ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿತ್ರಿ ಫುಲೆ ಹಾದಿಯಲ್ಲಿ ಮಹಿಳೆಯರು ಸಾಗಲಿ: ಜಯನ್

Last Updated 3 ಜನವರಿ 2021, 15:00 IST
ಅಕ್ಷರ ಗಾತ್ರ

ಉಡುಪಿ: ದಲಿತರಿಗೆ ಅಕ್ಷರ ಕಲಿಸಿಕೊಟ್ಟ ಸಾವಿತ್ರಿ ಜ್ಯೋತಿ ಬಾಫುಲೆ ಅವರ ಹಾದಿಯಲ್ಲಿ ಸಮುದಾಯದ ಮಹಿಳೆಯರು ಸಾಗಬೇಕು ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದರು.

ಭಾನುವಾರ ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ್ದ ಸಾವಿತ್ರಿ ಬಾಫುಲೆ 190ನೇ ಜನ್ಮದಿನದ ಉದ್ಘಾಟಿಸಿ ಮಾತನಾಡಿದರು.

ಸಾವಿತ್ರಿ ಫುಲೆ ಜಾತಿವ್ಯವಸ್ಥೆಯಲ್ಲಿ ಅನುಭವಿಸಿದ ನೋವನ್ನು ದಲಿತ ಮಹಿಳೆಯರು ಅರ್ಥೈಸಿಕೊಂಡಿಲ್ಲ. ಬಡವರ ಶೈಕ್ಷಣಿಕ ಅಭಿವೃದ್ಧಿಗೆ ಅನುಭವಿಸಿದ ನೋವವನ್ನು ಸಮುದಾಯ ಸ್ಮರಿಸಿಬೇಕಿದೆ. ವಿದ್ಯೆನೀಡಿದ ತಾಯಿಯನ್ನು ಮರೆಯಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಸ್ ಸಾಲ್ಯಾನ್ ವಹಿಸಿದ್ದರು.

ದಲಿತ ಮುಖಂಡ ಸುಂದರ ಕಪ್ಪೆಟ್ಟು ಮಾತನಾಡಿ, ಸಮುದಾಯದ ನಾಯಕರು ಮೊದಲು ಸಾವಿತ್ರಿ ಜ್ಯೋತಿ ಬಾಫುಲೆ ಅವರನ್ನು ಅರ್ಥೈಸಿಕೊಡುವ ಕೆಲಸ ಮಾಡಬೇಕು. ಅಂಬೇಡ್ಕರ್ ಹೆಸರಿನಲ್ಲಿ ತಿರುಕನ ಕನಸು ಕಾಣಬಾರದು ಎಂದರು.

ಅತಿಥಿಗಳಾಗಿ ಸಮಾಜ ಸೇವಕಿ ಶಾರದಾ ನೆರ್ಗಿ, ಶಶಿಕಲಾ ತೊಟ್ಟಂ, ರಾಜೇಶ್ ಕೆಮ್ಮಣ್ಣು, ಯುವನಾಯಕ ಸುಮಿತ್ ನೆರ್ಗಿ, ವಿನೋದ, ದಿನೇಶ್ ಜವನೆರಕಟ್ಟೆ, ಕೃಷ್ಣ ಶ್ರೀಯಾನ್, ಸಂತೋಷ್ ಕಪ್ಪೆಟ್ಟು, ದೀಪಕ್ ಕೊಡವೂರು, ಸುಮ ನೆರ್ಗಿ, ವೀಣಾ, ಪೂರ್ಣಿಮಾ ಶಂಕರ್, ಸಬಿತಾ, ಶಾರದಾ, ಸುಜಾತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT