ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘು ಶೆಟ್ಟಿ ಜನ್ಮ ಶತಾಬ್ದಿ: ಸಾಧಕರಿಗೆ ಸನ್ಮಾನ

Last Updated 12 ಡಿಸೆಂಬರ್ 2022, 6:37 IST
ಅಕ್ಷರ ಗಾತ್ರ

ಪಡುಬಿದ್ರಿ: ವ್ಯಕ್ತಿ ಸಮಾಜಮು ಖಿಯಾದಂತಹ ಕರ್ತವ್ಯಗಳನ್ನು ಮಾಡಿ ಸಮಾಜದ ಋಣ ನೀಗಿಸಿಕೊಂಡಂತಹ ಕ್ರಮ ಏನಿದೆಯೋ ಅದು ಶತಮಾನಗಳ ಬಳಿಕವೂ ಸ್ಮರಿಸಲ್ಪಡಬೇಕಾಗುತ್ತದೆ ಎಂದು ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಹೇಳಿದರು.

ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ನಂದಿಕೂರು ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಚೀಂಕ್ರಿಗುತ್ತು ರಾಘು ಶೆಟ್ಟಿ ಜನ್ಮ ಶತಾಬ್ದಿ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ರಾಘು ಶೆಟ್ಟಿಯವರು ಹಲವು ಆಯಾ ಮಗಳಲ್ಲಿ ಸಮಾಜಸೇವೆ ಮಾಡಿ ದವರು. ಅವರು ಜೀವನ ಮೌಲ್ಯ ಮತ್ತು ಸಂದೇಶಗಳ ಮೂಲಕ ಸ್ಮರಣೀಯರು, ಚಿರಂಜೀವಿ ಎಂದರು.

ಶಿಕ್ಷಣ ಕ್ಷೇತ್ರದ ಸಾಧಕ ಎಲ್ಲೂರು ಶ್ರೀಧರ ರಾವ್, ದಾಮೋದರ ಆಚಾರ್ಯ, ರಾಘು ಶೆಟ್ಟಿ ಪತ್ನಿ ಹಾಗೂ ಅವರ ನಿಕಟವರ್ತಿ ಕುಟುಂಬಸ್ಥರನ್ನು ಗೌರವಿಸಲಾಯಿತು. ಶ್ರೀಧರ ರಾವ್ ಆತ್ಮಕಥನದಲ್ಲಿನ ರಾಘು ಶೆಟ್ಟಿ ಬಗೆಗಿನ ಉಲ್ಲೇಖಗಳನ್ನು ಸುದರ್ಶನ ವೈ.ಎಸ್. ಮೆಲುಕು ಹಾಕಿದರು. ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಪ್ರಧಾನ ಅರ್ಚಕ ಮಧ್ವರಾಯ ಭಟ್, ನಂದಿಕೂರು ಶ್ರೀ ರಾಮ ದೇವಸ್ಥಾನ ಟ್ರಸ್ಟಿ ಸುರೇಶ್ ಶೆಟ್ಟಿ ಮುಂಬೈ, ವಸಂತ ಶೆಟ್ಟಿ ನಂದಿಕೂರು, ನಂದಿಕೂರು ಎಜುಕೇಷನ್ ಟ್ರಸ್ಟ್ ಕಾರ್ಯಾಧ್ಯಕ್ಷ ಲಕ್ಷ್ಮಣ್ ಎಲ್ ಶೆಟ್ಟಿವಾಲ್, ಪಲಿಮಾರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ರಮಣಿ, ನಂದಿಕೂರು ಎಜುಕೇಷನ್ ಟ್ರಸ್ಟ್ ಟ್ರಸ್ಟಿ ಪ್ರಕಾಶ್ ಶೆಟ್ಟಿ ಮಾಗಂದಡಿ ಇದ್ದರು. ವಿಜಯ ಶೆಟ್ಟಿ ನಿರೂಪಿಸಿದರು. ನಾಗರಾಜ ರಾವ್ ನಂದಿಕೂರು ಸ್ವಾಗತಿಸಿ ವಂದಿಸಿದರು.

ನಂದಿಕೂರು ಶಾಲಾ ವಾರ್ಷಿಕೊತ್ಸವ: ಬೆಳಿಗ್ಗೆ ನಡೆದ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನಂದಿಕೂರು ಶ್ರಿ ರಾಮ ದೇವಸ್ಥಾನದ ವಸಂತ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಫಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ ಡಿ ಪ್ರಭು, ಸದಸ್ಯರಾದ ಸತೀಶ್ ದೇವಾಡಿಗ, ನಯನ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಕಾಂತ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದಿನೇಶ್ ಕೋಟ್ಯಾನ್, ಉಡುಪಿ ವಲಯ ಕ್ಷೇತ್ರ ಶಿಕ್ಷಣಾದಿಕಾರಿ ಎಚ್.ಡಿ.. ಚಂದ್ರೇಗೌಡ, ಉಡುಪಿ ಡಯೆಟ್ ಉಪ ಪ್ರಾಂಶುಪಾಲ ಅಶೋಕ್ ಕಾಮತ್, ನಂದಿಕೂರು ಎಜುಕೇಶನ್ ಟ್ರಸ್ಟ್ ಕಾರ್ಯಾಧ್ಯಕ್ಷ ಲಕ್ಷö್ಮಣ್ ಎಲ್ ಶೆಟ್ಟಿವಾಲ್, ಅಧ್ಯಕ್ಷ ಅನಿಲ್ ಶೆಟ್ಟಿ ಏಳಿಂಜೆ, ಗಣನಾಥ ಶೆಟ್ಟಿ, ಕಾರ್ಯದರ್ಶಿ ಸಿಎ ಅನಿಲ್ ಶೆಟ್ಟಿ ಅಡ್ವೆ ತೆಂಕುಮನೆ, ಸುರೇಶ್ ಶೆಟ್ಟಿ ಮುಂಬೈ, ಜಗನ್ನಾಥ ಶೆಟ್ಟಿ, ಶಾಲಾ ಹಳೆವಿದ್ಯಾರ್ಥಿ ಸಂಘ ಉಪಾಧ್ಯಕ್ಷೆ ಅಶ್ವಿನಿ ದೇವಾಡಿಗ, ಮುಖ್ಯೋಪಾಧ್ಯಾಯಿನಿ
ರಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT