ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಹಿರೇಕಾಯಿ ತೊಂಡೆಕಾಯಿ ದರ ಏರಿಕೆ

ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳ ದರ ಸ್ಥಿರ
Last Updated 29 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಉಡುಪಿ: ಕಳೆದ ವಾರದ ಬೆಲೆಗಳಿಗೆ ಹೋಲಿಸಿದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದೆ. ಹೀರೆಕಾಯಿ, ತೊಂಡೆಕಾಯಿ ದರದಲ್ಲಿ ಹೆಚ್ಚಳವಾಗಿದೆ.

ಕೆ.ಜಿ ಈರೇಕಾಯಿ ದರ ₹60 ರಿಂದ ₹70ಕ್ಕೆ ಜಿಗಿದಿದ್ದರೆ, ತೊಂಡೆಕಾಯಿ ದರ ₹60 ರಿಂದ 90ಕ್ಕೆ ಏರಿಕೆಯಾಗಿದೆ. ಟೊಮೆಟೊ ಬೆಲೆ ₹30ರಿಂದ ₹20ಕ್ಕೆ ಕುಸಿದಿದೆ. ಈರುಳ್ಳಿ ದರ ₹40 ರಿಂದ ₹35ಕ್ಕೆ ಇಳಿದಿದೆ. ಎಲೆಕೋಸು ದರ ಕೆ.ಜಿಗೆ ₹20 ರಿಂದ ₹25, ಹೂಕೋಸಿನ ದರ ಕೆ.ಜಿಗೆ ₹60 ಮುಟ್ಟಿದೆ.

ಚಳಿಗಾಲದಲ್ಲೂ ಸೌತೆಕಾಯಿ ದರ ಕಡಿಮೆಯಾಗಿಲ್ಲ. ಕೆ.ಜಿಗೆ ₹30 ರಿಂದ ₹ 40ರ ದರದಲ್ಲಿ ಖರೀದಿಯಾಗುತ್ತಿದೆ. ಸಾಂಬಾರ್ ಸೌತೆ ದರವೂ ಹೆಚ್ಚಾಗಿದ್ದು ಕೆ.ಜಿಗೆ 35 ಇತ್ತು. ಬೆಂಡೆಕಾಯಿ ಕೆ.ಜಿಗೆ ₹40 ರಿಂದ ₹50ಕ್ಕೆ ಹೆಚ್ಚಾಗಿದ್ದು, ಕ್ಯಾರೆಟ್‌ ಕೆ.ಜಿಗೆ ₹40, ಕ್ಯಾಪ್ಸಿಕಂ ₹60, ಬೀಟ್‌ರೂಟ್‌ 30, ಕುಂಬಳಕಾಯಿ ಕೆ.ಜಿಗೆ ₹35, ಬೂದು ಗುಂಬಳ ಕೆ.ಜಿಗೆ ₹40, ಸೋರೆಕಾಯಿ ಕೆ.ಜಿಗೆ ₹35, ಆಲೂಗಡ್ಡೆ ಕೆ.ಜಿಗೆ ₹45, ಬೀನ್ಸ್‌ ₹60, ಬದನೆಕಾಯಿ ₹40 ದರ ಇತ್ತು.

ಸೊಪ್ಪು ದರದಲ್ಲಿ ಸ್ವಲ್ಪ ಕಡಿಮೆಯಾಗಿದ್ದು ದಂಟು ದೊಡ್ಡ ಕಟ್ಟಿಗೆ ₹ 15, ಕೊತ್ತಮರಿ ₹ 5, ಕರಿಬೇವು ₹5, ಪುದಿನ ₹5, ಸಬ್ಬಸ್ಸಿಗೆ ₹8, ಮೆಂತೆ ₹ 8, ಪಾಲಕ್‌ ₹5 ದರ ಇದೆ. ಶುಂಠಿ ಕೆ.ಜಿಗೆ ₹ 50, ಮೂಲಂಗಿ ₹ 40, ಹಾಗಲಕಾಯಿ 50, ಹಸಿರು ಬಟಾಣಿ ಸಿಪ್ಪೆ ಸಹಿತ ₹ 60, ಗೆಣಸು ₹ 40, ಬೆಳ್ಳಳ್ಳಿ ₹ 60 ಹಾಗೂ ತೆಂಗಿನ ಕಾಯಿಗೆ ₹ 25 ದರ ನಿಗದಿಯಾಗಿತ್ತು.

ಹಣ್ಣುಗಳ ದರ: ಹಣ್ಣುಗಳ ದರ ಸ್ಥಿರವಾಗಿದ್ದು ಸೇಬು (ಕಿನ್ನೂರು) ಕೆ.ಜಿಗೆ ₹ 135, ರಾಯಲ್ ಗಾಲಾ ₹ 250, ರೆಡ್ ಡಿಲಿಷಿಯಸ್‌ ₹250, ಫುಜಿ ಸೇಬು ₹ 270 ದರ ಇತ್ತು. ಸಪೋಟ ₹60, ದ್ರಾಕ್ಷಿ ₹140, ಸೀಬೆಹಣ್ಣು ₹100, ಮಸ್ಕ್ ಮೆಲನ್ ₹ 40, ದಾಳಿಂಬೆ ₹ 200, ಕಿತ್ತಳೆ ₹70, ಮೋಸಂಬಿ 80, ಪೈನಾಪಲ್‌ 40, ಪಪ್ಪಾಯ ₹40, ವಾಟರ್ ಮೆಲನ್ ₹ 20, ಬಾಳೆಹಣ್ಣು ಏಲಕ್ಕಿ ₹ 65, ಪಚ್ಚಬಾಳೆ ₹ 35 ಬೆಲೆ ಇತ್ತು.

ಹೊಸ ವರ್ಷ ಹತ್ತಿರುವಾಗುತ್ತಿರುವ ಹಿನ್ನೆಲೆಯಲ್ಲಿ ಬೇಕರಿಗಳಲ್ಲಿ ಸಿಹಿ ತಿನಿಸುಗಳ ತಯಾರಿ ಹಾಗೂ ಮಾರಾಟ ಜೋರಾಗಿದೆ. ಹೊಸ ವರ್ಷಾಚರಣೆಗೆ ಕೇಕ್‌ಗೆ ಬೇಡಿಕೆ ಹೆಚ್ಚಾಗಿದೆ.

ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದು ಬ್ರಾಯ್ಲರ್ ಕೋಳಿ ಕೆ.ಜಿಗೆ (ಚರ್ಮ) ₹200, ಸ್ಕಿನ್‌ ಲೆಸ್‌ ₹220 ದರ ಇದ್ದರೆ, ಕುರಿ, ಆಡು ಮಾಂಸ ₹ 650 ರಿಂದ ₹750ರವರೆಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT