ಗುರುವಾರ , ಫೆಬ್ರವರಿ 20, 2020
25 °C

ಇನ್ನೂ ಬಿಡುಗಡೆಯಾಗದ ಮಲ್ಪೆ ಬೋಟ್‌: ಕರಾವಳಿ ಕಾವಲು ಪಡೆ ಸ್ಪಷ್ಟನೆ

ಶ್ರೀಲಕ್ಷ್ಮೀ ಬೋಟ್ Updated:

ಅಕ್ಷರ ಗಾತ್ರ : | |

ಉಡುಪಿ: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಶ್ರೀಲಕ್ಷ್ಮೀ ಬೋಟ್ ಮಹಾರಾಷ್ಟ್ರದ ಕೋಸ್ಟ್‌ಗಾರ್ಡ್‌ ಇಲಾಖೆಯ ವಶದಲ್ಲಿದ್ದು, ಬಿಡುಗಡೆಯಾಗಿಲ್ಲ ಎಂದು ಕರಾವಳಿ ಕಾವಲು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ರಾಜ್ಯದ ಮೀನುಗಾರರನ್ನು ಬಂಧಿಸಿಲ್ಲ. ಬೋಟ್‌ ಹಾಗೂ ಅದರಲ್ಲಿದ್ದ ಮೀನನ್ನು ಮಾತ್ರ ವಶಕ್ಕೆ ಪಡೆಯಲಾಗಿದೆ. ಮೀನುಗಾರರು ಬೋಟ್‌ನೊಂದಿಗೆ ಅಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ: ಫೆ.12ರಂದು ನಸುಕಿನಲ್ಲಿ ಮಾಲ್ವಾನ್ ಸಮುದ್ರ ತೀರ ಪ್ರವೇಶಿಸಿದ ಮಲ್ಪೆಯ ಶ್ರೀಲಕ್ಷ್ಮೀ ಬೋಟ್‌ ಅನ್ನು ಕೋಸ್ಟ್‌ಗಾರ್ಡ್‌ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಾದ ಭಟ್ಕಳದ ರಾಮ, ವೆಂಕಟೇಶ್‌, ಕುಮಟಾದ ಗಣಪತಿ, ವಿನಾಯಕ, ಹೊನ್ನಾವರದ ಮಂಜು, ಗೋವಿಂದ, ಅಂಕೋಲಾದ ರಾಜು ಬೋಟ್‌ನಲ್ಲಿದ್ದರು. ಕುಂದಾಪುರದ ಅಂಕಿತ್ ಶೆಟ್ಟಿ ಬೋಟ್‌ನ ಮಾಲೀಕರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು