾಣಿಜ್ಯ ವಿಭಾಗ: 8043
*ವಿಜ್ಞಾನ ವಿಭಾಗ: 5473
*ಗ್ರಾಮೀಣ ವಿದ್ಯಾರ್ಥಿಗಳು: 7888
*ನಗರ ವಿದ್ಯಾರ್ಥಿಗಳು: 7325

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT