ಶುಕ್ರವಾರ, ಜನವರಿ 27, 2023
18 °C

ಒಳಿತು ಮಾಡಿದರೆ ದೇವರ ಆಶೀರ್ವಾದ: ಲೋರೆನ್ಸ್ ಮುಕುಝಿ ಪ್ರಬೋಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: ‘ಪ್ರಾಪಂಚಿಕ ಅನುಭವಗಳಾದ ಕಷ್ಟ ಕಾರ್ಪಣ್ಯಗಳು, ದುಷ್ಟತನಗಳು ನಮ್ಮನ್ನು ಧೃತಿಗೆಡುವಂತೆ ಮಾಡುತ್ತವೆ. ದೇವರಲ್ಲಿ ಅಚಲ ನಂಬಿಕೆಯಿಟ್ಟು ಅವರ ಸಾಕ್ಷಿಗಳಾಗಿ ಬಾಳಿದಾಗ ಮತ್ತು ಒಳಿತನ್ನು ಮಾಡಿದಾಗ ನಾವು ಆಶೀರ್ವಾದವನ್ನು ಪಡೆಯುತ್ತೇವೆ’ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲೋರೆನ್ಸ್ ಮುಕುಝಿ ಪ್ರಬೋಧನೆ ನೀಡಿದರು.

ಕಾರ್ಕಳದ ಅತ್ತೂರು ಕಾರ್ಕಳ ಸೇಂಟ್ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಬಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಅಸ್ವಸ್ಥರಿಗಾಗಿ ವಿಶೇಷವಾಗಿ ಪೂಜೆ ಪ್ರಾರ್ಥನೆಗಳನ್ನು ನೆರವೇರಿಸಲಾಯಿತು.

ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠಗುರು ಮ್ಯಾಕ್ಸಿಮ್ ನೊರೊನ್ಹಾ ಬೆಳಿಗ್ಗೆಯ ಬಲಿಪೂಜೆಯನ್ನು ಅರ್ಪಿಸಿದರು. ಕಟ್ಕೆರೆಯ ಆಲ್ವಿನ್ ಸಿಕ್ವೇರಾ, ಶಿವಮೊಗ್ಗದ ವೀರೇಶ್ ಮೋರಸ್, ಗಂಗೊಳ್ಳಿಯ ಥೋಮಸ್ ರೋಷನ್ ಡಿಸೋಜ, ಬೋಂದೆಲ್‌ನ ಆಂಡ್ರು ಡಿಸೋಜ, ಬೋಂದೆಲ್ ದಿನದ ಇತರ ಬಲಿಪೂಜೆಗಳನ್ನು ನೆರವೇರಿಸಿದರು.

ಪನೀರ್‌ನ ವಿಕ್ಟರ್ ಡಿಮೆಲ್ಲೊ ದಿನದ ಅಂತಿಮ ಬಲಿಪೂಜೆ ನಂತರ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮಗಳು ಸಂಪನ್ನಗೊಂಡವು. ಮಾಜಿ ಶಾಸಕರಾದ ಅಭಯಚಂದ್ರ ಜೈನ್, ವಿನಯ ಕುಮಾರ ಸೊರಕೆ ಕ್ಷೇತ್ರಕ್ಕೆ ಭೇಟಿ ನೀಡಿದರು.

ಮಹೋತ್ಸವದ ನಾಲ್ಕನೇ ದಿನ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಬಲಿಪೂಜೆಗಳು ನೆರವೇರಲಿವೆ. ಮಧ್ಯಾಹ್ನ 12 ಗಂಟೆಯ ಬಲಿಪೂಜೆ ಕನ್ನಡ ಭಾಷೆಯಲಿದ್ದು, 10 ಗಂಟೆಯ ವಿಶೇಷ ಸಾಂಭ್ರಮಿಕ ಬಲಿಪೂಜೆಯನ್ನು ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಅಲೋಶಿಯಸ್ ಪಾವ್ಲ್ ಡಿಸೋಜ ನೆರವೇರಿಸುವರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು