ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ| ಇನ್‌ಸ್ಟಾಗ್ರಾಂ ಖಾತೆಯ ಸಂದೇಶ: ಮಹಿಳೆಗೆ ₹1.26 ಲಕ್ಷ ವಂಚನೆ

Published 12 ಸೆಪ್ಟೆಂಬರ್ 2023, 15:46 IST
Last Updated 12 ಸೆಪ್ಟೆಂಬರ್ 2023, 15:46 IST
ಅಕ್ಷರ ಗಾತ್ರ

ಕಾರ್ಕಳ: ಮೊಬೈಲ್‌ನ ಇನ್‌ಸ್ಟಾಗ್ರಾಂ ಖಾತೆಯಲ್ಲಿರುವ ಸೈಟ್‌ಗೆ ಬಂದ ಸಂದೇಶದ ಹಿನ್ನೆಲೆಯಲ್ಲಿ ಅಧಿಕ ಮೊತ್ತ ಕೊಡುವುದಾಗಿ ನಂಬಿಸಿದ ಕಂಪನಿಯೊಂದು ಮಹಿಳೆಯೊಬ್ಬರಿಗೆ ಮೋಸ ಮಾಡಿದ ಘಟನೆ ನಡೆದಿದೆ.

ಸೋಹಿನಿ ಮಿಶ್ರಾ ಎನ್ನುವವರು ಹಣ ಕಳೆದುಕೊಂಡವರು. ಮೊದಲು ₹500 ಅನ್ನು ಪಾವತಿಸಿದ ಮಹಿಳೆಯ ಖಾತೆಗೆ ಕಂಪನಿ ₹2 ಸಾವಿರ ಜಮಾ ಮಾಡಿತ್ತು. ಹೆಚ್ಚಿನ ಹಣ ಹಾಕಿದರೆ ಅಧಿಕ ಮೊತ್ತ ನೀಡುವುದಾಗಿ ಕಂಪನಿ ನಂಬಿಸಿದ ಹಿನ್ನೆಲೆಯಲ್ಲಿ ಮಹಿಳೆ ಹಂತ ಹಂತವಾಗಿ ಒಟ್ಟು ₹1.26ಲಕ್ಷ ಹಣವನ್ನು ಸದರಿ ಸೈಟ್‌ಗೆ ಹಾಕಿದ್ದರು. ಇದೀಗ ಕಂಪನಿಯಿಂದ ಹಣ ಬರದೇ ಮೋಸಕ್ಕೆ ಒಳಗಾಗಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT