ಉಡುಪಿ: ಅರಣ್ಯ ಹಕ್ಕುಪತ್ರ ಪಡೆದಿರುವ ಅನುಸೂಚಿತ ಬುಡಕಟ್ಟುಗಳ ಫಲಾನುಭವಿಗಳಿಗೆ ಮತ್ತು ಅರಣ್ಯವಾಸಿಗಳಿಗೆ ವಿವಿಧ ಇಲಾಖೆಗಳ ಸೌಲಭ್ಯ ಪಡೆಯಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದಾರೆ.

ತೋಟಗಾರಿಕೆ, ಕೃಷಿ, ಸಹಕಾರ, ಕಂದಾಯ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಹಾಯಧನ ಮತ್ತು ಸೌಲಭ್ಯಗಳು ಸಿಗುತ್ತಿಲ್ಲ ಎಂದು ಅರಣ್ಯ ಹಕ್ಕುಪತ್ರ ಹೊಂದಿರುವವರು ದೂರಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಸಮಸ್ಯೆ ಇದ್ದು, ಉಡುಪಿಯಲ್ಲೂ ಮಲೆಕುಡಿಯ ಸಮುದಾಯದವರೂ ಸೇರಿದಂತೆ ವಿವಿಧ ಸಮುದಾಯದವರಿಗೆ ತೊಂದರೆಯಾಗಿದೆ. ಹವಾಮಾನ ಆಧರಿತ ಬೆಳೆವಿಮೆ ಸೇರಿದಂತೆ ವಿವಿಧ ಬೆಳೆ ವಿಮೆ ಸೌಲಭ್ಯಗಳೂ ಸಿಗುತ್ತಿಲ್ಲ.

ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಅರಣ್ಯ ಹಕ್ಕುಪತ್ರಗಳ ಜಮೀನುಗಳ ಸಮೀಕ್ಷೆಗೆ ಅವಕಾಶ ಇಲ್ಲದ ಕಾರಣ ಕೃಷಿಯನ್ನೇ ನಂಬಿರುವ ಈ ಸಮುದಾಯದವರಿಗೆ ಬೆಳೆಹಾನಿ ಪರಿಹಾರವೂ ಸಿಗುತ್ತಿಲ್ಲ. ಈ ಬಾರಿ ಅತಿಯಾದ ಮಳೆಯಿಂದಾಗಿ, ಅಡಿಕೆ, ಕಾಳು ಮೆಣಸು, ತೆಂಗು ಮೊದಲಾದ ತೋಟಗಾರಿಕಾ ಬೆಳೆಗಳಿಗೆ ಕೊಳೆರೋಗ ಬಾಧಿಸಿ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಅರಣ್ಯ ಹಕ್ಕುಪತ್ರ ಹೊಂದಿರುವವರು ತಿಳಿಸಿದ್ದಾರೆ.

ಅರಣ್ಯ ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಸೌಲಭ್ಯವೂ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ತಾಂತ್ರಿಕ ಸಮಸ್ಯೆ ಇದೆ: ‘ಕಲಂ ಸಂಖ್ಯೆ 9ರ ಅಡಿಯಲ್ಲಿ ಹಕ್ಕುಪತ್ರ ಪಡೆದವರಿಗೆ ಸೌಲಭ್ಯಗಳನ್ನು ಪಡೆಯಲು ಸಮಸ್ಯೆ ಇಲ್ಲ. ಆದರೆ ಅರಣ್ಯ ಹಕ್ಕುಪತ್ರವನ್ನು ನಾವು ಕಲಂ ಸಂಖ್ಯೆ 11ರ ಅಡಿಯಲ್ಲಿ ನೀಡಿರುವುದರಿಂದ ತಾಂತ್ರಿಕ ಸಮಸ್ಯೆ ಎದುರಾಗಿದೆ. ಅರಣ್ಯ ಹಕ್ಕುಪತ್ರ ಹೊಂದಿರುವ ಫಲಾನುಭವಿಗಳ ಫ್ರೂಟ್ಸ್ ಐಡಿ ಸೃಷ್ಟಿಸಿ ಎಲ್ಲಾ ಮಾಹಿತಿಗಳನ್ನು ನಾವು ಕೃಷಿ, ತೋಟಗಾರಿಕೆ ಇಲಾಖೆಗಳಿಗೆ ಕಳುಹಿಸಿದ್ದೇವೆ. ಆದರೆ, ಭೂಮಿ ಸಾಫ್ಟ್ವೇರ್ ಕಲಂ ಸಂಖ್ಯೆ 9ರಲ್ಲಿರುವವರಿಗೆ ಮಾತ್ರ ಸಪೋರ್ಟ್ ಮಾಡುತ್ತಿದೆ. ಕಲಂ ಸಂಖ್ಯೆ 11ರಲ್ಲಿರುವವರಿಗೆ ಸಪೋರ್ಟ್ ಮಾಡುತ್ತಿಲ್ಲ’ ಎಂದು ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ (ಐಟಿಡಿಪಿ) ಉಡುಪಿ ಯೋಜನಾ ಸಮನ್ವಯ ಅಧಿಕಾರಿ ನಾರಾಯಣ ಸ್ವಾಮಿ ತಿಳಿಸಿದರು.

‘ಈ ಸಮಸ್ಯೆ ವಿವಿಧ ಜಿಲ್ಲೆಗಳಲ್ಲಿರುವುದರಿಂದ ಸರ್ಕಾರದ ಮಟ್ಟದಲ್ಲಿ ಸುತ್ತೋಲೆ ಹೊರಡಿಸಿ, ಸಾಫ್ಟ್ವೇರ್ನಲ್ಲಿ ಬದಲಾವಣೆ ಮಾಡಿಸಿ, ಅರಣ್ಯ ಹಕ್ಕುಪತ್ರ ಹೊಂದಿರುವವರಿಗೂ ಎಲ್ಲಾ ಸೌಲಭ್ಯಗಳು ಸಿಗುವಂತೆ ಮಾಡಲಾಗುವುದು ಎಂದು ನಮ್ಮ ಇಲಾಖೆಯ ನಿರ್ದೇಶಕರು ಭರವಸೆ ನೀಡಿದ್ದಾರೆ’ ಎಂದು ಅವರು ಹೇಳಿದರು.

‘ಉಡುಪಿ ಜಿಲ್ಲೆಯಲ್ಲಿ 539 ಫಲಾನುಭವಿಗಳಿಗೆ 709.31 ಎಕರೆ ಅರಣ್ಯ ಹಕ್ಕು ಪತ್ರವನ್ನು ನೀಡಲಾಗಿದೆ’ ಎಂದು ಐಟಿಡಿಪಿ ಮೂಲಗಳು ತಿಳಿಸಿವೆ.

ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಅರಣ್ಯ ಹಕ್ಕುಪತ್ರ ಹೊಂದಿರುವ ರೈತರ ಜಮೀನಿನ ಸಮೀಕ್ಷೆಗೆ ಅವಕಾಶ ಕಲ್ಪಿಸಬೇಕು. ಸಹಕಾರ ಸಂಘದ ಮೂಲಕ ಬಡ್ಡಿ ಸಹಾಯಧನ ಒದಗಿಸುವ ಜೊತೆಗೆ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನೂ ಕಲ್ಪಿಸಬೇಕು
ಗಂಗಾಧರ ಗೌಡ ಅಧ್ಯಕ್ಷ ಜಿಲ್ಲಾ ಮಲೆಕುಡಿಯ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.