ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ಕೂರಿನ ಸ್ವೀಝಲ್ ಸೂಪರ್ ಮಾಡೆಲ್ ಇಂಡಿಯಾ ರನ್ನರ್ ಅಪ್

Last Updated 30 ಜೂನ್ 2022, 4:48 IST
ಅಕ್ಷರ ಗಾತ್ರ

ಬ್ರಹ್ಮಾವರ: ಸ್ಟಾರ್ ಎಂಟರ್‌ಟೇನ್‌ಮೆಂಟ್ ಪ್ರೊಡಕ್ಷನ್ ನವದೆಹಲಿಯಲ್ಲಿ ನಡೆಸಿದ ‘ಸೂಪರ್ ಮಾಡೆಲ್ ಇಂಡಿಯಾ–2022’ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಬಾರ್ಕೂರು ಮೂಲದ ಸ್ವೀಝಲ್ ಫುರ್ಟಾಡೊ ರನ್ನರ್ ಅಪ್ ಆಗಿದ್ದಾರೆ.

ಈ ಸ್ಪರ್ಧೆಗೆ ರೋಹಿತ್ ಖಂಡೆಲ್ ವಾಲ (ಮಿಸ್ಟರ್ ವರ್ಲ್ಡ್ 2016) ಮತ್ತು ಸುಮನ್ ರಾವ್ (ಮಿಸ್ ವರ್ಲ್ಡ್ ಏಷ್ಯಾ ಎರಡನೇ ರನ್ನರ್ ಅಪ್) ಹಾಗೂ ಆಡ್ಲೈನ್ ಕ್ಯಾಸ್ಟೊಲಿನ್ (ಮಿಸ್ ಯುನಿವರ್ಸ್ ಮೂರನೇ ರನ್ನರ್ ಅಪ್) ಇವರು ತೀರ್ಪುಗಾರರಾಗಿದ್ದರು.

ಸ್ವೀಝಲ್ 2021ರಲ್ಲಿ ಬೆಂಗಳೂರಿನಲ್ಲಿ ನಡೆದ ‘ಇಗ್ನೈಟ್ ಇಂಡಿಯಾ ಮೆರಾಕ್ಕಿ’ ಫ್ಯಾಶನ್ ಸ್ಪರ್ಧೆಯ ಆರು ಜನ ವಿಜೇತರಲ್ಲಿ ಒಬ್ಬರಾಗಿದ್ದರು. ಜೈಪುರ್‌ನಲ್ಲಿ ನಡೆದ ‘ಫ್ರೆಶ್ ಫೇಸ್ ಆಫ್ ಇಗ್ನೈಟ್ ಇಂಡಿಯಾ 2021’ರಲ್ಲಿ ಸ್ಟಾರ್ ಮಿಸ್ ಟೀನ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.

2022ರ ಫೆಬ್ರುವರಿಯಲ್ಲಿ ಜೈಪುರ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ‘ಕ್ವೀನ್ ಆಫ್ ಕಾಸ್ಮೋಸ್–2022’ ಸ್ಪರ್ಧೆಯಲ್ಲಿ ಅಂತಿಮ ಹಂತವನ್ನು ತಲುಪಿದ್ದರು.

ಬಾರ್ಕೂರಿನ ಸವಿತಾ ಫ್ರುಟಾರ್ಡೊ ಅವರ ಮಗಳಾದ ಈಕೆ ಸದ್ಯ ಬೆಂಗಳೂರಿನ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನಲ್ಲಿ ಓದುತ್ತಿದ್ದಾರೆ. ಬಾಲ್ಯದಿಂದಲೂ ಫ್ಯಾಶನ್ ಮತ್ತು ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದಾರೆ. 2012ರಲ್ಲಿ ದಕ್ಷಿಣ ಭಾರತದ
ಸೂಪರ್ ಮಾಡೆಲ್ ಮಕ್ಕಳ ವಿಭಾಗದಲ್ಲಿ ಕೂಡಾ ಪ್ರಶಸ್ತಿಯನ್ನು ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT