ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಮಠದಲ್ಲಿ ಸುದರ್ಶನ ಪಾಸ್ ವಿತರಣೆ

Last Updated 11 ಅಕ್ಟೋಬರ್ 2020, 16:20 IST
ಅಕ್ಷರ ಗಾತ್ರ

ಉಡುಪಿ: ಕೃಷ್ಣಮಠದಲ್ಲಿ ಸ್ಥಳೀಯ ಭಕ್ತರಿಗೆ ಕೃಷ್ಣನ ದರ್ಶನಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿರುವ ‘ಸುದರ್ಶನ’ ಹೆಸರಿನ ಪಾಸ್‌ ಅನ್ನು ಪರ್ಯಾಯ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿ ಸಾಂಕೇತಿಕವಾಗಿ ಭಕ್ತರಿಗೆ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರವಚನಗಳ ಮೂಲಕ ದೇವರ ಮಹಾತ್ಮೆ ಅರಿತು ಸಾಧನೆ ಮಾಡುವುದು ಒಂದು ಕ್ರಮವಾದರೆ, ದರ್ಶನದ ಮೂಲಕ ದೇವರನ್ನು ಕಣ್ತುಂಬಿಕೊಂಡು ಭಗವಂತನ ರೂಪವನ್ನು ಅನುಸಂಧಾನ ಮಾಡಿಕೊಳ್ಳುವುದು ವಿಶೇಷವಾದ ಭಕ್ತಿ. ಭಕ್ತರ ಸಂಖ್ಯೆ ಅಧಿಕವಿದ್ದು, ಜನಸಂದಣಿ ಇರುವಾಗ, ಸ್ಥಳೀಯ ಭಕ್ತರಿಗೆ ಮಠದ ಸಂಪ್ರದಾಯಗಳು ಗೊತ್ತಿರುವುದರಿಂದ ಸುಲಭವಾಗಿ ದೇವರ ದರ್ಶನ ಮಾಡಲು ಅನುಕೂಲವಾಗುವಂತೆ ಸುದರ್ಶನ ಹೆಸರಿನ ಪಾಸ್‌ ನೀಡಲಾಗುತ್ತಿದೆ.

ಪ್ರಸ್ತುತ ಮದ್ಯಾಹ್ನ 2ರಿಂದ ಸಂಜೆ 5ರವರೆಗೆ ದೇವರ ದರ್ಶನಕ್ಕೆ ಅವಕಾಶವಿದ್ದು, ಈ ಅವಧಿಯಲ್ಲಿ ಪರ್ಯಾಯ ಮಠದ ಸೂಚನೆ ಹಾಗೂ ನಿರ್ಣಯದಂತೆ ಮಠದ ದಕ್ಷಿಣದಲ್ಲಿರುವ ಮಹಾದ್ವಾರದ ಸಮೀಪ ಹಾಗೂ ಉತ್ತರ ದ್ವಾರದ ಮೂಲಕ ಪಾಸ್ ಪಡೆದ ಭಕ್ತರು ಪ್ರವೇಶ ಮಾಡಬಹುದು ಎಂದು ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT