ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಎಸ್ಸೆಸ್ಸೆಲ್ಸಿ: 17 ಶಾಲೆಗಳಿಗೆ ಶೇ 100 ಫಲಿತಾಂಶ

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 7595 ವಿದ್ಯಾರ್ಥಿಗಳು ಉತ್ತೀರ್ಣ
Last Updated 11 ಆಗಸ್ಟ್ 2020, 11:15 IST
ಅಕ್ಷರ ಗಾತ್ರ

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 17 ಶಾಲೆಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ 100ರ ಸಾಧನೆ ಮಾಡಿವೆ. ಗುಣಾತ್ಮಕತೆಯಲ್ಲಿ ಶೈಕ್ಷಣಿಕ ಜಿಲ್ಲೆಯು ‘ಬಿ’ ಗ್ರೇಡ್ ಫಲಿತಾಂಶ ಪಡೆದಿದೆ.

ಒಟ್ಟು 9400 ಹೊಸ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 7595 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 1805 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ 43 ಸರ್ಕಾರಿ ಶಾಲೆಗಳು, 21 ಅನುದಾನಿತ, 20 ಅನುದಾನರಹಿತ ಶಾಲೆಗಳು ‘ಎ’ ಗ್ರೇಡ್, 31 ಸರ್ಕಾರಿ ಶಾಲೆಗಳು, 24 ಅನುದಾನಿತ, 08 ಅನುದಾನರಹಿತ ಶಾಲೆಗಳು ‘ಬಿ’ ಗ್ರೇಡ್, 08 ಸರ್ಕಾರಿ ಶಾಲೆಗಳು, 13 ಅನುದಾನಿತ, 05 ಅನುದಾನರಹಿತ ಶಾಲೆಗಳು ‘ಸಿ’ ಗ್ರೇಡ್ ಪಡೆದಿವೆ.

ಎಂಟು ಸರ್ಕಾರಿ, ಒಂದು ಅನುದಾನಿತ ಹಾಗೂ ಎಂಟು ಅನುದಾನರಹಿತ ಶಾಲೆಗಳು ಶೇ 100ರ ಫಲಿತಾಂಶ ಗಳಿಸಿವೆ. ಹೆಗಡೆಕಟ್ಟಾ ಗಜಾನನ ಪ್ರೌಢಶಾಲೆಯ ವಿದ್ಯಾರ್ಥಿನಿ ಅಖಿಲಾ ಭಾಸ್ಕರ ಹೆಗಡೆ (622 ಅಂಕ) ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಜೊಯಿಡಾ ಗುಂದದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಧನಾ ಹೆಗಡೆ (620 ಅಂಕ) ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ್ದಾಳೆ.

ಸಿದ್ದಾಪುರ ತಾಲ್ಲೂಕು ‘ಎ’ ಗ್ರೇಡ್ ಪಡೆದಿದೆ. ಶಿರಸಿ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳು ‘ಬಿ’ ಗ್ರೇಡ್ ಪಡೆದಿವೆ.

ಶೈಕ್ಷಣಿಕ ಜಿಲ್ಲೆಗೆ ಮೊದಲ ಐದು ಸ್ಥಾನ ಪಡೆದವರು

* ಸನ್ನಿಧಿ ಮಹಾಬಲೇಶ್ವರ ಹೆಗಡೆ, ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ ಶಿರಸಿ (625 ಅಂಕ)

* ಅನಿರುದ್ಧ ಗುತ್ತೀಕರ, ಪ್ರಶಾಂತಿ ಇಂಗ್ಲಿಷ್ ಮಾಧ್ಯಮ ಶಾಲೆ ಸಿದ್ದಾಪುರ (624 ಅಂಕ)

* ಅಖಿಲಾ ಭಾಸ್ಕರ ಹೆಗಡೆ, ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ, ಶಿರಸಿ (622 ಅಂಕ)

* ಅರ್ಚನಾ ಶಾಂತಾರಾಮ ಶೆಟ್ಟಿ, ಸೇಂಟ್ ಅಂಥೋನಿ ಪ್ರೌಢಶಾಲೆ, ಶಿರಸಿ (622 ಅಂಕ)

* ಪೂರ್ವಿ ಎಸ್.ಹೆಗಡೆ, ಮದರ್ ತೆರೇಸಾ ಪ್ರೌಢಶಾಲೆ ಯಲ್ಲಾಪುರ (622 ಅಂಕ)

* ತೇಜಸ್ವಿ ರಾಯ್ಸದ್, ಚಂದನ ಪ್ರೌಢಶಾಲೆ ನರೇಬೈಲ್, ಶಿರಸಿ (621 ಅಂಕ)

* ಖುಷಿ ದಿಲೀಪ್ ಅಗರವಾಲ್, ಜನತಾ ವಿದ್ಯಾಲಯ ದಾಂಡೇಲಿ (621 ಅಂಕ)

* ಸಾಧನಾ ಹೆಗಡೆ, ಸರ್ಕಾರಿ ಪ್ರೌಢಶಾಲೆ ಗುಂದ, ಜೊಯಿಡಾ (620 ಅಂಕ)

* ನಿನಾದ್ ದೀಕ್ಷಿತ್, ಲಯನ್ಸ್ ಪ್ರೌಢಶಾಲೆ ಶಿರಸಿ (620 ಅಂಕ)

* ದೀಪ್ತಿ ಭಟ್ಟ, ಲಯನ್ಸ್ ಪ್ರೌಢಶಾಲೆ ಶಿರಸಿ (620 ಅಂಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT