ಉಡುಪಿ: ಕಳ್ಳತನ ಹಾಗೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲಾ ಪೊಲೀಸ್ ಇಲಾಖೆಯು ಜಾರಿಗೆ ತಂದಿರುವ ‘ದೃಷ್ಟಿ’ ಯೋಜನೆಯು ಜಿಲ್ಲೆಯಾದ್ಯಂತ ವಿಸ್ತರಿಸುತ್ತಿದೆ.

ಖಾಸಗಿ ಸಹಭಾಗಿತ್ವದಲ್ಲಿ ಜಾರಿಗೆ ತಂದಿರುವ ಈ ಯೋಜನೆಯಿಂದ ನಾಗರಿಕರಿಗೆ ಇನ್ನಷ್ಟು ಸುರಕ್ಷತೆ ನೀಡುವ ಗುರಿಯನ್ನು ಪೊಲೀಸ್ ಇಲಾಖೆಯು ಹೊಂದಿದೆ.

ಉಡುಪಿಯ ಸುಬ್ರಹ್ಮಣ್ಯ ನಗರದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿರುವ ಈ ಯೋಜನೆಯನ್ನು ಇದೀಗ ಜಿಲ್ಲೆಯ ಒಂಬತ್ತು ಕಡೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಜುಲೈ 12ರಂದು ಈ ಯೋಜನೆಗೆ ಚಾಲನೆ ನೀಡಲಾಗಿತ್ತು.

ನಿವೃತ್ತ ಯೋಧರು ಸ್ಥಾಪಿಸಿರುವ ಜಂಬೋ ಸ್ಟಾರ್ ಸೆಕ್ಯುರಿಟಿ ಮತ್ತು ಫೆಸಿಲಿಟಿ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಈ ಯೋಜನೆಗಾಗಿ ಪೊಲೀಸರೊಂದಿಗೆ ಕೈಜೋಡಿಸಿದೆ.

ಕಳ್ಳತನ ಹೆಚ್ಚು ನಡೆಯುವ ಪ್ರದೇಶಗಳಲ್ಲಿ 100ರಿಂದ 150 ಮನೆಗಳನ್ನು ಕೇಂದ್ರೀಕರಿಸಿ ತರಬೇತಿ ಪಡೆದ ಸೆಕ್ಯುರಿಟಿ ಗಾರ್ಡ್ಗಳನ್ನು ನೇಮಕ ಮಾಡಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವುದೇ ಈ ‘ದೃಷ್ಟಿ’ ಯೋಜನೆಯ ಉದ್ದೇಶವಾಗಿದೆ.

ಈ ಯೋಜನೆ ಅಡಿಯಲ್ಲಿ ನಿಯೋಜಿಸುವ ಭದ್ರತಾ ಸಿಬ್ಬಂದಿ ಪ್ರಥಮ ಚಿಕಿತ್ಸೆ, ತುರ್ತು ಪರಿಸ್ಥಿತಿಗಳಲ್ಲಿ ವಿಪತ್ತು ನಿರ್ವಹಣೆಯ ತರಬೇತಿಯನ್ನೂ ಪಡೆದಿರುತ್ತಾರೆ. ಬಂದೂಕು, ವಾಕಿಟಾಕಿ, ಸರ್ಚ್ ಲೈಟ್ ಮೊದಲಾದವುಗಳೊಂದಿಗೂ ಗಸ್ತು ನಡೆಸುತ್ತಿದ್ದಾರೆ.

ನಿಯೋಜಿತ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿ ಗಸ್ತು ನಡೆಸುತ್ತಿದ್ದು, ಸಂಶಯಾಸ್ಪದ ವಾಹನಗಳ ತಪಾಸಣೆಯನ್ನೂ ಮಾಡುತ್ತಾರೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಬೀಟ್ ಪೊಲೀಸರಿಗೆ ಮತ್ತು ಕಂಟ್ರೋಲ್ ರೂಮ್ಗೆ ಮಾಹಿತಿ ಒದಗಿಸುತ್ತಿದ್ದಾರೆ.

‘ಜಂಬೋ ಸ್ಟಾರ್ ಸೆಕ್ಯುರಿಟಿ ಮತ್ತು ಫೆಸಿಲಿಟಿ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಅನ್ನು ನಿವೃತ್ತ ಯೋಧರೇ ಸೇರಿ ಆರಂಭಿಸಿದ್ದೇವೆ. ನಾವು ಯಾವುದೇ ಸೇವಾ ಶುಲ್ಕವನ್ನು ಪಡೆಯದೆ ಈ ಯೋಜನೆಯಲ್ಲಿ ಭಾಗಿಯಾಗಿದ್ದೇವೆ. ಮನೆಗಳಿಂದ ಸಂಗ್ರಹಿಸಿದ ಹಣವನ್ನು ಭದ್ರತಾ ಸಿಬ್ಬಂದಿ ಸಂಬಳಕ್ಕೆ ಮತ್ತು ಗಸ್ತು ವಾಹನಗಳ ಇಂಧನದ ಖರ್ಚಿಗೆ ಪಾವತಿಸುತ್ತೇವೆ’ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ವಿಜಯ ಫೆರ್ನಾಂಡಿಸ್ ತಿಳಿಸಿದರು.

‘50 ಕಡೆಗಳಲ್ಲಿ ದೃಷ್ಟಿ ಯೋಜನೆ’

‘ದೃಷ್ಟಿ’ ಯೋಜನೆಯನ್ನು ಉಡುಪಿಯ ಸುಬ್ರಹ್ಮಣ್ಯ ನಗರದಲ್ಲಿ ಆರಂಭಿಸಿದ್ದು ಅದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಜಿಲ್ಲೆಯ 50 ಕಡೆಗಳಲ್ಲಿ ಅನುಷ್ಠಾನಗೊಳಿಸುವ ಗುರಿ ಹೊಂದಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು. ಹೆಚ್ಚು ಕಳ್ಳತನ ಪ್ರಕರಣಗಳು ನಡೆಯುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಈ ಯೋಜನೆ ಆರಂಭಿಸಲಾಗುತ್ತದೆ ಎಂದು ವಿವರಿಸಿದರು. ಭದ್ರತಾ ಸಿಬ್ಬಂದಿಗೆ ಸಂಬಳ ಕೊಡುವ ನಿಟ್ಟಿನಲ್ಲಿ ಪ್ರತಿ ಮನೆಯಿಂದ ₹200ರಿಂದ ₹250 ಸಂಗ್ರಹಿಸಲಾಗುತ್ತಿದೆ. ಅಪರಾಧ ಕೃತ್ಯಗಳು ನಡೆದಾಗ ಪೊಲೀಸರಿಗೆ ತಕ್ಷಣ ಮಾಹಿತಿ ಲಭಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದರು.

‘ಜನರಿಗೆ ಅನುಕೂಲ’

ಪೊಲೀಸರು ಆರಂಭಿಸಿರುವ ‘ದೃಷ್ಟಿ’ ಯೋಜನೆಯು ಉತ್ತಮವಾಗಿದ್ದು ಸುರಕ್ಷತೆಯ ದೃಷ್ಟಿಯಿಂದ ಜನರಿಗೆ ಅನುಕೂಲವಾಗಿದೆ. ಸುಬ್ರಹ್ಮಣ್ಯ ನಗರದಲ್ಲಿ 100 ಮನೆಗಳನ್ನು ಸೇರಿಸಿ ಈ ಯೋಜನೆ ರೂಪಿಸಲಾಗಿದೆ. ನಮ್ಮಲ್ಲಿ ಈ ಯೋಜನೆ ಆರಂಭಗೊಂಡು ಒಂದು ತಿಂಗಳಾಯಿತು. ಪ್ರತಿದಿನ ರಾತ್ರಿ 7ರಿಂದ ಬೆಳಿಗ್ಗೆ 6ರವರೆಗೆ ಗಂಟೆಗೊಮ್ಮೆ ಸೆಕ್ಯುರಿಟಿ ಗಾರ್ಡ್ಗಳು ದ್ವಿಚಕ್ರ ವಾಹನದಲ್ಲಿ ಗಸ್ತು ತಿರುಗುತ್ತಿದ್ದಾರೆ. ಇದರಿಂದ ನಮ್ಮ ಪ್ರದೇಶಗಳಲ್ಲಿ ರಾತ್ರಿ ವೇಳೆ ವಾಹನಗಳ ಅನಗತ್ಯ ಓಡಾಟ ಕಡಿಮೆಯಾಗಿದೆ ಎಂದು ಉಡುಪಿಯ ಸುಬ್ರಹ್ಮಣ್ಯನಗರ ವಾರ್ಡ್ನ ನಗರಸಭಾ ಸದಸ್ಯೆ ಜಯಂತಿ ಪೂಜಾರಿ ತಿಳಿಸಿದರು.

‘ಇನ್ನಷ್ಟು ಮನೆಗಳನ್ನು ಸೇರಿಸಿ’

ಸುಬ್ರಹ್ಮಣ್ಯ ನಗರದಲ್ಲಿ 100 ಮನೆಗಳನ್ನು ಸೇರಿಸಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಇದೊಂದು ಒಳ್ಳೆಯ ಯೋಜನೆಯಾಗಿರುವ ಕಾರಣ ಇನ್ನಷ್ಟು ಮನೆಗಳನ್ನು ಇದರ ವ್ಯಾಪ್ತಿಗೆ ತರಬೇಕು. ಈ ಯೋಜನೆಯಿಂದ ಕಳ್ಳತನ ಮಾದಕ ದ್ರವ್ಯ ಮಾರಾಟ ಮೊದಲಾದ ಅಪರಾಧ ಕೃತ್ಯಗಳಿಗೆ ಕಡಿವಾಣ ಬೀಳಲಿದೆ ಎಂದು ಸುಬ್ರಹ್ಮಣ್ಯ ನಗರ ನಿವಾಸಿ ಹಾಗೂ ಉಡುಪಿ ನಗರ ಸಭೆಯ ಮಾಜಿ ಅಧ್ಯಕ್ಷ ಯುವರಾಜ್ ತಿಳಿಸಿದರು.

‘ಗೃಹರಕ್ಷರನ್ನು ಬಳಸಿಕೊಳ್ಳಿ’

ಪೊಲೀಸ್ ಇಲಾಖೆಯು ಜಾರಿಗೆ ತಂದಿರುವ ‘ದೃಷ್ಟಿ’ ಯೋಜನೆಯು ಉತ್ತಮ ಯೋಜನೆಯಾಗಿದ್ದು ಅದರಲ್ಲಿ ಕಾರ್ಯನಿರ್ವಹಿಸಲು ಗೃಹರಕ್ಷಕ ಸಿಬ್ಬಂದಿಯನ್ನು ಬಳಸಿದರೆ ಇನ್ನಷ್ಟು ಉತ್ತಮವಾಗಲಿದೆ. ಗೃಹ ರಕ್ಷಕರಿಗೂ ಕೆಲಸ ಸಿಕ್ಕಂತಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ರಾಜ್ ಸರಳಬೆಟ್ಟು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಸಂಚಾರ ನಿಯಂತ್ರಣ ಭದ್ರತೆ ಮೊದಲಾದ ಕೆಲಸಗಳಿಗೆ ಗೃಹರಕ್ಷಕರನ್ನು ಬಳಸಲಾಗುತ್ತಿದೆ. ಈ ಕಾರಣಕ್ಕೆ ಅವರಿಗೆ ಪೊಲೀಸ್ ಇಲಾಖೆಯ ಜೊತೆಗೆ ಹೆಚ್ಚಿನ ಸಂಪರ್ಕವಿರುತ್ತದೆ. ಅವರನ್ನು ಈ ಯೋಜನೆಯಲ್ಲಿ ಸೇರಿಸಿದರೆ ಇನ್ನಷ್ಟು ಪರಿಣಾಮಕಾರಿಯಾಗಬಹುದು. ಜೊತೆಗೆ ಭದ್ರತಾ ಸಿಬ್ಬಂದಿ ಸಂಬಳಕ್ಕಾಗಿ ಮನೆಯವರಿಂದ ಹಣ ಸಂಗ್ರಹಿಸುವ ಬದಲು ಸರ್ಕಾರವೇ ಇದಕ್ಕೆ ಅನುದಾನ ಒದಗಿಸಬೇಕು ಎಂದು ಅವರು ಹೇಳಿದ್ದಾರೆ.

‘ಸ್ಥಳೀಯರನ್ನೇ ನೇಮಿಸುತ್ತೇವೆ’

‘ದೃಷ್ಟಿ’ ಯೋಜನೆ ಅಡಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಲು ಸ್ಥಳೀಯರನ್ನೇ ನಾವು ನೇಮಿಸಿಕೊಳ್ಳುತ್ತೇವೆ. ಸ್ಥಳೀಯ ಯುವಕರನ್ನು ಆಯ್ಕೆ ಮಾಡಿದ ಬಳಿಕ ಪೊಲೀಸ್ ದೃಢೀಕರಣ ಪಡೆದು ಬಳಿಕ ಅವರಿಗೆ ತರಬೇತಿ ನೀಡಿ ಗಸ್ತು ಕೆಲಸಕ್ಕೆ ನಿಯೋಜಿಸುತ್ತೇವೆ ಎಂದು ವಿಜಯ ಫೆರ್ನಾಂಡಿಸ್ ತಿಳಿಸಿದರು. ಸುಮಾರು 100 ಮನೆಗೆ ಒಬ್ಬ ಭದ್ರತಾ ಸಿಬ್ಬಂದಿ ಇರುತ್ತಾರೆ. ಅವರು ಸಂಜೆ 6ರಿಂದ 10ರವರೆಗೆ ಅಂಗಡಿ ಪೇಟೆಯಲ್ಲಿ ನಿರೀಕ್ಷಣೆ ಮಾಡುತ್ತಾರೆ. ರಾತ್ರಿ 10ರ ಬಳಿಕ ಸಮವಸ್ತ್ರದಲ್ಲಿ ಗಸ್ತು ನಡೆಸುತ್ತಾರೆ. ಗಸ್ತು ನಡೆಸುವ ಸಿಬ್ಬಂದಿ ಮೇಲೆ ನಮ್ಮ ಸಂಸ್ಥೆ ಮತ್ತು ಪೊಲೀಸರು ನಿಗಾ ವಹಿಸುತ್ತಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.