ಬೈಂದೂರು: ‘ನಮ್ಮ ಸನಾತನ ಧರ್ಮ, ಭವ್ಯ ಪರಂಪರೆಯ ತಿರುಳನ್ನು ಅರಿತು ಅದರಂತೆ ನಮ್ಮ ಜೀವನ ಸಾಗಿಸಬೇಕು. ದೇವರ ನಾಮಸ್ಮರಣೆ, ಭಜನೆಯನ್ನು ದಿನನಿತ್ಯದ ಪರಿಪಾಟವಾಗಿ ಮಾಡಿಕೊಂಡು ಮಕ್ಕಳಿಗೆ ಕಲಿಸಬೇಕು’ ಎಂದು ಕೆರೆಕಟ್ಟೆಯ ಸುಬ್ರಹ್ಮಣ್ಯ ಅಡಿಗ ಹೇಳಿದರು.

ನಾವುಂದ ಹಿಂದೂ ಅಭ್ಯುದಯ ಸಂಘದ ವತಿಯಿಂದ ನಡೆಯುತ್ತಿರುವ 45ನೇ ಸಾರ್ವಜನಿಕ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಹಿಳೆಯರು ಕೈ ತುಂಬಾ ಬಳೆ, ಹಣೆಗೆ ತಿಲಕ, ನಮ್ಮ ಭಾರತೀಯ ಉಡುಗೆ– ತೊಡುಗೆ ಅನುಸರಿಸಲು ಮನಸ್ಸು ಮಾಡಬೇಕು. ನಮ್ಮ ಧರ್ಮದ ಆಚರಣೆಗಳನ್ನು ಹಿಂದಿನಂತೆ ಕ್ರಮವತ್ತಾಗಿ ಮಾಡಿ ಮುಂದಿನ ನಮ್ಮ ಪೀಳಿಗೆಗೆ ಅವುಗಳನ್ನು ಧಾರೆ ಎರೆಯುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಕನಕ ಗ್ರೂಫ್ ಆಪ್ ಕಂಪನಿ ಆಡಳಿತ ನಿರ್ದೇಶಕ ಜಗದೀಶ ಶೆಟ್ಟಿ ಕುದ್ರುಕೋಡು ಮಾತನಾಡಿ, ನಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಸ್ವಂತಿಕೆಯಿಂದ ಸಾಧನೆ ಮಾಡಿ ಸಮಾಜದಲ್ಲಿ ಗುರುತಿಸಲ್ಪಡಬೇಕು. ದುಡಿಮೆಯ ಸ್ವಲ್ಪ ಭಾಗವನ್ನು ಕಷ್ಟದಲ್ಲಿರುವ ಜನರ ಸಹಾಯಕ್ಕೆ ವಿನಿಯೋಗಿಸಿ ಸಾರ್ಥಕತೆ, ಸಂತೋಷ ಪಡಬೇಕು. ನಾವು ಎಲ್ಲೇ ಜೀವನ ಮಾಡುತ್ತಿದ್ದರೂ ಹುಟ್ಟೂರು, ಏಳಿಗೆಗೆ ಸಹಕರಿಸಿದವರನ್ನು ಮರೆಯಬಾರದು ಎಂದರು.

ಸಂಘದ ಅಧ್ಯಕ್ಷ ಶಶಿಧರ ಎಂ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಅರ್ಚಕ ರಾಘವೇಂದ್ರ ಕಾರಂತ, ಸಂಘದ ಉಪಾಧ್ಯಕ್ಷ ಪ್ರವೀಣ್ ಪೂಜಾರಿ, ನಾವುಂದ ಮಹಾಗಣಪತಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಅಭಿಷೇಕ್ ಇದ್ದರು.

ವಿಜಯ ರತ್ನ ಪ್ರಶಸ್ತಿ ಪುರಸ್ಕೃತ ಜಗದೀಶ ಶೆಟ್ಟಿ ಕುದ್ರುಕೋಡ್ ಅವರನ್ನು ಸನ್ಮಾನಿಸಲಾಯಿತು. ಮೂವರಿಗೆ ತಲಾ ₹ 5 ಸಾವಿರದಂತೆ ವೈದ್ಯಕೀಯ ಧನಸಹಾಯ ನೀಡಲಾಯಿತು. ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸದಸ್ಯ ಎನ್. ಸಂಜೀವ ಗಾಣಿಗ ಸ್ವಾಗತಿಸಿದರು. ಕಾರ್ಯದರ್ಶಿ ಎ. ಶಿವರಾಮ ಮಧ್ಯಸ್ಥ ನಿರೂಪಿಸಿದರು. ಕೋಶಾಧಿಕಾರಿ ರತ್ನಾಕರ ಕೆ. ವಂದಿಸಿದರು. ಜೊತೆ ಕಾರ್ಯದರ್ಶಿ ವಿಘ್ನೇಶ್ವರ ಕೆ., ಕಾರ್ಯಕಾರಿ ಮಂಡಳಿ ಸದಸದಸ್ಯರಾದ ನರಸಿಂಹ ಆಚಾರ್, ಮನೋಹರ ಎನ್.ಕೆ., ಸತ್ಯನಾರಾಯಣ ಗಾಣಿಗ, ಜಿತೇಶ್ ಕೆ. ಪೂಜಾರಿ, ಮಂಜುನಾಥ ಗಾಣಿಗ, ಸತೀಶ್ ಎಸ್. ಪೂಜಾರಿ, ರವಿ ಕುಮಾರ್, ಗುರುರಾಜ ಶೇಟ್ ವಿವಿಧ ಚಟುವಟಿಕೆ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.