ಮಂಗಳವಾರ, ಜೂನ್ 22, 2021
24 °C

ಶೀರೂರು ಮಠದ ಉತ್ತರಾಧಿಕಾರಿ ಸನ್ಯಾಸ ದೀಕ್ಷೆ ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಹಿರಿಯಡಕ (ಉಡುಪಿ): ಶೀರೂರು ಮಠದ ಉತ್ತರಾಧಿಕಾರಿಯಾಗಿ ನಿಯೋಜನೆಗೊಂಡಿರುವ ಅನಿರುದ್ಧ ಸರಳಾತ್ತಾಯ ಗುರುವಾರ ಹಿರಿಯಡಕದಲ್ಲಿರುವ ಶೀರೂರು ಮೂಲಮಠದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು.

ಸನ್ಯಾಸ ದೀಕ್ಷೆಯ ಅಂಗವಾಗಿ ಶಾಕಲ ಹೋಮ, ವಿರಜಾ ಹೋಮ, ಪ್ರೈಶೋಚ್ಚಾರಣೆ ಸೇರಿದಂತೆ ಹಲವು ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.

ಸೋದೆ ವಾದಿರಾಜ ಮಠಾಧೀಶರಾದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಯತಿಗಳಿಗೆ ಕಲಶಾಭಿಷೇಕ ನೆರವೇರಿಸಿ ಪ್ರಣವ ಮಂತ್ರೋಪದೇಶ ಮಾಡಿದರು.

ಶುಕ್ರವಾರ ಅನಿರುದ್ಧ ಸರಳತ್ತಾಯರ ಪಟ್ಟಾಭಿಷೇಕ ನಡೆಯಲಿದ್ದು, ಶೀರೂರು ಮಠದ ನೂತನ ಉತ್ತರಾಧಿಕಾರಿಯಾಗಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು