ತುಳು ಸಿನಿಮಾ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಇಂದು ತೆರೆಗೆ

ಉಡುಪಿ: ತುಳು ಚಿತ್ರರಂಗದ ಇತಿಹಾಸದಲ್ಲಿಯೇ ಯಶಸ್ವಿಯಾಗಿ ಪ್ರಿಮಿಯರ್ ಪ್ರದರ್ಶನ ನೀಡಿರುವ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ತುಳು ಸಿನಿಮಾ ಮೇ 20ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ರಾಹುಲ್ ಅಮೀನ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಭವ್ ಪ್ಲಿಕ್ಸ್ ಅಡಿಯಲ್ಲಿ ಮ್ಯಾಂಗೋ ಪಿಕ್ಕಲ್ ಬ್ಯಾನರ್ ಸಹಯೋಗದಲ್ಲಿ ಸಿನಿಮಾ ನಿರ್ಮಿಸಲಾಗಿದ್ದು, ಕುಟುಂಬ ಸಮೇತ ವೀಕ್ಷಿಸುವ ಚಿತ್ರ ಮಾಡಿದ್ದೇವೆ ಎಂದು ರಾಹುಲ್ ಅಮೀನ್ ತಿಳಿಸಿದರು.
ಈಗಾಗಲೇ 11 ವಿದೇಶಗಳಲ್ಲಿ ಹಾಗೂ ದೇಶದ 6 ಕಡೆಗಳಲ್ಲಿ ಯಶಸ್ವಿ ಪ್ರಿಮಿಯರ್ ಪ್ರದರ್ಶನ ಕಂಡಿರುವ ರಾಜ್ ಸೌಂಡ್ ಅಂಡ್ ಲೈಟ್ಸ್ ಸಿನಿಮಾ ಅಭಿಮಾನಿಗಳ ಪ್ರಶಂಸೆಗೆ ಕಾರಣವಾಗಿದೆ. ಮದುವೆ ಹಾಗೂ ಮದರಂಗಿಯ ಕಥಾ ಹಂದರವನ್ನು ಚಿತ್ರ ಹೊಂದಿದ್ದು, ಕರಾವಳಿಯಲ್ಲಿ ಬಹುತೇಕ ಚಿತ್ರೀಕರಣವಾಗಿದೆ. ₹ 1.5 ಕೋಟಿ ವೆಚ್ಚದಲ್ಲಿ ಸುಂದರವಾಗಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಚಿತ್ರಕ್ಕೆ ಆನಂದ್ ಎನ್.ಕುಂಪಲ ಬಂಡವಾಳ ಹಾಕಿದ್ದಾರೆ ಎಂದರು
ವಿನೀತ್ ಕುಮಾರ್ ಕಥೆ ಬರೆದಿದ್ದು, ಗಿರಿಗಿಟ್ ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ ಇದೆ. ಪಡ್ಡಾಯಿ ಸಿನಿಮಾ ಖ್ಯಾತಿಯ ವಿಷ್ಣುಪ್ರಾದ್ ಕ್ಯಾಮರಾ ಕೈಚಳಕ ಇದೆ. ಸೃಜನ್ ಕುಮಾರ್ ತೋನ್ಸೆ, ನವೀನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ನಾಯಕರಾಗಿ ವಿನೀತ್ ಕುಮಾರ್, ನಾಯಕಿಯಾಗಿ ಯಶ ಶಿವಕುಮಾರ್, ಕರಿಷ್ಮಾ ಅಮೀನ್ ಅಭಿನಯಿಸಿದ್ದಾರೆ.
ಹಾಸ್ಯ ದಿಗ್ಗಜರಾದ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸತೀಶ್ ಬಂದಲೆ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಫ್ ಶೆಟ್ಟಿ, ಮರ್ವಿನ್, ಉಮೇಶ್ ಮಿಜಾರ್, ರವಿ ರಾಮಕುಂಜ, ಚೈತ್ರ ಶೆಟ್ಟಿ ನಟಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿನೀತ್ ಕುಮಾರ್, ಚೈತ್ರಾ ಶೆಟ್ಟಿ, ಸುಹಾನ್ ಪ್ರಸಾದ್, ನಿತಿನ್ ರಾಜ್ ಶೆಟ್ಟಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.