ಸೋಮವಾರ, ಸೆಪ್ಟೆಂಬರ್ 26, 2022
22 °C

ವಿದುಷಿ ವಸಂತ ಲಕ್ಷ್ಮಿ ಹೆಬ್ಬಾರ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸಂಗೀತ ವಿದುಷಿ, ಕಲಾವಿದೆ ವಸಂತ ಲಕ್ಷ್ಮೀ ಹೆಬ್ಬಾರ್ (63) ಬುಧವಾರ ನಿಧನರಾದರು. ಮೃತರಿಗೆ ಪತಿ ಪ್ರೊ.ಅರವಿಂದ ಹೆಬ್ಬಾರ್,  ಪುತ್ರ ಇದ್ದಾರೆ. ಸಂಗೀತ ಹಾಗೂ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ವಸಂತ ಲಕ್ಷ್ಮೀ ಹೆಬ್ಬಾರ್, ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಹಾಗೂ ಚಿತ್ರಕಲೆಯಲ್ಲಿ ಸಾಧನೆ ಮಾಡಿದ್ದರು.

ಪತಿ ಅರವಿಂದ ಹೆಬ್ಬಾರ್ ಅವರೊಂದಿಗೆ 1996ರಲ್ಲಿ ಲತಾಂಗಿ ಸ್ಕೂಲ್ ಆಫ್‌ ಕರ್ನಾಟಿಕ್ ಮ್ಯೂಸಿಕ್ ಸಂಸ್ಥೆಯನ್ನು ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದರು. ಅವರ ಕಲಾ ಸಾಧನೆಗೆ ಗದಗದ ಕಲಾ ವಿಕಾಸ ಪರಿಷತ್‌ನಿಂದ ಸುವರ್ಣ ಕಲಾ ಗುರು ಗೌರವ ಸಂದಿತ್ತು. ಹಲವು ಕಡೆಗಳಲ್ಲಿ ಚಿತ್ರ ಕಲೆಗಳ ಪ್ರದರ್ಶನ ಏರ್ಪಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು